ನೋಟ್ ಬ್ಯಾನ್ ಆಯ್ತು, ಇದೇನು ಮೋದಿ ಸರಕಾರದ ಚೆಕ್ ಬ್ಯಾನ್ ಸುದ್ದಿ!

Posted By:
Subscribe to Oneindia Kannada

ನವದೆಹಲಿ, ನ 21: ಅಪನಗದೀಕರಣದ ನಂತರ ಕ್ಯಾಷ್ ಲೆಸ್ ವ್ಯವಹಾರಕ್ಕೆ ಹೆಚ್ಚಿನ ಒತ್ತು ನೀಡುತ್ತಿರುವ ಕೇಂದ್ರದ ನರೇಂದ್ರ ಮೋದಿ ಸರಕಾರ, ಚೆಕ್ ವ್ಯವಹಾರಕ್ಕೂ ಕಡಿವಾಣ ಹಾಕುವ ಸಾಧ್ಯತೆಯಿದೆ.

ಮೋದಿ ಸರ್ಕಾರದ ಮತ್ತೊಂದು ಮಾಸ್ಟರ್ ಪ್ಲಾನ್

ಡಿಜಿಟಲ್ ವ್ಯವಹಾರಕ್ಕೆ ಉತ್ತೇಜನ ನೀಡಲು, ಸದ್ಯದಲ್ಲೇ ಚೆಕ್ ಬುಕ್ ಪದ್ದತಿಯನ್ನು ಕೇಂದ್ರ ಸರಕಾರ ರದ್ದು ಮಾಡುವ ಸಾಧ್ಯತೆಯಿದೆ ಎಂದು ಪಿಟಿಐ ವರದಿಯನ್ನು ಉಲ್ಲೇಖಿಸಿ ಇಕನಾಮಿಕ್ ಟೈಮ್ಸ್ ಪತ್ರಿಕೆ ವರದಿ ಮಾಡಿದೆ.

ಡಿಜಿಟಲ್ ವ್ಯವಹಾರ ಉತ್ತೇಜನಕ್ಕೆ ಮತ್ತೆ ಪ್ರಚಾರಾಂದೋಲನ

Cheque book could be the next casualty in Modi govt's push for digital transactions

'ಡಿಜಿಟಲ್ ರಥ್' ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತ್ತಿದ್ದ ಸಿಎಐಟಿ (Confederation of All India Traders) ಪ್ರಧಾನ ಕಾರ್ಯದರ್ಶಿ ಪ್ರವೀಣ್ ಖಂಡೇಲ್ವಾಲ್, ಚೆಕ್ ಪದ್ದತಿಯನ್ನು ಸದ್ಯದಲ್ಲೇ ಕೇಂದ್ರ ಹಿಂದಕ್ಕೆ ಪಡೆಯಲಿದೆ ಎನ್ನುವ ಸುಳಿವನ್ನು ನೀಡಿದ್ದಾರೆ.

ಚೆಕ್ ಬೌನ್ಸ್ ಆದ್ರೆ ಕಂಬಿ ಎಣಿಸಬೇಕಾದೀತು, ಹುಷಾರು!

ಸರಕಾರ ನೋಟು ಮುದ್ರಣಕ್ಕೆ 25ಸಾವಿರ ಕೋಟಿ, ಅದರ ಭದ್ರತೆ ಮತ್ತು ಇತರ ವ್ಯವಸ್ಥೆಗೆ ಆರು ಸಾವಿರ ಕೋಟಿ ರೂಪಾಯಿ ಖರ್ಚು ಮಾಡುತ್ತಿದೆ. ಡೆಬಿಟ್ ಕಾರ್ಡ್ ವ್ಯವಹಾರಕ್ಕೆ 1%,, ಕ್ರೆಡಿಟ್ ಕಾರ್ಡ್ ವ್ಯವಹಾರಕ್ಕೆ 2% ಶುಲ್ಕವನ್ನು ಗ್ರಾಹಕರಿಗೆ ವಿಧಿಸಲಾಗುತ್ತಿದೆ.

ಕೇಂದ್ರ ಸರಕಾರ ಕ್ಯಾಷ್ ಲೆಸ್ ವ್ಯವಹಾರಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದೆ. ಕಾರ್ಡ್ ಮೂಲಕ ನಡೆಸುವ ವ್ಯವಹಾರಕ್ಕೆ ವಿಧಿಸಲಾಗುವ ಶುಲ್ಕವನ್ನು ರದ್ದುಗೊಳಿಸಿ, ಕೇಂದ್ರ ಸರಕಾರ ನೇರವಾಗಿ ಬ್ಯಾಂಕಿಗೆ ಇದರ ಸಬ್ಸಿಡಿ ನೀಡುವಂತಾಗಾಬೇಕೆಂದು ಪ್ರವೀಣ್ ಹೇಳಿದ್ದಾರೆ.

ಅಪಗನದೀಕರಣದ ನಂತರ ಚೆಕ್ ವ್ಯವಹಾರ ಗಣನೀಯವಾಗಿ ಹೆಚ್ಚಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿರುವ ಪ್ರವೀಣ್ ಖಂಡೇಲ್ವಾಲ್, 25 ಬಿಲಿಯನ್ ಡಿಜಿಟಲ್ ಪೇಮೆಂಟ್ ಗುರಿಯನ್ನು ಇಟ್ಟುಕೊಂಡಿರುವ ಕೇಂದ್ರ ಸರಕಾರ, ಚೆಕ್ ವ್ಯವಹಾರವನ್ನು ರದ್ದುಗೊಳಿಸಿದರೆ, ಶೀಘ್ರದಲ್ಲೇ ತನ್ನ ಗುರಿಯನ್ನು ತಲುಪಬಹುದಾಗಿದೆ ಎಂದು ಪ್ರವೀಣ್ ಹೇಳಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
In all probability, the Centre may withdraw the cheque book facility in the near future to encourage digital transactions, Praveen Khandelwal, secretary general of Confederation of All India Traders (CAIT).

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ