Chandrayaan-3: ಅಬ್ಬಬ್ಬಾ.. ಎಷ್ಟು ಸುಂದರ ಚಂದ್ರನ ಮೆಲ್ಮೈ!

ಚಂದ್ರ... ಈ ಪದ ಕೇಳದೆ ಬೆಳೆಯುವ ಮಗುವಿಲ್ಲ, ತನ್ನ ಪ್ರಿಯತಮೆಯನ್ನು ಚಂದ್ರನಿಗೆ ಹೋಲಿಸಿ ಹೊಗಳದ ಪ್ರೇಮಿಯೂ ಇಲ್ಲ. ಹೀಗೆ ಮಾನವನ ಜೀವನದ ಅವಿಭಾಜ್ಯ ಅಂಗ ಚಂದ್ರ. ಮಾನವ ಬುದ್ಧಿ ಕಲಿತಾಗಲೇ ಚಂದ್ರನ ಸೌಂದರ್ಯಕ್ಕೆ ಮರುಳಾಗಿದ್ದ ಅನಿಸುತ್ತೆ. ಹೀಗಾಗಿ ಚಂದ್ರನ ಮೇಲೆ ಮನುಷ್ಯರಿಗೆ ವಿಪರೀತ ವ್ಯಾಮೋಹ. ಇಂತಿಪ್ಪ ಚಂದ್ರನ ಬೆನ್ನು ಬಿದ್ದಿರುವ ಭಾರತ ಮತ್ತೊಂದು ಸಕ್ಸಸ್ ಕಂಡಿದೆ, ಚಂದ್ರನ ವಿಡಿಯೋ ರಿಲೀಸ್ ಮಾಡಿದೆ.

ನಿನ್ನೆಯಷ್ಟೇ ವಿಜ್ಞಾನಿಗಳು ಲ್ಯಾಂಡರ್ ಪ್ರತ್ಯೇಕಿಸುವ ಪ್ರಕ್ರಿಯೆ ಯಶಸ್ವಿಯಾಗಿ ಮುಗಿಸಿದ್ದರು. ಇಸ್ರೋ ಒಂದು ಕೆಲಸದಲ್ಲಿ ಸಕ್ಸಸ್ ಕಂಡ ಮರುದಿನ ಮತ್ತೊಂದು ಸರ್ಪ್ರೈಸ್ ನೀಡಿದ್ದು, 'ಚಂದ್ರಯಾನ-3' ಲ್ಯಾಂಡರ್ ಮೂಲಕ ಚಂದ್ರನ ಮೇಲ್ಮೈ ಸೆರೆ ಹಿಡಿಯಲಾಗಿದೆ. ಅದರ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ಕಿಚ್ಚು ಹೊತ್ತಿಸಿ, ಚಂದ್ರನ ಕೊನೇ ಕಕ್ಷೆ ಸೇರಿರುವ ಚಂದ್ರನ ಲ್ಯಾಂಡರ್ ಮೇಲಿನ ನಿರೀಕ್ಷೆ ಡಬಲ್ ಮಾಡಿದೆ. ವಿಕ್ರಮ್ ಲ್ಯಾಂಡರ್‌ ಹೊಂದಿರುವ ಲ್ಯಾಂಡರ್ ಪೊಸಿಷನ್ ಡಿಟೆಕ್ಷನ್ ಕ್ಯಾಮೆರಾ (LPDC) ವಿಡಿಯೋ ಸೆರೆಹಿಡಿದು ಭೂಮಿಗೆ ಕಳುಹಿಸಿದೆ. ವಿಕ್ರಮ್ ಲ್ಯಾಂಡರ್‌ನ ಕೆಳಭಾಗದಲ್ಲಿ LPDC ಅಳವಡಿಸಲಾಗಿದೆ.

Chandrayaan-3 lander sent first video to Earth

ಅತ್ಯಾಧುನಿಕ ತಂತ್ರಜ್ಞಾನ ಬಳಸಿದೆ ಇಸ್ರೋ

ಈ ಬಾರಿ ಇಸ್ರೋ ಅಂತ್ಯಾಧುನಿಕ ತಂತ್ರಜ್ಞಾನ ಬಳಸಿ ತನ್ನ ಚಂದ್ರನ ಯೋಜನೆಗೆ ಸಿದ್ಧತೆ ನಡೆಸಿತ್ತು. ಹೀಗಾಗಿ 'ಚಂದ್ರಯಾನ-3' ಲ್ಯಾಂಡರ್ ಹೈಫೈ ಆಗಿದೆ. ಲ್ಯಾಂಡರ್ ಪೊಸಿಷನ್ ಡಿಟೆಕ್ಷನ್ ಕ್ಯಾಮೆರಾ (LPDC) ಕೂಡ ಅತ್ಯಾಧುನಿಕ ತಂತ್ರಜ್ಞಾನವೇ ಆಗಿದೆ. ಇದು ವಿಕ್ರಮ್ ಲ್ಯಾಂಡರ್ ತನಗಾಗಿ ಸರಿಯಾದ ಮತ್ತು ಸಮತಟ್ಟು ಲ್ಯಾಂಡಿಂಗ್ ಸ್ಥಳ ಹುಡುಕಲು ಸಹಾಯ ಮಾಡುತ್ತೆ. ಕ್ಯಾಮೆರಾದ ಸಹಾಯದಿಂದ ವಿಕ್ರಮ್ ಲ್ಯಾಂಡರ್ ಎಲ್ಲಿ ಇಳಿಯುತ್ತಿದೆ? ಹೇಗೆ ಇಳಿಯುತ್ತಿದೆ? ಅನ್ನೋದನ್ನ ನೋಡಬಹುದು.

ಇಸ್ರೋ ಸಕ್ಸಸ್ ಕಾಣೋದು ಗ್ಯಾರಂಟಿ

ಕಳೆದ ಬಾರಿ ಭಾರತ ಚಂದ್ರನ ಮೇಲೆ ತನ್ನ ಲ್ಯಾಂಡರ್ ಇಳಿಸುವಾಗ ಸ್ವಲ್ಪ ಎಡವಟ್ಟನ್ನು ಮಾಡಿಕೊಂಡಿತ್ತು. ಹೀಗೆ ಸಣ್ಣ ಸಮಸ್ಯೆ ಇಡೀ ಯೋಜನೆಯನ್ನೇ ಹಾಳು ಮಾಡಿತ್ತು. ಈ ಕಾರಣಕ್ಕೆ ಈ ಬಾರಿ ಎಚ್ಚರಿಕೆ ವಹಿಸಲಾಗಿದ್ದು, ಲ್ಯಾಂಡರ್ ಇಳಿಸುವ ಪ್ರತಿಕ್ಷಣ ಇಸ್ರೋಗೆ ಗೊತ್ತಾಗಲಿದೆ. ಈ ಲ್ಯಾಂಡರ್ ಪೊಸಿಷನ್ ಡಿಟೆಕ್ಷನ್ ಕ್ಯಾಮೆರಾ (LPDC) ಕೆಲಸವು ಏನೆಂದರೆ ವಿಕ್ರಮ್‌ಗೆ ಸರಿಯಾದ ಲ್ಯಾಂಡಿಂಗ್ ಸ್ಥಳ ತೋರಿಸುತ್ತೆ. ಹಾಗೂ ಲ್ಯಾಂಡರ್‌ನ ಅಪಾಯ ಪತ್ತೆ ಮತ್ತು ಅಪಾಯ ತಪ್ಪಿಸುವ ಕ್ಯಾಮರಾ (LHDAC) ಕೂಡ ಇದರಲ್ಲಿದೆ. ಇಷ್ಟೆಲ್ಲದರ ಜೊತೆಗೆ ಲೇಸರ್ ಆಲ್ಟಿಮೀಟರ್ (LASA), ಲೇಸರ್ ಡಾಪ್ಲರ್ ವೆಲಾಸಿಟಿಮೀಟರ್ (LDV) & ಲ್ಯಾಂಡರ್ ಹಾರಿಜಾಂಟಲ್ ವೆಲಾಸಿಟಿ ಕ್ಯಾಮೆರಾ (LHVC) ಈ ಪೇಲೋಡ್‌ ಒಟ್ಟಿಗೆ ಕೆಲಸ ಮಾಡುತ್ತದೆ.

Chandrayaan-3 lander sent first video to Earth

500 ಮೀಟರ್ ಇರುವಾಗಲೇ ಅಲರ್ಟ್!

ಮೊದಲೇ ಹೇಳಿದಂತೆ ತಂತ್ರಜ್ಞಾನದ ವಿಚಾರದಲ್ಲಿ ಸಾಕಷ್ಟು ಹೊಸತನ್ನ ಬಳಸಿದ ಇಸ್ರೋ ಸಂಸ್ಥೆ, ಲ್ಯಾಂಡಿಂಗ್ ವಿಚಾರದಲ್ಲು ಬದಲಾವಣೆ ಮಾಡಿದೆ. ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲೆ ಇಳಿಯುವಾಗ ಅದರ ವೇಗ ಸೆಕೆಂಡಿಗೆ 2 ಮೀಟರ್ ಇರಲಿದೆ. ಎಲ್ಲಾ ಉಪಕರಣವನ್ನು ಲ್ಯಾಂಡಿಂಗ್ ಮಾಡು ಮೊದಲು ಸುಮಾರು 500 ಮೀಟರ್ ಇರುವಾಗಲೇ ಸಕ್ರಿಯಗೊಳಿಸಲಿದೆ ಇಸ್ರೋ. ಹೀಗೆ ಭಾರತದ ಬಾಹ್ಯಾಕಾಶ ಸಂಸ್ಥೆ ತನ್ನ ಕೆಲಸದಲ್ಲಿ ಸಾಕಷ್ಟು ಮುಂಜಾಗ್ರತೆ ವಹಿಸಿದ್ದು ಇತಿಹಾಸ ಸೃಷ್ಟಿಸುವುದು ಪಕ್ಕಾ. ಹೀಗಾಗಿ ಶತಕೋಟಿ ಭಾರತೀಯ ಪ್ರಜೆಗಳು ಉಸಿರು ಬಿಗಿಹಿಡಿದು ಆ ಕ್ಷಣಕ್ಕಾಗಿ ಕಾಯುತ್ತಿದ್ದಾರೆ.

Chandrayaan-3 lander sent first video to Earth

ಒಂದು.. ಎರಡು.. ಮೂರು.. ನಾಲ್ಕು.. ಹೀಗೆ ಇನ್ನು ಬರೀ ನಾಲ್ಕು ದಿನ ಉರುಳಿದರೆ ಸಾಕು. ಆಗಸ್ಟ್ 23 ಬಂದೇ ಬಿಡುತ್ತೆ, ಚಂದ್ರಯಾನ ಲ್ಯಾಂಡರ್ ಚಂದ್ರನ ಮೇಲೆ ಇಳಿದು ಭಾರತದ ಬಾವುಟವನ್ನು ಬಾಹ್ಯಾಕಾಶ ಕ್ಷೇತ್ರದಲ್ಲಿ ಮುಗಿಲೆತ್ತರಕ್ಕೆ ಹಾರಿಸಲಿದೆ. ಚಂದ್ರನ ಮೇಲೆ ಭಾರತದ ಲ್ಯಾಂಡರ್ ಇಳಿಯುವ ಪ್ರತಿ ಕ್ಷಣವೂ ಸಂಭ್ರಮ ಡಬಲ್ ಮಾಡಲಿದ್ದು, ದೇಶದ ಮೂಲೆ ಮೂಲೆಯಲ್ಲೂ ಸಂಭ್ರಮ ಮೇಳೈಸಲಿದೆ. ಭಾರತ ಈ ಸಾಧನೆ ಮಾಡಿದ್ರೆ ಜಗತ್ತಿನಲ್ಲಿ ಚಂದ್ರನ ಮೇಲೆ ಲ್ಯಾಂಡರ್ ಇಳಿಸಿದ ಕೆಲವೇ ದೇಶಗಳ ಪಾಲಿಗೆ ಭಾರತ ಕೂಡ ಸೇರಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+