Pragyan Rover's Video: ವಿಕ್ರಮ್ ಲ್ಯಾಂಡರ್‌ನಿಂದ ಪ್ರಗ್ಯಾನ್ ರೋವರ್ ಹೊರಬಂದ ದೃಶ್ಯ, ಇಸ್ರೋದ ವಿಡಿಯೋ ವೈರಲ್

ಬೆಂಗಳೂರು, ಆಗಸ್ಟ್ 25: ಚಂದ್ರನ ದಕ್ಷಿಣ ಧ್ರುವದಲ್ಲಿ ವಿಕ್ರಮ್‌ ಸಾಫ್ಟ್‌ ಲ್ಯಾಂಡಿಂಗ್ ಮಾಡಿದ ನಂತರ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಪ್ರಗ್ಯಾನ್‌ ರೋವರ್‌ ಇಳಿಯುವ ದೃಶ್ಯವನ್ನು ಬಿಡುಗಡೆ ಮಾಡಿದ್ದು, ಈ ವಿಡಿಯೋ ಈಗ ವೈರಲ್‌ ಆಗಿದೆ.

ಚಂದ್ರಯಾನ-3 ರೋವರ್ ಲ್ಯಾಂಡರ್‌ನಿಂದ ಚಂದ್ರನ ಮೇಲ್ಮೈಗೆ ಹೇಗೆ ಇಳಿಯಿತು ಎಂಬುದು ಇಲ್ಲಿದೆ ಎಂದು ಭಾರತೀಯ ಬಾಹ್ಯಕಾಶ ಸಂಶೋಧನಾ ಸಂಸ್ಥೆ ಎಕ್ಸ್‌ನಲ್ಲಿ ವಿಡಿಯೋವನನ್ಉ ಪೋಸ್ಟ್‌ ಮಾಡಿದೆ. ಈ ಸ್ಥಳಕ್ಕೆ ಹೆಸರನ್ನು ನೀಡಲು ವಿಜ್ಞಾನಿಗಳು ಚಿಂತನೆ ನಡೆಸಿದ್ದಾರೆ. ಈ ಹೆಸರುಗಳಲ್ಲಿ 'ಬೆಂಗಳೂರು' ಮತ್ತು 'ಇಸ್ರೋ ಬೆಂಗಳೂರು' ಕೇಳಿ ಬಂದಿವೆ. ಬುಧವಾರ 23ರಂದು ಸಂಜೆ 6.04 ನಿಮಿಷಕ್ಕೆ ಚಂದ್ರಯಾನ 3 ಮಿಷನ್‌ನ ವಿಕ್ರಮ್ ಲ್ಯಾಂಡರ್‌ ಚಂದ್ರನ ದಕ್ಷಿಣ ಧ್ರುವದ ಮೇಲೆ ಇಳಿದಿತ್ತು.

chandrayaan-3

ಈ ಮೂಲಕ ಭಾರತವು ಆಗಸ್ಟ್ 23 ರಂದು ಚಂದ್ರನ ದಕ್ಷಿಣ ಧ್ರುವ ಪ್ರದೇಶದಲ್ಲಿ ಯಶಸ್ವಿಯಾಗಿ ಇಳಿದ ಮೊದಲ ದೇಶವಾಯಿತು. ಲ್ಯಾಂಡಿಂಗ್ ನಂತರ ಈಗ ಪ್ರಗ್ಯಾನ್ ಲ್ಯಾಂಡರ್ ಮಾಡ್ಯೂಲ್‌ನಿಂದ ಹೊರಬಂದಿದೆ. ಅಲ್ಲದೆ ವೈಜ್ಞಾನಿಕ ಪ್ರಯೋಗಗಳನ್ನು ಪ್ರಾರಂಭಿಸಿದೆ.

ಇತ್ತ ಈಗ ಚಂದ್ರನ ಮೇಲೆ ಇಳಿಯುವ ಸ್ಥಳವನ್ನು 'ಬೆಂಗಳೂರು' ಅಥವಾ 'ಇಸ್ರೋ ಬೆಂಗಳೂರು' ಎಂದು ಹೆಸರಿಸುವಂತೆ ಸರ್ಕಾರವನ್ನು ಒತ್ತಾಯಿಸುವ ಜನರ ಗುಂಪಿನಿಂದ ಅಭಿಯಾನವನ್ನು ಪ್ರಾರಂಭಿಸಲಾಗಿದೆ. ಬೇಡಿಕೆಗೆ ಪ್ರತಿಕ್ರಿಯಿಸಿದ ಇಸ್ರೋ ಟೆಲಿಮೆಟ್ರಿ, ಟ್ರ್ಯಾಕಿಂಗ್ ಮತ್ತು ಕಮಾಂಡ್ ನೆಟ್‌ವರ್ಕ್ (ಐಸ್ಟ್ರಾಕ್) ನಿರ್ದೇಶಕ ಬಿಎನ್ ರಾಮಕೃಷ್ಣ ಇದು ಸಾಧ್ಯವಿದ್ದು, ಉನ್ನತ ಮಟ್ಟದಲ್ಲಿ ಚರ್ಚಿಸಲಾಗುವುದು ಎಂದು ಹೇಳಿದ್ದಾರೆ.

"ಇದು ಜನರ ಆಶಯವಾಗಿದೆ ಮತ್ತು ಈ ಹೆಸರನ್ನು ಇಡಬಹುದು. ಅದರಲ್ಲಿ ಯಾವುದೇ ಸಮಸ್ಯೆ ಇಲ್ಲ. ಚಂದ್ರನ ಮೇಲೆ ಇಳಿದ ನಾಲ್ಕನೇ ರಾಷ್ಟ್ರ ನಮ್ಮದು. ಈ ಹಿಂದೆ, ಇತರ ಮೂರು ರಾಷ್ಟ್ರಗಳು ಸಹ ಹೆಸರುಗಳನ್ನು ನೀಡಿವೆ. ನಾವು ಖಂಡಿತವಾಗಿಯೂ ಸ್ಥಳಕ್ಕೆ ಹೆಸರನ್ನು ನೀಡುತ್ತೇವೆ. ನಾವು ನಮ್ಮ ಉನ್ನತ ಅಧಿಕಾರಿಗಳೊಂದಿಗೆ ಚರ್ಚಿಸುತ್ತೇವೆ. ಪ್ರಸ್ತುತ, ನಮ್ಮಲ್ಲಿ ಯಾವುದೇ ಹೆಸರುಗಳಿಲ್ಲ. ಆದರೆ ನಾವು ಖಂಡಿತ ಹೆಸರನ್ನು ಅಂತಿಮಗೊಳಿಸುತ್ತೇವೆ ಎಂದು ISTRAC ನಿರ್ದೇಶಕರು ಹೇಳಿದ್ದಾರೆ.

ಈ ವಿಚಾರವನ್ನು ಮೊದಲು 2019 ರಲ್ಲಿ ಚಂದ್ರಯಾನ-2 ಉಡಾವಣೆ ಸಮಯದಲ್ಲಿ ಚರ್ಚಿಸಲಾಯಿತು. ಇಸ್ರೋ ಮಾಜಿ ಅಧ್ಯಕ್ಷ ಕೆ ಶಿವನ್ ಆಗ ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲೆ ಇಳಿದ ನಂತರ ಹೆಸರನ್ನು ಅಂತಿಮಗೊಳಿಸಲಾಗುವುದು ಎಂದು ಹೇಳಿದ್ದರು.

ಏತನ್ಮಧ್ಯೆ, ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಬೆಂಗಳೂರಿಗೆ ಆಗಮಿಸಲಿದ್ದು, ISTRAC ನಲ್ಲಿ ವಿಜ್ಞಾನಿಗಳನ್ನು ಭೇಟಿಯಾಗಲಿದ್ದಾರೆ ಮತ್ತು ಚಂದ್ರಯಾನ-3 ಮಿಷನ್‌ನ ಯಶಸ್ಸಿಗೆ ಅಭಿನಂದನೆ ಸಲ್ಲಿಸಲಿದ್ದಾರೆ. ಶನಿವಾರದಂದು ಬೆಂಗಳೂರು ಭೇಟಿಯ ವೇಳೆ ವಿಜ್ಞಾನಿಗಳೊಂದಿಗೆ ಪ್ರಧಾನಿ ಮೋದಿಯವರ ಸಭೆಯ ಸಂದರ್ಭದಲ್ಲಿ ಲ್ಯಾಂಡರ್‌ನ ಸ್ಥಳವನ್ನು ಹೆಸರಿಸುವ ಕುರಿತು ಚರ್ಚೆ ನಡೆಯಲಿದೆ.

ಚಂದ್ರುನ ಮೇಲೆ ವಿಕ್ರಮ್ ಮತ್ತು ಪ್ರಜ್ಞಾನ್‌ಗೆ ನಿಗದಿಪಡಿಸಲಾಗಿರುವ ಚಂದ್ರನ ಒಂದು ದಿನಕ್ಕಿಂತಲೂ (ಭೂಮಿಯ 14 ದಿನಗಳು) ಹೆಚ್ಚು ಸಮಯ ಕಾರ್ಯ ನಿರ್ವಹಿಸುವ ಸಾಧ್ಯತೆಯೂ ಇದೆ. ವಿಕ್ರಮ್ ಮತ್ತು ಪ್ರಜ್ಞಾನ್‌ನಿಂದ ಬರಬೇಕಾಗಿರುವ ತಾಜಾ ಛಾಯಾಚಿತ್ರಗಳಿಗಾಗಿ ಇಸ್ರೊ ತುದಿಗಾಲಿನಲ್ಲಿ ಕಾದು ಕುಳಿತಿದೆ. ಈ ಮಧ್ಯೆ ವಿಕ್ರಮ್‌ ಲ್ಯಾಂಡಿಂಗ್‌ ಆಗುವ ವಿವಿಧ ಹಂತಗಳ ವಿಡಿಯೊವನ್ನು ಇಸ್ರೊ ಬಿಡುಗಡೆ ಮಾಡಿದೆ. ಲ್ಯಾಂಡರ್‌ನ ಇಮೇಜರ್‌ ಕ್ಯಾಮೆರಾ ಈ ದೃಶ್ಯಗಳನ್ನು ಸೆರೆ ಹಿಡಿದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+