ಓಕೆ ಎಂದ ಕೇಂದ್ರ: ಅಗತ್ಯ ಔಷಧಗಳು ಕೊಂಚ ತುಟ್ಟಿ

ನವದೆಹಲಿ, ಏ. 9: ಏಪ್ರಿಲ್ 1 ರಿಂದಲೇ ಕೆಲ ಅಗತ್ಯ ಔಷಧಗಳ ಬೆಲೆ ಏರಿಕೆಯಾಗಿದೆ. ಮಧುಮೇಹ, ಹೆಪಟೈಟಿಸ್‌ ಮತ್ತು ಕ್ಯಾನ್ಸರ್‌ ಔಷಧ ಸೇರಿದಂತೆ ಒಟ್ಟು 509 ಔಷಧಗಳ ಬೆಲೆಯನ್ನು ಶೇ.3.84ರಷ್ಟು ಹೆಚ್ಚಳ ಮಾಡಲು ಔಷಧ ಕಂಪನಿಗಳಿಗೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ.

2013ರ ಔಷಧಗಳ ಬೆಲೆ ನಿಯಂತ್ರಣ ಆದೇಶದಡಿ ಕೇಂದ್ರ 509 ಅಗತ್ಯ ಔಷಧಗಳ ಬೆಲೆಯಲ್ಲಿ ಹೆಚ್ಚಳ ಮಾಡಲು ರಾಷ್ಟ್ರೀಯ ಫಾರ್ಮಾಸಿಟಿಕಲ್‌ ಬೆಲೆ ನಿಗದಿ ಪ್ರಾಧಿಕಾರಕ್ಕೆ (ಎನ್‌ಪಿಪಿಎ) ತಿಳಿಸಿದೆ.[ಮೋದಿ ಕನಸಂತೆ ಕಡಿಮೆ ದರದಲ್ಲಿ ಜೀವರಕ್ಷಕ ಔಷಧಿ]

medicine

ಹೆಪಟೈಟಿಸ್‌ ಕಾಯಿಲೆಗಳ ಚಿಕಿತ್ಸೆಗೆ ಅಗತ್ಯವಾಗಿರುವ ಆಲ್ಫಾ ಇಂಟರ್‌ಫೆರಾನ್‌ ಇಂಜೆಕ್ಷನ್‌, ಕ್ಯಾನ್ಸರ್‌ ಕಾಯಿಲೆಯ ಕಾರ್ಬೋಪ್ಲಾಟಿನ್‌, ಶಿಲೀಂಧ್ರ ಸೋಂಕುಗಳಲ್ಲಿ ಬಳಸಲಾಗುವ ಔಷಧಿಗಳ ಬೆಲೆಯಲ್ಲಿ ಏರಿಕೆಯಾಗಿದೆ.[ಔಷಧ ದರ ಏರಿಕೆಗೆ ಕಾರಣವೇನು]

ಕೇಂದ್ರ ಸರ್ಕಾರದ ಕ್ರವನ್ನು ಸ್ವಾಗತ ಮಾಡಿರುವ ಪ್ರಾಧಿಕಾರ ಬೆಲೆ ಹಣದುಬ್ಬರವನ್ನು ಆಧರಿಸಿರುತ್ತದೆ ಎಂದು ತಿಳಿಸಿದೆ. ಈ ಬಗ್ಗೆ ವಿವರ ನೀಡಿರುವ ಐಪಿಎನ್ ಪ್ರಧಾನ ಕಾರ್ಯದರ್ಶಿ ಡಿ.ಜಿ. ಶಾ, ಕೇಂದ್ರ ಸರ್ಕಾರ ಬೆಲೆ ಏರಿಕೆಗೆ ಅನುಮತಿ ನೀಡಿ ಸುಮಾರು ನಾಲ್ಕು ವರ್ಷಗಳೆ ಕಳೆದು ಹೋಗಿತ್ತು. ಆದರೆ ಗ್ರಾಹಕರಿಗೆ ಅನ್ಯಾಯವಾಗದಂತೆ ದರ ಏರಿಕೆ ಮಾಡಲಾಗುವುದು ಎಂದು ತಿಳಿಸಿದ್ದಾರೆ. ಅಗತ್ಯ ಔಷಧಗಳ ಬೆಲೆ ಹೆಚ್ಚಳಕ್ಕೆ ಸರ್ಕಾರ ಒಪ್ಪಿಗೆ ನೀಡಿದ್ದು ಕಾಂಡೋಮ್‌ಗಳ ಬೆಲೆ ಮೇಲೂ ಪರಿಣಾಮ ಬೀರಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+