Chandrayaan-3: ಚಂದ್ರಯಾನ-3 ಚಂದ್ರನ ಮೇಲೆ ಯಶಸ್ವಿಯಾಗಿ ಇಳಿಯಲು ನೆಟ್ಟಿಗರ ಪ್ರಾರ್ಥನೆ
ಇಸ್ರೋದಿಂದ ಚಂದ್ರಯಾನ-3 ಯಶಸ್ವಿಯಾಗಿ ಉಡಾವಣೆಯಾಗಿದೆ. ಚಂದ್ರಯಾನ-3 ಯಶಸ್ವಿಯಾಗಿ ಉಡಾವಣೆಯಾಗಿರುವುದನ್ನು ಇಡೀ ಭಾರತವೇ ಸಂಭ್ರಮಿಸಿದೆ. ಇದನ್ನು ಆಗಸ್ಟ್ 23 ಅಥವಾ 24 ರಂದು ಚಂದ್ರನ ಮೇಲ್ಮೈಯಲ್ಲಿ ಇಳಿಸಬಹುದು. ಇಸ್ರೋ ವಿಜ್ಞಾನಿಗಳ ನಿರಂತರ ಪರಿಶ್ರಮಕ್ಕೆ ಯಶಸ್ಸು ಸಿಗಲು ಹಾಗೂ ಉಪಗ್ರಹ ಚಂದ್ರನ ಮೇಲ್ಮೈ ಮೇಲೆ ಯಾವುದೇ ತೊಡಕು ಇಲ್ಲದೆ ಲ್ಯಾಂಡ್ ಆಗುವಂತೆ ಪ್ರಾರ್ಥನೆಗಳು ನಡೆದಿವೆ.
ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದ ಎರಡನೇ ಲಾಂಡ್ ಪ್ಯಾಡ್‌ನಿಂದ ಚಂದ್ರಯಾನ-3 ನೌಕೆಯನ್ನು ಹೊತ್ತ ಜಿಎಸ್‌ಎಲ್‌ವಿ ಮಾರ್ಕ್-3 ರಾಕೆಟ್ ಶುಕ್ರವಾರ ನಿಗದಿತ ಸಮಯ ಮಧ್ಯಾಹ್ನ 2.35ಕ್ಕೆ ಸರಿಯಾಗಿ ಉಡಾವಣೆಗೊಂಡಿತು. ನಂತರ ಚಂದ್ರಯಾನ ನೌಕೆಯು ತನ್ನ ಎಲ್ಲಾ ಮೂರೂ ಆರಂಭಿಕ ಹಂತಗಳನ್ನು ಯಶಸ್ವಿಯಾಗಿ ಪೂರೈಸುವುದರೊಂದಿಗೆ ನಿಗದಿತ ಕಕ್ಷೆ ಸೇರ್ಪಡೆಗೊಂಡಿತು.

ಇದರಲ್ಲಿ ಸಾಧಿಸಿದ ಯಶಸ್ಸು ಭಾರತಕ್ಕೆ ವಿಶ್ವದ ನಾಲ್ಕನೇ ಬಾಹ್ಯಾಕಾಶ ಸೂಪರ್ ಪವರ್ ಸ್ಥಾನಮಾನವನ್ನು ನೀಡುತ್ತದೆ. ಇಲ್ಲಿಯವರೆಗೆ ಅಮೆರಿಕ, ರಷ್ಯಾ ಮತ್ತು ಚೀನಾ ಮಾತ್ರ ಉಪಗ್ರಹ ನೌಕೆಯನ್ನು ಚಂದ್ರನ ಮೇಲೆ ಯಶಸ್ವಿಯಾಗಿ ಇಳಿಸಿವೆ.
ಈಗ ಚಂದ್ರಯಾನ-3 ಉಪಗ್ರಹವನ್ನು ಉಡಾವಣೆ ಮಾಡಲಾಗಿದೆ. ಉತ್ತರ ಧ್ರುವಕ್ಕಿಂತ ಹೆಚ್ಚು ನೀರು ಸಿಗುವ ಸಾಧ್ಯತೆ ಇರುವುದರಿಂದ ಭಾರತೀಯ ವಿಜ್ಞಾನಿಗಳು ಚಂದ್ರನ ದಕ್ಷಿಣ ಧ್ರುವದಲ್ಲಿ ಚಂದ್ರಯಾನ-3 ಅನ್ನು ಇಳಿಸಲು ನಿರ್ಧರಿಸಿದ್ದಾರೆ. ಇದರ ಯಶಸ್ಸಿಗಾಗಿ ಭಾರತೀಯರೆಲ್ಲರೂ ಪ್ರಾರ್ಥನೆ ಮಾಡುತ್ತಿದ್ದಾರೆ.
ಆಗಸ್ಟ್ 23 ರಂದು ಬಾಹ್ಯಾಕಾಶ ನೌಕೆಯು ಚಂದ್ರನ ಮೇಲೆ ತನ್ನ ಮೃದುವಾದ ಲ್ಯಾಂಡಿಂಗ್ ಮಾಡುವ ಸಮಯಕ್ಕಾಗಿ ದೇಶವಾಸಿಗಳು ಕುತೂಹಲದಿಂದ ಕಾಯುತ್ತಿದ್ದಾರೆ. ಈ ಬಗ್ಗೆ ಅನೇಕ ಜನರು ಟ್ವಿಟರ್‌ನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಮೈಕ್ರೋ-ಬ್ಲಾಗಿಂಗ್ ಸೈಟ್‌ನಲ್ಲಿ ಉತ್ಸಾಹಭರಿತ ಪ್ರತಿಕ್ರಿಯೆಗಳು ತುಂಬಿವೆ. ಕೆಲವರು ಹನುಮಾನ್ ಉಪಗ್ರಹವನ್ನು ಹಿಡಿದುಕೊಂಡು ಹೋಗುವ ಚಿತ್ರದೊಂದಿಗೆ ಫೋಟೋವನ್ನು ಹಂಚಿಕೊಂಡಿದ್ದಾರೆ.
May this time we wil do it. #Chandrayaan3 pic.twitter.com/qyyFbJeeK6
— Bhagavad Gita 🪷 (@Geetashloks) July 14, 2023
ಜನ ಇಸ್ರೋದ ಸಾಧನೆಗಳಿಗೆ ತಮ್ಮ ಸಂತೋಷ ಮತ್ತು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಚಂದ್ರಯಾನ-3 ರ ಯಶಸ್ವಿ ಉಡಾವಣೆಯು ದೇಶದ ಬಾಹ್ಯಾಕಾಶ ಕಾರ್ಯಕ್ರಮಕ್ಕೆ ಒಂದು ಮೈಲಿಗಲ್ಲನ್ನು ಸೂಚಿಸುತ್ತದೆ. ಹೀಗಾಗಿ ದೇಶದ ಜನ ಚಂದ್ರನ ಮೇಲೆ ಉಪಗ್ರಹವನ್ನು ಸುರಕ್ಷಿತವಾಗಿ ಇಳಿಸಲು ಪ್ರಾರ್ಥನೆಗಳನ್ನು ಸಲ್ಲಿಸುತ್ತಿದ್ದಾರೆ.
Another milestone for our very own @isro. To the moon and more. #Chandrayaan3 #ISRO #ToTheMoon pic.twitter.com/XLHS3HtFjl
— Eastwind🕊🦅 (@SankunniS) July 14, 2023
ಭಾರತ ಈ ಹಿಂದೆ ಚಂದ್ರಯಾನ-1 ಮತ್ತು ಚಂದ್ರಯಾನ-2 ಮಿಷನ್‌ಗಳಲ್ಲಿ ಚಂದ್ರ ಮೇಲೆ ಉಪಗ್ರಹಗಳನ್ನು ಕಳುಹಿಸಿತ್ತು. ಚಂದ್ರಯಾನ-2 ಮಿಷನ್‌ನಲ್ಲಿ ಲ್ಯಾಂಡರ್ ಕೂಡ ಸೇರಿತ್ತು, ಆದರೆ ಅದು ಚಂದ್ರನ ಮೇಲೆ ಸುರಕ್ಷಿತವಾಗಿ ಇಳಿಯುವಲ್ಲಿ ಯಶಸ್ವಿಯಾಗಲಿಲ್ಲ. ಈ ಬಾರಿ ಚಂದ್ರಯಾನ-3 ಮಿಷನ್‌ನಲ್ಲಿ ಲ್ಯಾಂಡರ್ ವಿಕ್ರಮ್ ಮತ್ತು ಅದರೊಳಗಿನ ರೋವರ್ ಪ್ರಗ್ಯಾನ್ ಅನ್ನು ಚಂದ್ರನ ಮೇಲೆ ಇಳಿಸಲಾಗುತ್ತಿದೆ.
Chandrayaan3 Satellite is seperated and Ejected successfully on elliptical parking orbit.
— Dr. Vedika (@vishkanyaaaa) July 14, 2023
Congratulations India. Jai hind🇮🇳#Chandrayaan3 #isro pic.twitter.com/LIbibUbTP1
ಉಡಾವಣೆಯಾದ ಚಂದ್ರಯಾನ-3 ಭೂಮಿಯ ಸುತ್ತ 5 ರಿಂದ 6 ಬಾರಿ ಸುತ್ತಲಿದೆ. ಈ ಸಮಯದಲ್ಲಿ ಇದು 170 ಕಿಮೀ ವರೆಗೆ ಭೂಮಿಯ ಸಮೀಪಕ್ಕೆ ಬರುತ್ತದೆ ಮತ್ತು 36,500 ಕಿಮೀ ವರೆಗೆ ದೂರ ಹೋಗುತ್ತದೆ. ಇದು ಮುಂದಿನ ತಿಂಗಳು ಅಥವಾ ಅದಕ್ಕಿಂತ ಹೆಚ್ಚಿನ ಅವಧಿಗೆ ಪ್ರಯಾಣಿಸಲು ಅಗತ್ಯವಿರುವ ವೇಗವನ್ನು ಹೊಂದಿದೆ. ನಂತರ ಇದು ಚಂದ್ರನ 100 ಕಿಮೀ ಎತ್ತರದ ಕಕ್ಷೆಯನ್ನು ತಲುಪಲಿದೆ. ಚಂದ್ರನ ಮೇಲೂ ದೀರ್ಘವೃತ್ತದ ಕಕ್ಷೆಗಳನ್ನು ಮಾಡಿದ ನಂತರ ಸ್ಥಿರ ಸ್ಥಾನವನ್ನು ಸಾಧಿಸುತ್ತದೆ. ಇದರ ನಂತರ, ಅದು ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿಯುವ ಪ್ರಕ್ರಿಯೆಯನ್ನು ಪ್ರಾರಂಭಿಸುತ್ತದೆ. ಈ ಮಿಷನ್ ಅನ್ನು 10 ಹಂತಗಳಾಗಿ ವಿಂಗಡಣೆ ಮಾಡಲಾಗಿದೆ.












Click it and Unblock the Notifications