Chandrayan 3 Launch: ಚಂದ್ರಯಾನ-3 ಉಡಾವಣೆಗೆ ಡೇಟ್ ಫಿಕ್ಸ್: ಬಾಹ್ಯಾಕಾಶದಲ್ಲಿ ರಾರಾಜಿಸಲಿದೆ ಭಾರತದ ಬಾವುಟ!

ನವದೆಹಲಿ: ಭಾರತ ಎಲ್ಲಾ ಕ್ಷೇತ್ರದಲ್ಲೂ ಬಲಿಷ್ಠವಾಗಿ ಬೆಳೆಯುತ್ತಿದೆ, ಬಾಹ್ಯಾಕಾಶದಲ್ಲೂ ಭಾರತದ ಬಾವುಟ ರಾರಾಜಿಸುತ್ತಿದೆ. ನಾಸಾ ತನ್ನ ಉಪಗ್ರಹ ಉಡಾಯಿಸಲು ಭಾರತವನ್ನೇ ಅವಲಂಬಿಸಿದೆ. ಹೀಗೆ ನಮ್ಮ ಹೆಮ್ಮೆಯ ಭಾರತ ಬಾಹ್ಯಾಕಾಶ ಲೋಕದಲ್ಲೂ ದೊರೆಯಾಗಿ ಮರೆಯುತ್ತಿದ್ದು, ಈಗ ಚಂದ್ರಯಾನ-3 ಮೂಲಕ ಮತ್ತೊಂದು ಸಾಧನೆಗೆ ನಮ್ಮ ಇಸ್ರೋ ಸಜ್ಜಾಗಿದೆ.

ಅಮೆರಿಕದ ನಾಸಾ ಸಹಿತ ಇಡೀ ಜಗತ್ತೇ 'ಚಂದ್ರಯಾನ-3' ಯೋಜನೆ ಕುರಿತು ಕುತೂಹಲ ಹೊಂದಿದೆ. ಚಂದ್ರಯಾನ-3 ಯೋಜನೆ ಚಂದ್ರಯಾನ-2ರ ಮುಂದುವರಿದ ಭಾಗ. ಚಂದ್ರನ ಮೇಲೆ ಸುರಕ್ಷಿತವಾಗಿ ನೌಕೆ ಇಳಿಸುವುದು ಸೇರಿದಂತೆ ರೋವರ್ ಸಂಚರಿಸುವ ಸಾಮರ್ಥ್ಯವನ್ನ ಪ್ರದರ್ಶಿಸಲು ಇಸ್ರೋ ಸಜ್ಜಾಗಿದೆ. ಹೀಗಾಗಿ ಕಳೆದ ಕೆಲ ತಿಂಗಳಿಂದ ಇಸ್ರೋ ವಿಜ್ಞಾನಿಗಳು ನಿದ್ದೆ ಬಿಟ್ಟು, ರಾತ್ರಿ & ಹಗಲು ಎನ್ನದೆ ಕಣ್ಣಿಗೆ ಎಣ್ಣೆ ಬಿಟ್ಕೊಂಡು ಕೆಲಸ ಮಾಡಿದ್ದಾರೆ. ವಿಜ್ಞಾನಿಗಳ ಶ್ರಮದ ಫಲವಾಗಿ ಭಾರತೀಯರ ಹೆಮ್ಮೆಯ 'ಚಂದ್ರಯಾನ-3' ಉಡಾವಣೆಗೆ ದಿನಗಣನೆ ಶುರುವಾಗಿದೆ. ಹಾಗಾದ್ರೆ ಚಂದ್ರಯಾನ-3 ಲಾಂಚ್ ಡೇಟ್ ಯಾವಾಗ? ಮುಂದೆ ಓದಿ (Chandrayan 3 Launch).

Chandrayan 3 Launch date: ISRO to Indias 3rd Mission to Moon On 13th July by GSLV Mark 3

ಟಿಕ್.. ಟಿಕ್.. ಟಿಕ್.. ಬರುತ್ತಿದೆ ಕಾಲ!

ಹೌದು, ಇನ್ನೇನು ಅರ್ಧ ತಿಂಗಳು ಅಂದ್ರೆ 15 ದಿನದಲ್ಲಿ 'ಚಂದ್ರಯಾನ-3' ಉಡಾವಣೆಗೆ ಸಿದ್ಧವಾಗಿದೆ. ಚಂದ್ರಯಾನ-3 ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಲಾಂಚ್ ವೆಹಿಕಲ್ ಮಾರ್ಕ್-III ಮೂಲಕ ಲಾಂಚ್ ಆಗಲಿದೆ. ಇನ್ನು ಇಸ್ರೋ ಜುಲೈ 13ರ ಮಧ್ಯಾಹ್ನ 2.30ಕ್ಕೆ ಮುಹೂರ್ತ ಫಿಕ್ಸ್ ಮಾಡಿದೆ. ಅತ್ಯಂತ ಸೂಕ್ಷ್ಮ ತಂತ್ರಜ್ಞಾನ ಬಳಸಿರುವ ಚಂದ್ರಯಾನ ನೌಕೆ ಹಲವು ವಿಶೇಷತೆ ಹೊಂದಿದೆ. ಅದರಲ್ಲೂ ಬಾಹ್ಯಾಕಾಶ ವಿಜ್ಞಾನಿಗಳ ಕುತೂಹಲದ ಕೇಂದ್ರ ಬಿಂದುವಾಗಿರುವ ಚಂದ್ರನ ದಕ್ಷಿಣ ಧ್ರುವದ ಅಧ್ಯಯನ ನಡೆಸುವುದೇ ಈ ಯೋಜನೆಯ ಟಾರ್ಗೆಟ್. ಹೀಗೆ ಚಂದ್ರನ ದಕ್ಷಿಣ ಧ್ರುವದಲ್ಲಿ ಭಾರತ ಉಡಾಯಿಸುವ ಚಂದ್ರಯಾನ-3 ನೌಕೆ ಲ್ಯಾಂಡ್ ಆಗಲಿದೆ.

ಏನೆಲ್ಲಾ ಅಧ್ಯಯನ ನಡೆಸಲಿದೆ ಗೊತ್ತಾ?

ಅಂದಹಾಗೆ 'ಚಂದ್ರಯಾನ-1' ಮತ್ತು 'ಚಂದ್ರಯಾನ-2'ಗೆ ಹೋಲಿಕೆ ಮಾಡಿದರೆ ಇದೀಗ 'ಚಂದ್ರಯಾನ-3' ಸಾಕಷ್ಟು ಅತ್ಯಾಧುನಿಕ ತಂತ್ರಜ್ಞಾನ ಹೊಂದಿದೆ. ಚಂದ್ರನ ಸುತ್ತಲೂ ಅವರಿಸಿರುವ ಶಿಲಾ ಪದರದ ಮೇಲಿನ ಗಟ್ಟಿಗೊಂಡಿಲ್ಲದ ಘನಪದಾರ್ಥ ಅಧ್ಯಯನ ನಡೆಸುವ ಲೂನಾರ್ ರಿಗೊಲಿತ್, ಭೂಕಂಪನ ಅಧ್ಯಯನ ಮಾಡುವ ಲೂನಾರ್ ಸೆಸಿಮಿಸಿಟಿ, ಹೊರ ಆವರಣದ ಪ್ಲಾಸ್ಮಾ, ಬಾಹ್ಯಾಕಾಶ ನೌಕೆ ಇಳಿದ ಪ್ರದೇಶದಲ್ಲಿ ಧಾತುರೂಪದ ಸಂಯೋಜನೆ ಮುಂತಾದ ವಿಚಾರಗಳ ಅಧ್ಯಯನಕ್ಕೆ ಇಸ್ರೋ ಸಂಸ್ಥೆಯು ಸಜ್ಜಾಗಿದೆ. ಚಂದ್ರಯಾನ-3ರ ಇನ್ನೊಂದು ವಿಶೇಷತೆ ಏನೆಂದರೆ, ಬಾಹ್ಯಾಕಾಶ ನೌಕೆ ಜೊತೆಗೆ ರೋವರ್ ಕೂಡ ಚಂದ್ರನ ಅಂಗಳಕ್ಕೆ ಎಂಟ್ರಿ ಕೊಡಲಿದೆ.

ಚಂದ್ರ & ಭೂಮಿಯ ಸಂಬಂಧವೇ ಮಧುರ!

ಭೂಮಿ ಮತ್ತು ಚಂದ್ರನ ನಡುವೆ ಹೃದಯ ಹಾಗೂ ಮಿದುಳಿನ ಸಂಬಂಧ ಇದೆ. ಯಾಕೆ ಎಂಬ ಪ್ರಶ್ನೆಗೆ ಉತ್ತರ, ಚಂದ್ರನ ಚಲನೆಗಳೇ ಭೂಮಿಯ ಮೇಲೆ ಭೂಕಂಪನ ಸೇರಿದಂತೆ ಸಮುದ್ರದ ಉಬ್ಬರ ಇಳಿತಗಳನ್ನು ನಿರ್ಧರಿಸಲಿದೆ. ಇದೇ ಕಾರಣಕ್ಕೆ 'ಚಂದ್ರಯಾನ-3'ರಲ್ಲಿ ಅತ್ಯಾಧುನಿಕ ಉಪಕರಣ ಅಳವಡಿಸಿ ಅಧ್ಯಯನ ನಡೆಸಲು ಇಸ್ರೋ ಸಿದ್ಧವಾಗಿದೆ. ಜೊತೆಗೆ ಭೂಮಿಯಿಂದ ಹೊಮ್ಮುವ ಬೆಳಕಿನ ಧ್ರುವೀಕರಣವನ್ನು ಚಂದ್ರನ ಕಕ್ಷೆಯಿಂದಲೇ ಅಧ್ಯಯನ ಮಾಡಲು ಪ್ಲ್ಯಾನ್ ರೂಪಿಸಲಾಗಿದೆ. ಹೀಗೆ ಕಾಲಕ್ಕೆ ತಕ್ಕಂತೆ ನಮ್ಮ ಇಸ್ರೋ ಸಂಸ್ಥೆ ಕೂಡ ಹೈಫೈ ತಂತ್ರಜ್ಞಾನ ಅಳವಡಿಸಿ 'ಚಂದ್ರಯಾನ-3' ಲಾಂಚ್ ಮಾಡುತ್ತಿದೆ.

Chandrayan 3 Launch date: ISRO to Indias 3rd Mission to Moon On 13th July by GSLV Mark 3

ಒಟ್ನಲ್ಲಿ ಭಾರತದ ವಿಜ್ಞಾನಿಗಳು ಬಾಹ್ಯಾಕಾಶ ಲೋಕದಲ್ಲಿ ಮತ್ತೊಮ್ಮೆ ಭಾರತದ ಹೆಸರು ರಾರಾಜಿಸುವಂತೆ ಮಾಡಲು ಸಜ್ಜಾಗಿದ್ದಾರೆ. 'ಚಂದ್ರಯಾನ-1' ಕಾಲದಿಂದಲೂ ಭಾರತದ ಸಾಧನೆ ಮುಗಿಲೆತ್ತರಕ್ಕೆ ಚಾಚಿದೆ. ಅದರಲ್ಲೂ ಚಂದ್ರನ ಮೇಲೂ ನೀರು ಇದೆ ಎಂಬುದನ್ನ ಮೊದಲು ಹೇಳಿದ್ದೇ ಇಸ್ರೋ ಸಂಸ್ಥೆ. 'ಚಂದ್ರಯಾನ-1' ಈ ಯಶಸ್ಸು ತಂದುಕೊಟ್ಟಿತ್ತು. ಈಗ 'ಚಂದ್ರಯಾನ-3' ಕೂಡ ಮಹತ್ವದ ಬದಲಾವಣೆಗೆ ನಾಂದಿ ಹಾಡುವುದು ಬಹುತೇಕ ನಿಶ್ಚಿತ. ಹೀಗಾಗಿ ಪ್ರಪಂಚದ ಮೂಲೆ ಮೂಲೆಯಲ್ಲಿರುವ ವಿಜ್ಞಾನಿಗಳು ಭಾರತದ ಇಸ್ರೋ ಸಂಸ್ಥೆ ಪ್ರಯತ್ನಕ್ಕೆ ಆಲ್ ದಿ ಬೆಸ್ಟ್ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+