Char Dham Yatra 2023: QR ಕೋಡ್ ಇಲ್ಲದ್ದಿದ್ದರೆ ದೇವಸ್ಥಾನಕ್ಕೆ ಪ್ರವೇಶ ರದ್ದು- ನೋಂದಾಯಿಸುವುದು ಹೇಗೆ ತಿಳಿಯಿರಿ..
ಈ ವರ್ಷ ಚಾರ್ ಧಾಮ್ ಯಾತ್ರೆಗೆ ಅಧಿಕ ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡುವ ನಿರೀಕ್ಷೆ ಇದ್ದು QR ಕೋಡ್‌ಗಳನ್ನು ಕಡ್ಡಾಯಗೊಳಿಸಲಾಗಿದೆ. ತೀರ್ಥಯಾತ್ರೆಗೆ ನೋಂದಾಯಿಸುವುದು ಹೇಗೆ ತಿಳಿಯಿರಿ.
ಪವಿತ್ರ ಚಾರ್ ಧಾಮ್ ಯಾತ್ರೆಯು ಪ್ರತಿ ವರ್ಷ ನಡೆಯುವ ಪ್ರಮುಖ ಹಿಂದೂ ತೀರ್ಥಯಾತ್ರೆಗಳಲ್ಲಿ ಒಂದಾಗಿದೆ. ಕೋವಿಡ್ -19 ಸಾಂಕ್ರಾಮಿಕ ರೋಗದ ಹಲವು ನಿರ್ಬಂಧಗಳನ್ನು ತೆಗೆದ ಮೊದಲ ಯಾತ್ರೆ ಇದಾಗಿದೆ. ಹೀಗಾಗಿ ಅಪಾರ ಸಂಖ್ಯೆಯ ಭಕ್ತರು ಯಾತ್ರೆಗೆ ಭೇಟಿ ನೀಡುವ ನಿರೀಕ್ಷೆಯಿದೆ.
ಮೊದಲ ಬಾರಿಗೆ ಪ್ರಯಾಣಕ್ಕಾಗಿ ಆನ್‌ಲೈನ್ ನೋಂದಣಿಯನ್ನು ಪ್ರಾರಂಭಿಸಲಾಗಿದೆ. ಈ ವಾರದ ಆರಂಭದಲ್ಲಿ ಪೋರ್ಟಲ್ ಪ್ರಾರಂಭವಾದಾಗಿನಿಂದ ಫೆಬ್ರವರಿ 24 ರ ಹೊತ್ತಿಗೆ ಕೇದಾರನಾಥ ಮತ್ತು ಬದರಿನಾಥಕ್ಕೆ ಮಾತ್ರ ಈಗಾಗಲೇ 81,000 ಕ್ಕೂ ಹೆಚ್ಚು ನೋಂದಣಿಗಳು ನಡೆದಿವೆ.

ಚಾರ್ ಧಾಮ್ ಯಾತ್ರೆ 2023 ಹೊಸ ನಿಯಮಗಳು
ಕಳೆದ ವರ್ಷಕ್ಕಿಂತ ಭಿನ್ನವಾಗಿ ಯಾತ್ರಿಕರ ಪ್ರವೇಶ ಪ್ರಕ್ರಿಯೆಯನ್ನು ಸುಗಮಗೊಳಿಸುವ ಸಲುವಾಗಿ ಈ ವರ್ಷ ಆನ್‌ಲೈನ್ ನೋಂದಣಿಗಳು ಪ್ರಾಧಾನ್ಯತೆಯನ್ನು ಪಡೆದುಕೊಂಡಿವೆ. ನೋಂದಣಿಯ ನಂತರ, ಭಕ್ತನ ನೋಂದಾಯಿತ ಮೊಬೈಲ್ ಸಂಖ್ಯೆಗೆ QR ಕೋಡ್ ಕಳುಹಿಸಲಾಗುತ್ತದೆ. ಪ್ರತಿಯೊಬ್ಬರೂ ದರ್ಶನದ ಸಮಯದಲ್ಲಿ ಪ್ರವೇಶದಲ್ಲಿ ಅದನ್ನು ತೋರಿಸಬೇಕಾಗುತ್ತದೆ ಮತ್ತು ನಿಗದಿತ ಸಮಯದ ಸ್ಲಾಟ್‌ನೊಂದಿಗೆ ಟೋಕನ್ ಅನ್ನು ಸಹ ಒದಗಿಸಲಾಗುತ್ತದೆ.
ಆನ್‌ಲೈನ್ ನೋಂದಣಿಯು ನಿರೀಕ್ಷಿತ ಯಾತ್ರಿಕರ ಸಂಖ್ಯೆಯ ಮಾಹಿತಿಯನ್ನು ಪಡೆಯಲು ಸಹಾಯ ಮಾಡುತ್ತದೆ. ಅದಕ್ಕಾಗಿ ಉತ್ತಮ ಸೌಲಭ್ಯಗಳನ್ನು ವ್ಯವಸ್ಥೆಗೊಳಿಸಬಹುದು.

ಇಲ್ಲಿಯವರೆಗೆ ಕೇದಾರನಾಥ ಮತ್ತು ಬದರಿನಾಥಕ್ಕೆ ನೋಂದಣಿ ಲಭ್ಯವಿದ್ದು ಅದು ಕ್ರಮವಾಗಿ ಏಪ್ರಿಲ್ 25 ಮತ್ತು ಏಪ್ರಿಲ್ 27 ರಂದು ತೆರೆಯುತ್ತದೆ. ಯಮುನೋತ್ರಿ ಮತ್ತು ಗಂಗೋತ್ರಿಗಾಗಿ ದೇವಾಲಯವನ್ನು ತೆರೆಯುವ ಘೋಷಣೆಯ ನಂತರ, ನೋಂದಣಿ ಅಂತಿಮವಾಗಿ ನಡೆಯಲಿದೆ.
ಚಾರ್ ಧಾಮ್ ಯಾತ್ರೆ 2023: ಆನ್‌ಲೈನ್‌ನಲ್ಲಿ ನೋಂದಾಯಿಸುವುದು ಹೇಗೆ?
*ಅಧಿಕೃತ ವೆಬ್‌ಸೈಟ್ registrationandtouristcare.uk.gov.in ಗೆ ಭೇಟಿ ನೀಡಿ. ರಿಜಿಸ್ಟರ್ ಬಟನ್ ಮೇಲೆ ಕ್ಲಿಕ್ ಮಾಡಿ ಮತ್ತು ಯಾತ್ರಾ ಲಾಗಿನ್ ಫಾರ್ಮ್ ಅನ್ನು ಪ್ರವೇಶಿಸಿ.
*ಅಗತ್ಯವಿರುವ ಎಲ್ಲಾ ವೈಯಕ್ತಿಕ ವಿವರಗಳನ್ನು ಭರ್ತಿ ಮಾಡುವ ಮೂಲಕ ಫಾರ್ಮ್ ಅನ್ನು ಪೂರ್ಣಗೊಳಿಸಿ. ಇದನ್ನು OTP ಮೂಲಕ ಪರಿಶೀಲಿಸಲಾಗುತ್ತದೆ
*ನೋಂದಣಿ ಪೂರ್ಣಗೊಂಡ ನಂತರ, ಮೊಬೈಲ್ ಸಂಖ್ಯೆ ಮತ್ತು ಪಾಸ್‌ವರ್ಡ್‌ನೊಂದಿಗೆ ಮತ್ತೊಮ್ಮೆ ಲಾಗಿನ್ ಮಾಡಿ.

*ಡ್ಯಾಶ್‌ಬೋರ್ಡ್‌ನ ಒಳಗೆ ಯೋಜನಾ ದಿನಾಂಕಗಳು, ಪ್ರವಾಸಿಗರ ಸಂಖ್ಯೆ ಇತ್ಯಾದಿ ವಿವರವನ್ನು ನಮೂದಿಸಿ ಕ್ಲಿಕ್ ಮಾಡಿ.
*ನೋಂದಣಿ ಪ್ರಕ್ರಿಯೆಯು ಪೂರ್ಣಗೊಂಡ ನಂತರ, ಯಾತ್ರಿಗಳು ನೋಂದಣಿ ಸಂಖ್ಯೆಯೊಂದಿಗೆ SMS ಅನ್ನು ಸ್ವೀಕರಿಸುತ್ತಾರೆ.
*ನಂತರ ಪ್ರಯಾಣಕ್ಕಾಗಿ ಪತ್ರವನ್ನು ಡೌನ್‌ಲೋಡ್ ಮಾಡುತ್ತಾರೆ.
ಯಾತ್ರಾರ್ಥಿಗಳು ಪ್ರವಾಸೋದ್ಯಮ ಇಲಾಖೆಯ ವೆಬ್‌ಸೈಟ್ ಮತ್ತು ವಾಟ್ಸಾಪ್ ಮೂಲಕ ಆನ್‌ಲೈನ್‌ನಲ್ಲಿ ನೋಂದಾಯಿಸಿಕೊಳ್ಳಬಹುದು. ವಿಶೇಷ ಮೊಬೈಲ್ ಅಪ್ಲಿಕೇಶನ್ ಒಂದು ವಾರದೊಳಗೆ ಪ್ರಯೋಗಕ್ಕೆ ಸಿದ್ಧವಾಗಲಿದೆ. ಇದು ಏಪ್ರಿಲ್‌ನೊಳಗೆ ಡೌನ್‌ಲೋಡ್ ಮಾಡಲು ಸಿದ್ಧವಾಗಲಿದೆ ಎಂದು ಪ್ರವಾಸೋದ್ಯಮ ಇಲಾಖೆಯ ಹಿರಿಯ ಸಂಶೋಧನಾ ಅಧಿಕಾರಿ ಎಸ್‌ಎಸ್ ಸಾಮಂತ್ ತಿಳಿಸಿದ್ದಾರೆ.
ಚಾರ್ ಧಾಮ್ ಯಾತ್ರೆ ಕೈಗೊಳ್ಳಲು ಭಕ್ತರ ಫೋಟೊಮೆಟ್ರಿಕ್/ಬಯೋಮೆಟ್ರಿಕ್ ನೋಂದಣಿ ಕಡ್ಡಾಯವಾಗಿದೆ. ಆನ್‌ಲೈನ್ / ಆಫ್‌ಲೈನ್‌ನಲ್ಲಿ ನೋಂದಣಿ ಪ್ರಕ್ರಿಯೆ ಮುಗಿದ ನಂತರ ಭಕ್ತರಿಗೆ ಯಾತ್ರಾ ನೋಂದಣಿ ಪತ್ರವನ್ನು ನೀಡಲಾಗುತ್ತದೆ. ಯಾತ್ರಿಕರು ಅಧಿಕೃತ ವೆಬ್‌ಸೈಟ್ - uk.gov.in ನಲ್ಲಿ ಹೆಲಿಕಾಪ್ಟರ್ ಮೂಲಕ ಕೇದಾರನಾಥವನ್ನು ತಲುಪಲು ನಿಮ್ಮ ಟಿಕೆಟ್‌ಗಳನ್ನು ಬುಕ್ ಮಾಡಬಹುದು. ಆನ್‌ಲೈನ್ ಬುಕಿಂಗ್ ಸಮಯದಲ್ಲಿ ಪ್ರಯಾಣಿಕರ ಐಡಿ ಪುರಾವೆಗಳನ್ನು ಸಲ್ಲಿಸಬೇಕಾಗುತ್ತದೆ.












Click it and Unblock the Notifications