'ಕೆಟ್ಟ-ಕೊಳಕು' ವಿಷಯಗಳನ್ನು ಒಳಗೊಂಡ 827 ವೆಬ್ ಸೈಟ್ ಗಳಿಗೆ ತಡೆ
ನವದೆಹಲಿ, ಅಕ್ಟೋಬರ್ 24: 'ಕೆಟ್ಟ-ಕೊಳಕು' ವಿಷಯಗಳನ್ನು ಒಳಗೊಂಡ 827 ವೆಬ್ ಸೈಟ್ ಗಳಿಗೆ ತಡೆಯೊಡ್ಡಬೇಕು ಎಂದು ಕೇಂದ್ರ ಸರಕಾರವು ಇಂಟರ್ ನೆಟ್ ಸೇವೆ ಒದಗಿಸುವವರಿಗೆ ಸೂಚನೆ ನೀಡಿದೆ. ಉತ್ತರಾಖಂಡ್ ಹೈ ಕೋರ್ಟ್ ಆದೇಶದ ಅನುಸಾರವಾಗಿ ಈ ನಿರ್ದೇಶನ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಕೋರ್ಟ್ ನಿಂದ 857 ವೆಬ್ ಸೈಟ್ ಗಳ ಹೆಸರನ್ನು ಸೂಚಿಸಲಾಗಿತ್ತು. ಆದರೆ ಆ ಪೈಕಿ 30 ಪೋರ್ಟಲ್ ಗಳಲ್ಲಿ ಅಂಥ ಆಕ್ಷೇಪಾರ್ಹವಾದ ವಿಷಯಗಳು ಇಲ್ಲ ಎಂಬ ಕಾರಣಕ್ಕೆ ಅವುಗಳನ್ನು ಪಟ್ಟಿಯಿಂದ ಕೈ ಬಿಡಲಾಗಿದೆ. ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯವು ಈ ವೆಬ್ ಸೈಟ್ ಗಳನ್ನು ನಿಷೇಧ ಮಾಡುವಂತೆ ಡಿಪಾರ್ಟ್ ಮೆಂಟ್ ಆಫ್ ಟೆಲಿಕಾಂಗೆ ತಿಳಿಸಿದೆ.

ಉತ್ತರಾ ಖಂಡ್ ಹೈ ಕೋರ್ಟ್ ಆದೇಶದ ಅನ್ವಯ ಎಲ್ಲ ಇಂಟರ್ ನೆಟ್ ಸೇವೆ ಪರವಾನಗಿಯವರಿಗೂ ತಕ್ಷಣದಿಂದಲೇ ಅಗತ್ಯ ಕ್ರಮ ತೆಗೆದುಕೊಳ್ಳಲು ಸೂಚಿಸಲಾಗಿದೆ. 827 ವೆಬ್ ಸೈಟ್ ಗಳ ಸ್ಥಗಿತ ಮಾಡಲು ನಿರ್ದೇಶನ ನೀಡಲಾಗಿದೆ ಎಂದು ಟೆಲಿಕಾಂ ಡಿಪಾರ್ಟ್ ಮೆಂಟ್ ನಿಂದ ತಿಳಿಸಲಾಗಿದೆ.











Click it and Unblock the Notifications