ಕರ್ನಾಟಕಕ್ಕೆ ಗುಡ್‌ನ್ಯೂಸ್: ₹1,264 ಕೋಟಿ ಬಳ್ಳಾರಿ-ಗುಂತಕಲ್ ಹೊಸ ರೈಲ್ವೆ ಯೋಜನೆಗೆ ಕೇಂದ್ರ ಅಸ್ತು
ನವದೆಹಲಿ: ಕರ್ನಾಟಕದಾದ್ಯಂತ 52,000 ಕೋಟಿ ರೂಪಾಯಿ ವೆಚ್ಚದಲ್ಲಿ ವಿವಿಧ ಹಂತದಲ್ಲಿ ರೈಲುಗಳು ಯೋಜನೆಗಳು ಪ್ರಗತಿಯಲ್ಲಿವೆ. ಇದೀಗ ಕೇಂದ್ರ ಸರ್ಕಾರ ರಾಜ್ಯದ ಜನರಿಗೆ ಮತ್ತೊಂದು ಗುಡ್‌ನ್ಯೂಸ್ ನೀಡಿದೆ. ಆಂಧ್ರ ಪ್ರದೇಶ-ಕರ್ನಾಟಕ ರೈಲು ಸಾರಿಗೆ ಸುಧಾರಿಸುವ ನಿಟ್ಟಿನಲ್ಲಿ 02 ರೈಲ್ವೆ ಯೋಜನೆಗಳಿಗೆ ಅನುಮೋದನೆ ನೀಡಿದೆ. ಪಿಎಂ ಗತಿ ಶಕ್ತಿ ಯೋಜನೆಯಡಿ ಕೈಗೊಳ್ಳಲಾದ ಯೋಜನೆಗಳು ಇವಾಗಿವೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟದಲ್ಲಿ ಬಳ್ಳಾರಿ-ಗುಂತಕಲ್ ರೈಲು ವಿಭಾಗದ ಮೂರನೇ ಮತ್ತು ನಾಲ್ಕನೇ ಮಾರ್ಗಕ್ಕೆ ಅನುಮೋದನೆ ನೀಡಲಾಗಿದೆ. ಆಂಧ್ರಪ್ರದೇಶ ಮತ್ತು ಕರ್ನಾಟಕದ ನಡುವಿನ ಪ್ರಮುಖ ಆರ್ಥಿಕ ಕಾರಿಡಾರ್ ಇದಾಗಿದೆ. ಒಂದು 46 ಕಿಲೋ ಮೀಟರ್ ಉದ್ದದ ಮಲ್ಟಿ ಟ್ರ್ಯಾಕಿಂಗ್ ಯೋಜನೆ ಅನುಷ್ಠಾನಗೊಳಿಸಲಾಗುತ್ತದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.

ಮೂರು ವರ್ಷದಲ್ಲಿ ಯೋಜನೆ ಪೂರ್ಣ
ಒಟ್ಟು 1,264 ಕೋಟಿ ರೂ. ಹೂಡಿಕೆಯೊಂದಿಗೆ ಈ ಯೋಜನೆ ಸಾಕಾರ ಮಾಡಲಾಗುವುದು. ಅನುದಾನ ಸಹಿತ ಯೋಜನೆಗೆ ಒಪ್ಪಿಗೆ ನೀಡಲಾಗಿದ್ದು, ಶೀಘ್ರವೇ ಆರಂಭವಾಗಲಿದೆ. ಒಟ್ಟು ಮೂರು ಜಿಲ್ಲೆಗಳಿಗೆ ವ್ಯಾಪಿಸಿದ ರೈಲು ಮಾರ್ಗ ಮತ್ತೆ 46 ಕಿಲೋ ಮೀಟರ್ ಬಹು ರೈಲ್ವೆ ಟ್ರ್ಯಾಕ್ ರೂಪದಲ್ಲಿ ವಿಸ್ತರಣೆಯಾಗಲಿದೆ. ಎರಡು ರಾಜ್ಯಗಳ ಗಡಿ ಭಾಗದ ಸುಮಾರು ಏಳು ಲಕ್ಷ ಜನರಿಗೆ ಅನುಕೂಲವಾಗಲಿದೆ. 2029ರಲ್ಲಿ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ.
ಬಳ್ಳಾರಿ, ಗುಂತಕಲ್ ಐತಿಹಾಸಿಕ ದೇವಸ್ಥಾನ, ಪ್ರವಾಸಿ ತಾಣಗಳಿಗೆ ಉತ್ತೇಜನ ಸಿಗಲಿದೆ. ಕೈಗಾರಿಕೆ, ಶಿಕ್ಷಣ ವಲಯಕ್ಕೆ ಅನುಕೂಲವಾಗಲಿದೆ. ಇತ್ತ ಹೊಸಪೇಟೆಯಿಂದ ಹುಬ್ಬಳ್ಳಿವರೆಗಿನ ರೈಲು ಮಾರ್ಗಕ್ಕೆ ವಿಸೃತ ಯೋಜನಾ ವರದಿ (ಡಿಪಿಆರ್) ತಯಾರಿಸುವ ಕಾರ್ಯ ಪ್ರಗತಿಯಲ್ಲಿದೆ ಎಂದು ಹೇಳಿದರು.
ಇನ್ನೂ ಎರಡನೇಯದಾಗಿ ದೇಶದಲ್ಲಿ ರಾಸಾಯನಿಕ ವಲಯವನ್ನು ಹೊಸ ರೀತಿಯಲ್ಲಿ ಅಭಿವೃದ್ಧಿಪಡಿಸಲು ಹೊಸ ಯೋಜನೆಗೆ ಕೇಂದ್ರ ಸಂಪುಟ ಅನುಮೋದನೆ ಕೊಡಲಾಗಿದೆ ಎಂದು ಅವರು ತಿಳಿಸಿದರು.
ಬಳ್ಳಾರಿ-ಗುಂತಕಲ್ ವಿಭಾಗದಲ್ಲಿ 3ನೇ ಮತ್ತು 4ನೇ ರೈಲು ಮಾರ್ಗಗಳ ನಿರ್ಮಾಣಕ್ಕೆ ಸಂಪುಟ ನೀಡಿರುವ ಅನುಮೋದನೆಯು, ಕರ್ನಾಟಕ ಮತ್ತು ಆಂಧ್ರಪ್ರದೇಶ ರಾಜ್ಯಗಳಲ್ಲಿ ಸಂಪರ್ಕ ಹಾಗೂ ಸಾಗಾಣಿಕೆ ಸಾಮರ್ಥ್ಯವನ್ನು ಬಲಪಡಿಸಲಿದೆ.
— Narendra Modi (@narendramodi) July 24, 2026
ಇದು ಪ್ರಯಾಣಿಕರ ಸುಗಮ ಸಂಚಾರವನ್ನು ಹೆಚ್ಚಿಸಲಿದ್ದು, ಪ್ರಮುಖ ಉತ್ಪನ್ನಗಳ ಪರಿಣಾಮಕಾರಿ ಸಾಗಣೆಗೆ ಬೆಂಬಲ ನೀಡಲಿದೆ.…
ಹೈಡ್ರೋಜನ್ ರೈಲು ಯಶಸ್ವಿ ಕಾರ್ಯಾಚರಣೆ
ದೇಶದ ಮೊಟ್ಟ ಮೊದಲ ಬಾರಿಗೆ ಹೈಡ್ರೋಜನ್ ರೈಲಿಗೆ ಪ್ರಧಾನಿ ಚಾಲನೆ ನೀಡಿದೆ. ಈ ರೈಲು ಇಂದು ಶುಕ್ರವಾರ (ಜುಲೈ 24) ಬೆಳಗ್ಗೆ ಹೊತ್ತಿಗೆ ಯಾವುದೇ ಸಮಸ್ಯೆಗಳಿಲ್ಲದೆ 1,000 ಕಿಲೋಮೀಟರ್ ದೋಷರಹಿತ ಕಾರ್ಯಾಚರಣೆ ಯಶಸ್ವಿಯಾಗಿ ನಡೆಸಿದೆ. ಈ ರೈಲಿನ ಪ್ರತಿ ಕಿಲೋ ಮೀಟರ್ ಕಾರ್ಯಕ್ಷಮತೆ ಮೇಲೆ ಸೂಕ್ಷ್ಮ ನಿಗಾ ಇಟ್ಟಿದ್ದೇವೆ.
ಈ ರೈಲ್ವೆ ಯೋಜನೆಯು ಹೆಚ್ಚುವರಿ 16 ಮಿಲಿಯನ್ ಟನ್ ಸರಕು ಸಾಗಣೆಗೆ ಸಹಕಾರಿಯಾಗಲಿದೆ. ಇಂಗಾಲ ಡೈ ಆಕ್ಸೈಡ್ ಹೊರಸೂಸುವಿಕೆಯಲ್ಲಿನ ಕಡಿತವು 27 ಲಕ್ಷ ಮರಗಳನ್ನು ನೆಡುವುದಕ್ಕೆ ಸಮಾನವಾಗಿದೆ. ಅಂದರೆ 27 ಲಕ್ಷ ಮರಗಳು ಹೀರಿಕೊಳ್ಳುತ್ತಿದ್ದ ಇಂಗಾಲ ಡೈ ಆಕ್ಸೈಡ್ ಪ್ರಯಾಣದ ಹೊರ ಸೂಸುವಿಕೆ ಕಡಿಮೆ ಆಗಿದೆ ಎಂದು ಅವರು ಹರ್ಷ ವ್ಯಕ್ತಪಡಿಸಿದರು.
#WATCH | Delhi | Union Minister Ashwini Vaishnaw briefs the media on Cabinet decisions
— ANI (@ANI) July 24, 2026
He says, "The Cabinet has taken two big decisions - First, approval given for third and fourth line on Bellary-Guntakal rail section, which falls on the important economic corridor between… pic.twitter.com/F1nqkZMfXr


Click it and Unblock the Notifications
