Chandrayaan-3: ಬೆಳದಿಂಗಳ ಚಂದ್ರನನ್ನು ಚುಂಬಿಸಲು ಭಾರತ ಸಜ್ಜು!
ಚಂದ್ರಯಾನ-3 ಯೋಜನೆಯಲ್ಲಿ ಮತ್ತೊಂದು ವಿಸ್ಮಯ ನಡೆದಿದ್ದು, ಇಸ್ರೋ ಮಹತ್ವದ ಹಂತಕ್ಕೆ ಎಂಟ್ರಿಯಾಗಿದೆ. ಲ್ಯಾಂಡರ್ ಪ್ರತ್ಯೇಕಿಸುವ ಪ್ರಕ್ರಿಯೆ ಯಶಸ್ವಿಯಾಗಿ ನೆರವೇರಿದ್ದು, ಪ್ರೊಪಲ್ಷನ್ ಮಾಡ್ಯೂಲ್‌ನಿಂದ ಪ್ರತ್ಯೇಕವಾಗಿರುವ ಲ್ಯಾಂಡರ್ ಚಂದ್ರನಿಗೆ ಮತ್ತಷ್ಟು ಹತ್ತಿರ ಸಾಗಿದೆ. ಹಾಗೇ ಆಗಸ್ಟ್ 18, ಅಂದರೆ ನಾಳೆ ಸಂಜೆ ವೇಳೆಗೆ ಡೀ-ಬೂಸ್ಟಿಂಗ್ ನಡೆಯಲಿದ್ದು, ಲ್ಯಾಂಡರ್ ಹಂತ ಹಂತವಾಗಿ ಚಂದ್ರನ ಮೇಲ್ಮೈ ಮೇಲೆ ಇಳಿಯಲಿದೆ.
ಭಾರತದ ವಿಜ್ಞಾನಿಗಳು ಈ ಅದ್ಭುತ ಕ್ಷಣಕ್ಕಾಗಿಯೇ ಊಟ, ನಿದ್ದೆ ಬಿಟ್ಟು ಕಾಯುತ್ತಿದ್ದರು. ಮಧ್ಯಾಹ್ನ 1:15ರ ವೇಳೆಗೆ ಸರಿಯಾಗಿ ವಿಜ್ಞಾನಿಗಳು ತಮ್ಮ ಕಾರ್ಯದಲ್ಲಿ ಸಕ್ಸಸ್ ಆಗಿದ್ದು ಇನ್ನೇನು ಅಂತಿಮ ಹಂತಕ್ಕೆ ಸಿದ್ಧತೆ ಸಾಗಿದೆ. ಚಂದ್ರನ ಅಧ್ಯಯನಕ್ಕೆ ಜುಲೈನಲ್ಲಿ ಭಾರತ ಉಡಾಯಿಸಿದ್ದ ನೌಕೆಯೇ 'ಚಂದ್ರಯಾನ-3'. ಇದೀಗ ಭೂಮಿಯಿಂದ ಲಕ್ಷಾಂತರ ಕಿಲೋ ಮೀಟರ್ ದೂರ ಸಾಗಿರುವ ಚಂದ್ರಯಾನ-3 ನೌಕೆ ಇನ್ನೆನು ಚಂದ್ರನ ಮೇಲೆ ಇಳಿದು ತನ್ನ ಕೆಲಸ ಶುರು ಮಾಡಲಿದೆ. ನಿನ್ನೆ ಚಂದ್ರನ 4ನೇ ಕಕ್ಷೆಯಿಂದ ಇಸ್ರೋ ಸಂಸ್ಥೆ ವಿಜ್ಞಾನಿಗಳು ನೌಕೆಯನ್ನ 153 km x 163 km ಕಕ್ಷೆಗೆ ಸೇರಿಸಿದ್ದು, ಇದೀಗ ಲ್ಯಾಂಡರ್ ಪ್ರತ್ಯೇಕಿಸಲಾಗಿದೆ.

ಭಾರತ ಈಗ ಮತ್ತಷ್ಟು ಬಲಿಷ್ಠ!
ಬಾಹ್ಯಾಕಾಶ ಯೋಜನೆಗಳಲ್ಲಿ ಜಗತ್ತಿನ ಇತರ ವಿಜ್ಞಾನಿಗಳದ್ದು ಬೇರೆ ರೀತಿ ಪ್ಲ್ಯಾನ್, ಆದ್ರೆ ಭಾರತದ ವಿಜ್ಞಾನಿಗಳು ರಣತಂತ್ರ ಹೆಣೆಯುತ್ತಾರೆ. ಅತಿ ಕಡಿಮೆ ಖರ್ಚಿನಲ್ಲೇ, ಗುರುತ್ವದ ಬಲ ಉಪಯೋಗಿಸಿಕೊಂಡು ಯೋಜನೆ ಕೈಗೊಳ್ಳುತ್ತಾರೆ. ಈಗಲೂ ಅಷ್ಟೇ ಚಂದ್ರಯಾನ-3 ಯೋಜನೆ ಅದೇ ತತ್ವದ ಆಧಾರದಲ್ಲಿ, ಅತಿ ಕಡಿಮೆ ವೆಚ್ಚದಲ್ಲಿ ಕೈಗೊಂಡಿದ್ದ ಪ್ರಾಜೆಕ್ಟ್. ನಿನ್ನೆ ಚಂದ್ರನ 5ನೇ ಮತ್ತು ಕೊನೇ ಕಕ್ಷೆಗೆ ಎಂಟ್ರಿಕೊಟ್ಟಿದ್ದ ಭಾರತದ 'ಚಂದ್ರಯಾನ-3' ನೌಕೆ ಈಗ ಇತಿಹಾಸ ಬರೆದಿದೆ. ಈ ಮೂಲಕ ಭಾರತ ಬಾಹ್ಯಾಕಾಶ ಕ್ಷೇತ್ರದಲ್ಲಿ ಅಮೆರಿಕ ಮತ್ತು ಇತರ ಶ್ರೀಮಂತ ರಾಷ್ಟ್ರಗಳನ್ನು ಮೀರಿ ಬೆಳೆಯುತ್ತಿರುವ ಮುನ್ಸೂಚನೆ ನೀಡಿದೆ.
Chandrayaan-3 Mission:
— ISRO (@isro) August 17, 2023
‘Thanks for the ride, mate! 👋’
said the Lander Module (LM).
LM is successfully separated from the Propulsion Module (PM)
LM is set to descend to a slightly lower orbit upon a deboosting planned for tomorrow around 1600 Hrs., IST.
Now, 🇮🇳 has3⃣ 🛰️🛰️🛰️… pic.twitter.com/rJKkPSr6Ct
ಇಷ್ಟುದಿನ ಚಂದ್ರಯಾನ-3 ಬಾಹ್ಯಾಕಾಶ ನೌಕೆಯ ಕಕ್ಷೆ ಎತ್ತರಿಸುವ ಕಾರ್ಯ ನಡೆದಿತ್ತು. ಈಗ ಸಂಪೂರ್ಣವಾಗಿ ಎಲ್ಲಾ ಕೆಲಸ ಮುಗಿಸಿ, ಚಂದ್ರನ ಕೊನೆಯ ಕಕ್ಷೆಯಲ್ಲಿ ಪ್ರದಕ್ಷಿಣೆ ಹಾಕುತ್ತಿದೆ ಇಸ್ರೋ ನೌಕೆ. ಹೀಗಾಗಿ ಕೊನೇ ಕೆಲಸಕ್ಕೆ ಇಸ್ರೋ ವಿಜ್ಞಾನಿಗಳು ಸಜ್ಜಾಗಿದ್ರು, ಲ್ಯಾಂಡರ್ ಮಾಡ್ಯೂಲ್‌ನಿಂದ ಪ್ರೊಪಲ್ಷನ್ ಮಾಡ್ಯೂಲ್ ಅಂದ್ರೆ ಉಡ್ಡಯನ ವಾಹಕವನ್ನು ಇಂದು ಮಧ್ಯಾಹ್ನ ಪ್ರತ್ಯೇಕಿಸಲಾಗಿದೆ. ಅತ್ಯಂತ ಕಠಿಣ ಕೆಲಸವನ್ನು ಇಸ್ರೋ ವಿಜ್ಞಾನಿಗಳ ಬಳಗ ಅತ್ಯಂತ ಸುಲಭವಾಗಿ ನಿರ್ವಹಿಸಿದೆ. ಅದರಲ್ಲೂ ಬೆಂಗಳೂರಿಂದ ಈ ಕಾರ್ಯವನ್ನ ನಡೆಸಿರುವುದು ಮತ್ತೊಂದು ಹೆಮ್ಮೆಯ ವಿಚಾರ.

ಚಂದ್ರನ ಮೇಲೆ ಇಳಿಯಲು ಒಂದೆರಡು ಹೆಜ್ಜೆ!
ಈಗಿನ ಮಾಹಿತಿಗಳ ಪ್ರಕಾರ ಭಾರತದ ಟಾರ್ಕೆಟ್ ಆಗಿರುವ ಚಂದ್ರನ ದಕ್ಷಿಣ ಧ್ರುವದಿಂದ ಭಾರತದ ಚಂದ್ರಯಾನ-3 ನೌಕೆ ಕೇವಲ 163 ಕಿಲೋ ಮೀಟರ್ ಎತ್ತರದಲ್ಲಿ ಹಾರಾಡ್ತಿದೆ. ಆಗಸ್ಟ್ 5ರಿಂದ ಹಂತ ಹಂತವಾಗಿ ಚಂದ್ರನ ಕಕ್ಷೆಯಿಂದ ಕಕ್ಷೆಗೆ ನೌಕೆ ದಾಟಿಸುವಲ್ಲಿ ಇಸ್ರೋ ವಿಜ್ಞಾನಿಗಳು ಸಕ್ಸಸ್ ಆಗಿದ್ದರು. ನಿನ್ನೆ ಅಂದರೆ ಆಗಸ್ಟ್ 16ರ ಬೆಳಗ್ಗೆ, ಭಾರತೀಯರು ಜಸ್ಟ್ ಬ್ರೇಕ್ ಫಾಸ್ಟ್ ತಿನ್ನುವಾಗಲೇ ಅಮೃತ ಕುಡಿದಂತಹ ಸುದ್ದಿ ಸಿಕ್ಕಿತ್ತು. ಚಂದ್ರಯಾನ ನೌಕೆ ಯಶಸ್ವಿಯಾಗಿ ಚಂದ್ರನ ಕೊನೆಯ ಕಕ್ಷೆ ಸೇರಿತ್ತು. ಈಗ ಮತ್ತೊಂದು ಮಹತ್ವದ ಕಾರ್ಯ ಕೂಡ ಕಂಪ್ಲೀಟ್ ಆಗಿದ್ದು, ಭಾರತದ ಲ್ಯಾಂಡರ್ ಚಂದ್ರನ ಮೇಲೆ ಇಳಿಯಲಿದೆ.
ಅಷ್ಟಕ್ಕೂ ಇತರ ದೇಶಗಳಿಗೆ ಹೋಲಿಕೆ ಮಾಡಿದರೆ ಅತಿ ಕಡಿಮೆ ವೆಚ್ಚದಲ್ಲಿ ಭಾರತದ ಇಸ್ರೋ 'ಚಂದ್ರಯಾನ-3' ಯೋಜನೆ ಕೈಗೊಂಡಿದೆ. ಚಂದ್ರಯಾನ-3 ಮಿಷನ್‌ನ ಒಟ್ಟು ವೆಚ್ಚ 615 ಕೋಟಿ ರೂಪಾಯಿ. ಇದು ಚಂದ್ರಯಾನ-2ರ ವೆಚ್ಚಕ್ಕಿಂತಲು ಕಡಿಮೆ ಎನ್ನಬಹುದು. ಜುಲೈ 14ರ ಮಧ್ಯಾಹ್ನ 2:35ಕ್ಕೆ ಶ್ರೀಹರಿಕೋಟದ ಸತೀಶ್ ಧವನ್ ಉಡ್ಡಯನ ಕೇಂದ್ರದಿಂದ ಭಾರತದ ಚಂದ್ರಯಾನ-3 ಲಾಂಚ್ ಆಗಿತ್ತು. 3900 ಕೆಜೆ ತೂಕದ ಬಾಹ್ಯಾಕಾಶ ನೌಕೆ & ರೋವರ್‌ನ್ನು ಹೊತ್ತ ರಾಕೆಟ್ ಬಾಹ್ಯಾಕಾಶ ತಲುಪಿ ಈಗಾಗಲೇ ತನ್ನ ಗುರಿಯ ಅಂತಿಮ ಘಟ್ಟ ತಲುಪಿದೆ.












Click it and Unblock the Notifications