ಚಂದ್ರಯಾನ-2 ಮುಗಿದಿಲ್ಲ, ಆರ್ಬಿಟರ್ ನಿಂದ ಒಂದು ವರ್ಷ ಅಧ್ಯಯನ

Recommended Video

      ಚಂದ್ರಯಾನ 2 ಮುಗಿದಿಲ್ಲ ಎಂದು ಅಚ್ಚರಿ ಮೂಡಿಸಿದ ಇಸ್ರೋ..? | Chandrayaan 2 | Oneindia Kannada

      ಬೆಂಗಳೂರು, ಸೆಪ್ಟೆಂಬರ್ 7: ಚಂದ್ರಯಾನ ಮುಗಿದಿಲ್ಲ ಇನ್ನು ಒಂದು ವರ್ಷ ಆರ್ಬಿಟರ್ ಅಧ್ಯಯನ ನಡೆಸಲಿದೆ.

      ಚಂದ್ರಯಾನ-2 ಮುಗಿದಿಲ್ಲ, ವಿಕ್ರಮ್ ಲ್ಯಾಂಡರ್ ಹಾಗೂ ಪ್ರಗ್ಯಾನ್ ರೋವರ್ ಭವಿಷ್ಯದ ಬಗ್ಗೆ ಅನಿಶ್ಚಿತತೆ ಎದುರಾಗಿರುವುದರಿಂದ ಚಂದ್ರಯಾನ-2 ಮುಗಿದೇ ಹೋಯಿತು ಎಂದು ಹೇಳುವ ಅಗತ್ಯವಿಲ್ಲ.

      ಚಂದ್ರಯಾನ-2ರ ಆರ್ಬಿಟರ್ ಇನ್ನೂ ಒಂದು ವರ್ಷ ಚಂದ್ರನ ಸುತ್ತಲೂ ಗಿರಕಿ ಹೊಡೆಯುತ್ತಲೇ ಇರಲಿದೆ.ಅತ್ಯಾಧುನಿಕ ಆರ್ಬಿಟರ್ ಮುಂದಿನ 365 ದಿನಗಳ ಕಾಲ ಚಂದ್ರನನ್ನು ಸುತ್ತುವರಿದು, ಮ್ಯಾಲಾಳುವಿನಲ್ಲಿರುವ ಕೇಂದ್ರಕ್ಕೆ ಮಾಹಿತಿ ರವಾನಿಸುತ್ತದೆ ಎನ್ನುವ ಮಾಹಿತಿ ಲಭ್ಯವಾಗಿದೆ.

      ಚಂದ್ರನ ಮೇಲ್ಮೈನಿಂದ 100ಕಿ.ಮೀ ದೂರದಲ್ಲಿ ಈ ಆರ್ಬಿಟರ್ ಸುತ್ತುತ್ತಿದ್ದು, ಮೇಲ್ಮೈಗೆ ಸಂಬಂಧಿಸಿದ ಸಾಕಷ್ಟು ವೈಜ್ಞಾನಿಕ, ಭೌಗೋಳಿಕ ಹಾಗೂ ಇತರೆ ಸೂಕ್ಷ್ಮ ಮಾಹಿತಿ ಸಂಗ್ರಹಿಸಲಿದೆ.

      ಚಂದ್ರಯಾನ-1 ರಲ್ಲಿಯೂ ಈ ಆರ್ಬಿಟರ್ ಇತ್ತು. ಆದರೆ ಈ ಆರ್ಬಿಟರ್ 8 ಪ್ಲೇಲೋಡ್‌ಗಳು ಆರ್ಬಿಟರ್‌ನಲ್ಲಿವೆ. ಇದರಲ್ಲಿನ ಎರಡು ಕ್ಯಾಮರಾ ಅತ್ಯಾಧುನಿಕ ಹಾಗೂ ಸುಧಾರಿತ ತಂತ್ರಜ್ಞಾನದ್ದಾಗಿದೆ.

      ವಿಕ್ರಮ್ ಮಾಹಿತಿ ನೀಡಲಿದೆ ಆರ್ಬಿಟರ್

      ವಿಕ್ರಮ್ ಮಾಹಿತಿ ನೀಡಲಿದೆ ಆರ್ಬಿಟರ್

      ಆರ್ಬಿಟರ್‌ನಲ್ಲಿನ ಹೈ ರೆಸಲ್ಯೂಷನ್ ಕ್ಯಾಮರಾದಿಂದ ವಿಕ್ರಮ್ ಲ್ಯಾಂಡರ್ ಬಗೆಗಿನ ನಿರ್ದಿಷ್ಟ ಮಾಹಿತಿ ಇಸ್ರೋಗೆ ಲಭ್ಯವಾಗಲಿದೆ. 0.32 ಮೀಟರ್ ದೂರದಿಂದಲೇ ಚಿತ್ರವನ್ನು ಈ ಕ್ಯಾಮರಾ ಸೆರೆ ಹಿಡಿಯಬಹುದಾಗಿದೆ. ಇಲ್ಲವಾದಲ್ಲಿ ನಾಸಾದ ಉಪಗ್ರಹಗು ಕೂಡ ಶೀಘ್ರವೇ ಈ ಬಗ್ಗೆ ಮಾಹಿತಿ ನೀಡುವ ಸಾಧ್ಯತೆ ಇದೆ.

      ಸಮಸ್ಯೆ ಉಂಟಾಗಿದ್ದೆಲ್ಲಿ?

      ಸಮಸ್ಯೆ ಉಂಟಾಗಿದ್ದೆಲ್ಲಿ?

      ಲ್ಯಾಂಡರ್‌ಗೆ 5 ಥರ್ಸ್ಟರ್ ಇರುತ್ತದೆ. ಚಂದ್ರನ ಮೇಲ್ಮೈಗೆ ಇಳಿಯುವಾಗ ಪರಿಸ್ಥಿತಿಗೆ ಅನುಗುಣವಾಗಿ ಈ ಥರ್ಸ್ಟರ್ ಗಳು ಕಾರ್ಯ ನಿರ್ವಹಣೆ ಆರಂಭಿಸುತ್ತವೆ. ಆದರೆ ಲ್ಯಾಂಡರ್ 90 ಡಿಗ್ರಿ ಕೋನಕ್ಕೆ ಲಂಬವಾಗಿ ತಿರುಗುವ ಸಂದರ್ಭದಲ್ಲಿ ಸಮತೋಲನ ಕಳೆದುಕೊಂಡರೆ ಸಮಸ್ಯೆಯಾಗುತ್ತದೆ.ಇದಕ್ಕಾಗಿಯೇ ಅತ್ಯಂತ ಸೂಕ್ಷ್ಮ ಕಾರ್ಯಾಚರಣೆ ಎಂದು ಇಸ್ರೋ ಹೇಳಿತ್ತು.ಲ್ಯಾಂಡರ್‌ ವೇಗ ಕಡಿಮೆಯಾದ ಬಳಿಕ ಈ ಥರ್ಸ್ಟರ್ ಉರಿದುಕೊಂಡು 90 ಡಿಗ್ರಿಗೆ ಲಂಬವಾಗಿ ತಿರುಗುವಾಗ ಸಮತೋಲನ ಕಳೆದುಕೊಂಡಿರುವ ಕಾರಣದಿಂದ ಲ್ಯಾಂಡರ್ಸಂಪರ್ಕ ಕಳೆದುಕೊಂಡಿರಬಹುದು ಎಂದು ಅಂದಾಜಿಸಲಾಗಿದೆ.

      ನಿರೀಕ್ಷೆ ಏನಿದೆ?

      ನಿರೀಕ್ಷೆ ಏನಿದೆ?

      ಆಟೋಮ್ಯಾಟಿಕ್ ಲ್ಯಾಂಡರ್ ಆಗಿರುವುದರಿಂದ ಸಣ್ಣಪುಟ್ಟ ತಾಂತ್ರಿಕ ದೋಷಗಳ ಹೊರತಾಗಿಯೂ ಕೊನೆಯ ಕ್ಷಣದಲ್ಲಿ ಕಾರ್ಯನಿರ್ವಹಣೆಯ ಸಣ್ಣ ಭರವಸೆ ಇದೆ. ಒಂದೊಮ್ಮೆ ವಿಫಲವಾಗಿದ್ದರೆ ನಿರ್ದಿಷ್ಟ ಕಾರಣ ಗೊತ್ತಾದರೆ ಮುಂದಿನ ಯೋಜನೆಯಲ್ಲಿ ಸುಧಾರಿಸಿಕೊಳ್ಳಲು ಅವಕಾಶ ದೊರೆತಂತಾಗುತ್ತದೆ.

      ವೈಫಲ್ಯ ಹೊಸತೇನಲ್ಲ

      ವೈಫಲ್ಯ ಹೊಸತೇನಲ್ಲ

      ವಿಜ್ಞಾನ ಹಾಗೂ ತಂತ್ರಜ್ಞಾನದಲ್ಲಿ ಅತ್ಯುನ್ನತ ಸಾಧನೆಗೈದಿರುವ ಇಸ್ರೇಲ್ ಕೂಡ ಕಳೆದ ಏ.11ರಂದು ಚಂದ್ರಯಾನ ಮಾಡಲು ಹೋಗಿ ಎಡವಿತ್ತು. ಲ್ಯಾಂಡರ್ ವೈಫಲ್ಯದಿಂದ ಯಾನ ಸಾರ್ಥಕವಾಗಿರಲಿಲ್ಲ. ಅಂದಹಾಗೆ ಇಲ್ಲಿಯವರೆಗ 110 ಬಾರಿ ಚಂದ್ರನ ಮೇಲ್ಮೈ ಮೇಲೆ ಲ್ಯಾಂಡರ್ ಇಳಿಸುವ ಪ್ರಯತ್ನವಾಗಿದ್ದು, ಇದರಲ್ಲಿ 41 ಬಾರಿ ವೈಫಲ್ಯ ಎದುರಿಸಬೇಕಾಗಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+