Viral Video: ಆಫೀಸ್ ಸಿಬ್ಬಂದಿಯಿಂದ ಚಪ್ರಿ ಡ್ಯಾನ್ಸ್‌,‌ ಇಲ್ಲಿದೆ ವೈರಲ್ ವಿಡಿಯೋ!

Viral Video: ವಿದೇಶಿ ಹೂಡಿಕೆದಾರರು (ಕ್ಲೈಂಟ್‌ನ) ಮುಂದೆ ಇಡೀ ಆಫೀಸ್‌ನ ಸಿಬ್ಬಂದಿಯೇ ಡ್ಯಾನ್ಸ್‌ ಮಾಡಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ವಿವಿಧ ಚಿತ್ರರಂಗದ ಹಾಡುಗಳಿಗೆ ಭಾರತೀಯರು ಡ್ಯಾನ್ಸ್‌ ಮಾಡಿದ್ದು. ಈ ವೈರಲ್ ವಿಡಿಯೋ ಇದೀಗ ಪರ ವಿರೋಧ ಚರ್ಚೆಗೆ ಕಾರಣವಾಗಿದೆ. ಕೆಲವರು ಇದು ತುಂಬಾ ಚೆನ್ನಾಗಿದೆ ಹಾಗೂ ಭಿನ್ನವಾಗಿದೆ ಅಂತಾ ಹೇಳಿದರೆ, ಇನ್ನೂ ಹಲವರು ಇದೊಂದು ಚೀಫ್ ಟ್ರಿಕ್ಸ್‌ ಈ ರೀತಿ ಯಾರಾದರೂ ಮಾಡುತ್ತಾರೆಯೇ. ಇದರಿಂದ ಭಾರತೀಯ ಆಫೀಸ್‌ಗಳಲ್ಲಿ ಆಫೀಸ್ ಕಲ್ಚರ್ ಸರಿ ಇಲ್ಲ. ಕೆಲಸವನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ ಎನ್ನುವ ಅಭಿಪ್ರಾಯ ಮೂಡುವುದಿಲ್ಲ ಎಂದು ಹೇಳಿದ್ದಾರೆ.

ಭಾರತದ ಹಲವು ಆಫೀಸ್‌ಗಳಲ್ಲಿ ಫನ್ ಫ್ರೈಡೇ ಸೇರಿದಂತೆ ಹಲವು ವಿಶೇಷ ದಿನಗಳಂದು ವಿಶೇಷ ಟಾಸ್ಕ್‌ ನೀಡಿ ಉದ್ಯೋಗಿಗಳಿಗೆ ಫನ್‌ ಆಕ್ಟಿವಿಟಿಗಳನ್ನು ಆಯೋಜನೆ ಮಾಡಲಾಗುತ್ತದೆ. ಆದರೆ ಹೊರ ದೇಶಗಳಿಂದ ಕ್ಲೈಂಟ್ ಇಲ್ಲವೇ ಅಧಿಕಾರಿಗಳು ಬರುವ ಸಂದರ್ಭದಲ್ಲಿ ಈ ರೀತಿಯ ಕಾರ್ಯಕ್ರಮಗಳನ್ನು ಆಯೋಜನೆ ಮಾಡುವುದು ಅಥವಾ ಡ್ಯಾನ್ಸ್‌ನ ಮೂಲಕ ಸ್ವಾಗತ ಮಾಡುವುದು ತುಂಬಾ ಕಡಿಮೆ ಅಂತಲೇ ಹೇಳಬಹುದು. ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ಏನಿದೆ. ಈ ಪರ - ವಿರೋಧ ಚರ್ಚೆ ಯಾಕೆ ಎನ್ನುವ ಮಾಹಿತಿ ಇಲ್ಲಿದೆ.

Chapri dance by office staff here is viral video

ಭಾರತದ ಆಫೀಸ್‌ವೊಂದರ ಉದ್ಯೋಗಿಗಳು ತೆಲುಗು ಹಾಡಿನೊಂಡಿಗೆ ಡ್ಯಾನ್ಸ್‌ ಮಾಡಿ ಕ್ಲೈಂಟ್ ಅನ್ನು ವೆಲ್‌ಕಮ್ ಮಾಡಿದ್ದಾರೆ. ಇದನ್ನು ಹಂಚಿಕೊಂಡಿರುವ ವ್ಯಕ್ತಿಯೊಬ್ಬರು, ಭಾರತವು ಕಾರ್ಪೊರೇಟ್ ಕಚೇರಿಗಳನ್ನು ಕೀಳಾಗಿ ನೋಡುವುದನ್ನು ನಿಲ್ಲಿಸಬೇಕು. ಭಾರತೀಯ ಯುವತಿಯರು ಆಫೀಸ್‌ನಲ್ಲಿ ಡ್ಯಾನ್ಸ್‌ ಮಾಡುವುದನ್ನು ಮತ್ತು ವಿದೇಶಿ ಕ್ಲೈಂಟ್‌ನ ಸ್ವಾಗತಿಸುತ್ತಿರುವುದನ್ನು ನೋಡುವುದಕ್ಕೆ ಬೇಜಾರಾಗುತ್ತದೆ. ಕೊನೆಗೆ ಕ್ಲೈಂಟ್ ಅಥವಾ ಹೂಡಿಕೆದಾರರನ್ನೂ ಡ್ಯಾನ್ಸ್‌ ಮಾಡುವಂತೆ ಒತ್ತಾಯಿಸಲಾಗಿದೆ. ಇಂತಹ ಪ್ರದರ್ಶನವು ಇತರ ದೇಶಗಳಲ್ಲಿ ಭಾರತೀಯ ಆಫೀಸ್‌ಗಳ ವಾತಾವರಣದ ಬಗ್ಗೆ ಕೆಟ್ಟ ಅಭಿಪ್ರಾಯ ಮೂಡಿಸುವ ಸಾಧ್ಯತೆ ಇದೆ. ಅಲ್ಲದೇ ಭಾರತೀಯರು ಗಂಭೀರವಾದ ಕೆಲಸಗಳಿಗೆ ಅರ್ಹವಲ್ಲ ಎನ್ನುವ ಭಾವನೆ ಮೂಡುವುದಕ್ಕೆ ಕಾರಣವಾಗಬಹುದು ಎಂದು ಹೇಳಿದ್ದಾರೆ.

ಅನೇಕ ಕಚೇರಿಗಳಲ್ಲಿ ಈ ಮಾದರಿಯನ್ನು ಅನುಸರಿಸಲಾಗುತ್ತದೆ. ಉದ್ಯೋಗಿಗಳ ಮಾನಸಿಕ ಹಾಗೂ ದೈಹಿಕ ಒತ್ತಡವನ್ನು ಕಡಿಮೆ ಮಾಡುವುದು ಇದರ ಉದ್ದೇಶವಾಗಿದೆ. ಇದರಲ್ಲಿ ಆರೋಪ ಮಾಡುವಂತಹದು ಅಥವಾ ತಪ್ಪು ಹುಡುಕುವಂತಹದ್ದು ಏನೇನು ಇಲ್ಲ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ. ಇನ್ನೂ ಕೆಲವರು ಬಾಸ್‌ಗಳನ್ನು ಮೆಚ್ಚಿಸುವ ಕಾರಣಕ್ಕೆ ಈ ರೀತಿ ಮಾಡುತ್ತಿದ್ದಾರೆ. ಇದೊಂದು ಕೆಟ್ಟ ಸಂಪ್ರದಾಯ ಅಂತಲೂ ಅಭಿಪ್ರಾಯಪಟ್ಟಿದ್ದಾರೆ.

ಇಲ್ಲಿರುವ ಏಕೈಕ ಚಾಪ್ರಿ ಟ್ವೀಟ್ ಮಾಡುತ್ತಿರುವವರು ಬಹುಶಃ ಇದು ಏನು ಎಂದು ತಿಳಿಯಲು ಕಾರ್ಪೊರೇಟ್‌ಗಳಲ್ಲಿ ಅವರು ಕೆಲಸ ಮಾಡಿಲ್ಲ ಎಂದು ವ್ಯಕ್ತಿಯೊಬ್ಬರು ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಒಟ್ಟಾರೆ ಈ ವಿಡಿಯೋ ಇದೀಗ ಭಾರೀ ವೈರಲ್ ಆಗಿದ್ದು ಪರ - ವಿರೋಧ ಚರ್ಚೆಗೆ ಕಾರಣವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+