Chandrayaan-3: ಭಾರತೀಯರೇ ದಯವಿಟ್ಟು ಗಮನಿಸಿ ಮುಂದಿನ ನಿಲ್ದಾಣ ಚಂದ್ರ

ಚಂದ್ರನ ದಾರಿ ಹುಡುಕುತ್ತಾ ಸಾಗಿದ್ದ ಭಾರತದ ಗಗನ ನೌಕೆ, ಇನ್ನೇನು ತನ್ನ ಗುರಿಯನ್ನು ತಲುಪಿಬಿಟ್ಟಿದೆ. ಶತಕೋಟಿ ಭಾರತೀಯರ ಕನಸಿನ ಕೂಸಾಗಿದ್ದ ಚಂದ್ರಯಾನ-3 ಬಹುತೇಕ ಚಂದ್ರನ ಮೇಲ್ಮೈ ಸಮೀಪಕ್ಕೆ ತೆರಳಿದೆ. ಚಂದ್ರನ ಮೇಲ್ಮೈಗೆ ಲ್ಯಾಂಡರ್ ಇಳಿಸುವುದಕ್ಕಾಗಿ ಅದರ ವೇಗ ತಗ್ಗಿಸಲು ನಡೆಸಿರುವ ಕೊನೆಯ ಡಿ-ಬೂಸ್ಟಿಂಗ್‌ ಕಾರ್ಯ ಸಕ್ಸಸ್ ಆಗಿದೆ. ಹೀಗೆ ಭಾರತದ ಲ್ಯಾಂಡರ್ ಚಂದ್ರನ ಮೇಲ್ಮೈಯಿಂದ ಬಹುತೇಕ ಸಮೀಪದಲ್ಲೇ ಹಾರಾಡುತ್ತಿದೆ.

ಆಗಸ್ಟ್ 18ರ ಶುಕ್ರವಾರ ಮೊದಲ ಡಿ-ಬೂಸ್ಟಿಂಗ್‌ ನಡೆದಿತ್ತು, ಇಂದು ಬೆಳಗ್ಗೆ ಮತ್ತೊಂದು ಹಾಗೂ ಕೊನೇ ಡಿ-ಬೂಸ್ಟಿಂಗ್‌ ಕಾರ್ಯ ನಡೆದಿದೆ. ಈ ಮೂಲಕ ಈಗ ಭಾರತದ ವಿಕ್ರಮ್ ಲ್ಯಾಂಡರ್ ಚಂದ್ರನಿಗೆ ಅತ್ಯಂತ ಸಮೀಪ ಇರುವ 134 ಕಿಮೀ ದೂರದ ಕಕ್ಷೆ ತಲುಪಿದೆ. ಈ ಕಕ್ಷೆಯಿಂದಲೇ ಚಂದ್ರನ ದಕ್ಷಿಣ ಧ್ರುವ ಪ್ರದೇಶದಲ್ಲಿ ಲ್ಯಾಂಡಿಂಗ್‌ಗೆ ಇಸ್ರೋ ಪ್ರಯತ್ನಿಸಲಿದೆ. 25 ಕಿಲೋ ಮೀಟರ್ x 134 ಕಿಲೋ ಮೀಟರ್ ಕಕ್ಷೆ ಚಂದ್ರನ ಸಮೀಪದ ಕಕ್ಷೆಯಾಗಿದ್ದು ಚಂದ್ರನ ಮೇಲೆ ಇಳಿಯುವ ಪ್ರಕ್ರಿಯೆ ಆಗಸ್ಟ್ 23ರಂದು ನಡೆಯಲಿದೆ. ಹೀಗಾಗಿ ಇಡೀ ಜಗತ್ತು ಭಾರತದ ಕಡೆ ಕಣ್ಣಿಟ್ಟು ಕಾಯುತ್ತಿದೆ.

Chandrayaan-3 lander successfully done final deboosting

ನೀರು ಹುಡುಕುವ ಸಾಹಸ ಶುರು!

ಚಂದ್ರನ ಮೇಲೆ ನೀರು ಇದೆ ಎಂದು ಮೊದಲ ಬಾರಿಗೆ ಹೇಳಿದ್ದು ನಮ್ಮ ಇಸ್ರೋ. ಹೀಗೆ ಭಾರತದ ಹೆಮ್ಮೆ ಇಸ್ರೋ ಈ ಬಾರಿ ಚಂದ್ರನ ಮೇಲೆ ನೀರು ಇರುವ ಕುರುಹು ತೋರಿಸುವ ಮೂಲಕ ಜಗತ್ತಿಗೆ ಮಾದರಿಯಾಗಲು ಮುಂದಾಗಿದೆ. ಇದರ ಜೊತೆಗೆ ಮನಷ್ಯರು ಚಂದ್ರನ ಮೇಲೆ ವಾಸ ಮಾಡಲು ಅಗತ್ಯವಿರುವ ವಾತಾವರಣದ ಸಂಶೋಧನೆ ಕೂಡ ನಡೆಯಲಿದೆ. ಜೊತೆ ಜೊತೆಗೆ ಚಂದ್ರನ ಮೇಲೆ ಇರುವ ಖನಿಜಗಳ ಅಧ್ಯಯನ ಕೂಡ ನಡೆಯಲಿದ್ದು, ಈ ಮೂಲಕ ಚಂದ್ರನ ಮೇಲೆ ರೋವರ್ ಇಳಿಸಿರುವ ಕೆಲವೇ ದೇಶಗಳ ಪೈಕಿ ಭಾರತವು ಕೂಡ ಒಂದಾಗಲಿದೆ. ಅಲ್ಲದೆ ವಿಕ್ರಮ್ ಲ್ಯಾಂಡರ್ ಎಷ್ಟು ಶಕ್ತಿ ಹೊಂದಿದೆ ಅಂದರೆ, ಲ್ಯಾಂಡರ್ ತಾನಾಗಿಯೇ ತನ್ನ ಲ್ಯಾಂಡಿಂಗ್ ಸ್ಥಳ ನಿರ್ಧರಿಸುತ್ತದೆ.

ಚಂದ್ರನ ಮೇಲೆ ಲ್ಯಾಂಡಿಂಗ್ ಹೇಗೆ?

ಈ ಬಾರಿ ಇಸ್ರೋ ಅಂತ್ಯಾಧುನಿಕ ತಂತ್ರಜ್ಞಾನ ಬಳಸಿ ಚಂದ್ರನ ಯೋಜನೆಗೆ ಸಿದ್ಧತೆ ನಡೆಸಿತ್ತು. ಹೀಗಾಗಿ 'ಚಂದ್ರಯಾನ-3' ಲ್ಯಾಂಡರ್ ಹೈಫೈ ಆಗಿದೆ. ಲ್ಯಾಂಡರ್ ಪೊಸಿಷನ್ ಡಿಟೆಕ್ಷನ್ ಕ್ಯಾಮೆರಾ (LPDC) ಕೂಡ ಅತ್ಯಾಧುನಿಕ ತಂತ್ರಜ್ಞಾನವೇ ಆಗಿದೆ. ಇದು ವಿಕ್ರಮ್ ಲ್ಯಾಂಡರ್ ತನಗಾಗಿ ಸರಿಯಾದ ಮತ್ತು ಸಮತಟ್ಟು ಲ್ಯಾಂಡಿಂಗ್ ಸ್ಥಳ ಹುಡುಕಲು ಸಹಾಯ ಮಾಡುತ್ತೆ. ಕ್ಯಾಮೆರಾದ ಸಹಾಯದಿಂದ ವಿಕ್ರಮ್ ಲ್ಯಾಂಡರ್ ಎಲ್ಲಿ ಇಳಿಯುತ್ತಿದೆ? ಹೇಗೆ ಇಳಿಯುತ್ತಿದೆ? ಅನ್ನೋದನ್ನ ನೋಡಬಹುದು.

ಇಸ್ರೋ ಸಕ್ಸಸ್ ಕಾಣೋದು ಗ್ಯಾರಂಟಿ

ಕಳೆದ ಬಾರಿ ಭಾರತ ಚಂದ್ರನ ಮೇಲೆ ಲ್ಯಾಂಡರ್ ಇಳಿಸುವಾಗಲೆ ಸ್ವಲ್ಪ ಎಡವಟ್ಟಾಗಿತ್ತು. ಹೀಗೆ ಸಣ್ಣ ಸಮಸ್ಯೆ ಇಡೀ ಯೋಜನೆ ಹಾಳು ಮಾಡಿತ್ತು. ಈ ಕಾರಣಕ್ಕೆ ಎಚ್ಚರಿಕೆ ವಹಿಸಲಾಗಿದ್ದು, ಲ್ಯಾಂಡರ್ ಇಳಿಸುವ ಪ್ರತಿಕ್ಷಣ ಇಸ್ರೋಗೆ ಗೊತ್ತಾಗಲಿದೆ. ಈ ಲ್ಯಾಂಡರ್ ಪೊಸಿಷನ್ ಡಿಟೆಕ್ಷನ್ ಕ್ಯಾಮೆರಾ (LPDC) ಕೆಲಸವು ಏನೆಂದರೆ ವಿಕ್ರಮ್‌ಗೆ ಸರಿಯಾದ ಲ್ಯಾಂಡಿಂಗ್ ಸ್ಥಳ ತೋರಿಸುತ್ತೆ. ಹಾಗೂ ಲ್ಯಾಂಡರ್‌ನ ಅಪಾಯ ಪತ್ತೆ ಮತ್ತು ಅಪಾಯ ತಪ್ಪಿಸುವ ಕ್ಯಾಮರಾ (LHDAC) ಕೂಡ ಇದರಲ್ಲಿದೆ. ಜೊತೆಗೆ ಲೇಸರ್ ಆಲ್ಟಿಮೀಟರ್ (LASA), ಲೇಸರ್ ಡಾಪ್ಲರ್ ವೆಲಾಸಿಟಿಮೀಟರ್ (LDV) & ಲ್ಯಾಂಡರ್ ಹಾರಿಜಾಂಟಲ್ ವೆಲಾಸಿಟಿ ಕ್ಯಾಮೆರಾ (LHVC) ಈ ಪೇಲೋಡ್‌ ಒಟ್ಟಿಗೆ ಕೆಲಸ ಮಾಡುತ್ತದೆ.

Chandrayaan-3 lander successfully done final deboosting

ಇದೆಲ್ಲಾ ಭಾರತದ ಭವಿಷ್ಯ ತೋರಿಸುತ್ತಿದೆ. ಭಾರತ ಬಾಹ್ಯಾಕಾಶ ಲೋಕದಲ್ಲಿ ಮಿಂಚು ಹರಿಸುತ್ತಿದೆ. ಶಕ್ತಿಶಾಲಿ ದೇಶಗಳು ಕೂಡ ಭಾರತದ ಈ ಸಾಧನೆ ಕಂಡು ಹೆಮ್ಮೆ ಪಡುತ್ತಿವೆ. ಈ ಮೂಲಕ ಭಾರತ ತನ್ನ ಶಕ್ತಿ ಏನು ಎಂಬುದನ್ನು ಜಗತ್ತಿಗೇ ತೋರಿಸುತ್ತಿದೆ. ಭಾರತದ ಬಾಹ್ಯಾಕಾಶ ಸಾಧನೆ ಭವಿಷ್ಯದಲ್ಲಿ ದೊಡ್ಡ ಉದ್ಯಮವಾಗಿ ಬದಲಾಗುವ ನಿರೀಕ್ಷೆ ಕೂಡ ಇದ್ದು, ಇದರಿಂದ ಭಾರತಕ್ಕೆ ದೊಡ್ಡ ಲಾಭವಾಗಲಿದೆ. ಅಮೆರಿಕ ಬಿಟ್ಟರೆ ಭಾರತ ಇದೀಗ ಬಾಹ್ಯಾಕಾಶ ಲೋಕದ ಕಿಂಗ್ ಆಗಿದ್ದು, ಭವಿಷ್ಯದಲ್ಲಿ ನಂ.1 ಸ್ಥಾನ ಗ್ಯಾರಂಟಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+