Covid 19: ಭಾರತದ ಸಕತ್ ಡೇಂಜರ್ ಸಿಟಿಗಳ ಪಟ್ಟಿ

ಕೊರೊನಾವೈರಸ್ ಸೋಂಕು ಹರಡದಂತೆ ಮತ್ತೊಂದು ಅವಧಿಗೆ ಲಾಕ್ಡೌನ್ ವಿಸ್ತರಿಸಲಾಗಿದೆ. ಮೇ 18ರಿಂದ ಜಾರಿಗೆ ಬರುವಂತೆ ಲಾಕ್ಡೌನ್ 4.0 ಮಾರ್ಗಸೂಚಿಯನ್ನು ಕೇಂದ್ರ ಗೃಹ ಸಚಿವಾಲಯ ನೀಡಿದೆ. ಕೊವಿಡ್ ನಿಯಂತ್ರಣವೂ ಮಾಡಬೇಕು, ಜೊತೆಗೆ ದೇಶದ ಆರ್ಥಿಕ ಚಟುವಟಿಕೆಗಳನ್ನು ಆರಂಭಿಸಬೇಕು ಒತ್ತಡದಲ್ಲಿರುವ ಸರ್ಕಾರ ಈ ಬಾರಿ ಹಲವು ವಿನಾಯಿತಿಗಳನ್ನು ನೀಡಿದೆ. ಆದರೆ, ಈ ನಗರಗಳಲ್ಲಿ ಮಾತ್ರ ಕಠಿಣ ನಿಗಾ ಇರಿಸಲು ಸೂಚನೆ ಸಿಕ್ಕಿದೆ.

ದೇಶದಲ್ಲಿ ಕೊರೊನಾ ಸೋಂಕು ಹೆಚ್ಚಲು ಕಾರಣವಾಗಿರುವ 12 ರಾಜ್ಯಗಳ ಮೇಲೆ ಕೇಂದ್ರ ಸರ್ಕಾರ ವಿಶೇಷ ನಿಗಾ ಇಟ್ಟಿದೆ. ಮಿಕ್ಕಂತೆ ಕೇಂದ್ರ ಗೃಹ ಸಚಿವಾಲಯ ನೀಡಿದ ಮಾರ್ಗಸೂಚಿಯಂತೆ ಕೆಂಪು, ಹಸಿರು ಹಾಗೂ ಕಿತ್ತಳೆ ವಲಯವನ್ನು ನಿರ್ಧರಿಸುವ ಅಧಿಕಾರ ಆಯಾ ರಾಜ್ಯಗಳಿಗೆ ನೀಡಲಾಗಿದೆ. ಜೊತೆಗೆ ಅಂತಾರಾಜ್ಯ ಸಾರಿಗೆ ಸಂಪರ್ಕ ಬಗ್ಗೆ ಆಯಾ ರಾಜ್ಯಗಳೇ ನಿರ್ಧರಿಸಬಹುದಾಗಿದೆ.

ಮಹಾರಾಷ್ಟ್ರ, ತಮಿಳುನಾಡು, ದೆಹಲಿ, ಗುಜರಾತ್, ಆಂಧ್ರಪ್ರದೇಶ, ತೆಲಂಗಾಣ, ರಾಜಸ್ಥಾನ, ಪಶ್ಚಿಮ ಬಂಗಾಳ, ಉತ್ತರ ಪ್ರದೇಶ, ಪಂಜಾಬ್ ಹಾಗೂ ಒಡಿಶಾ ರಾಜ್ಯಗಳಲ್ಲಿನ ಪ್ರಮುಖ ನಗರಗಳು ಸಕತ್ ಡೇಂಜರ್ ಪಟ್ಟಿಯಲ್ಲಿವೆ.ಲಾಕ್‌ಡೌನ್‌ 4ರ ವೇಳೆ ಹೆಚ್ಚಿನ ನಿಗಾ ವಹಿಸಲು ಸೂಚಿಸಲಾಗಿದೀ.

Centre wants strict curbs to continue in these cities

ದೇಶದ 30 ಪ್ರದೇಶಗಳಲ್ಲಿ ಲಾಕ್‌ಡೌನ್‌ ನಿಯಮಗಳನ್ನು ಕಠಿಣವಾಗಿ ಮುಂದುವರಿಸುವ ಲೆಕ್ಕಾಚಾರ ಮಾಡಲಾಗಿದೆ. ದೇಶದ ಒಟ್ಟು ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ 79ರಷ್ಟು ಕೇಸ್‌ಗಳು ಈ ಪ್ರದೇಶಗಳಲ್ಲಿ ದಾಖಲಾಗಿದೆ. ಈ ಪ್ರದೇಶಗಳಲ್ಲಿ ಹೊಸ ಕೇಸ್‌ಗಳು ಇನ್ನು ಹೆಚ್ಚಾಗುತ್ತಲೇ ಇದೆ.

ಕೊರೊನಾ ಸೋಂಕಿನ ಭೀತಿ ಹೆಚ್ಚಾಗಿರುವ ಭಾರತದ ಸಕತ್ ಡೇಂಜರ್ ಸಿಟಿಗಳು;

ಮಹಾರಾಷ್ಟ್ರ: ಮುಂಬೈ, ಥಾಣೆ, ಸೋಲಾಪುರ, ನಾಸಿಕ್, ಔರಂಗಬಾದ್, ಪಾಲ್ಘರ್
ತಮಿಳುನಾಡು: ತಿರುವಳ್ಳೂರು, ಕಡಲೂರು, ಗ್ರೇಟರ್ ಚೆನ್ನೈ, ಚೆಂಗಲ್ ಪಟ್ಟು, ಅರಿಯಲೂರು ಹಾಗೂ ವಿಲ್ಲುಪುರಂ.
ಗುಜರಾತ್: ಅಹಮದಾಬಾದ್, ಸೂರತ್ ಹಾಗೂ ವಡೋದರಾ.
ರಾಜಸ್ಥಾನ: ಜೈಪುರ, ಜೋಧ್ ಪುರ್, ಉದಯಪುರ್
ಪಶ್ಚಿಮ ಬಂಗಾಳ: ಕೋಲ್ಕತ್ತಾ, ಹೌರಾ
ಮಧ್ಯಪ್ರದೇಶ: ಇಂದೋರ್, ಭೋಪಾಲ್.
ಉತ್ತರಪ್ರದೇಶ: ಆಗ್ರಾ, ಮೀರತ್.
ಆಂಧ್ರಪ್ರದೇಶ: ಕರ್ನೂಲ್.
ತೆಲಂಗಾಣ: ಗ್ರೇಟರ್ ಹೈದರಾಬಾದ್
ಒಡಿಶಾ: ಬೆಹರಂಪುರ್
ದೆಹಲಿ: ದೆಹಲಿ ಸಿಟಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+