8th Pay Commission: ಸರ್ಕಾರಿ ನೌಕರರ ಮೂಲ ವೇತನ ಹೆಚ್ಚಳ ಯಾವಾಗ: ಇಲ್ಲಿದೆ ಅಪ್ಡೇಟ್

ಬೆಂಗಳೂರು, ಸೆಪ್ಟಂಬರ್ 20: ಕೇಂದ್ರ ಸರ್ಕಾರವು ತನ್ನ ನೌಕರರಿಗೆ 8ನೇ ವೇತನ ಆಯೋಗದ ಬಿಗ್ ಅಪ್ಡೇಟ್‌ವೊಂದನ್ನು ನೀಡಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವ ಸರ್ಕಾರವು ಮುಂದಿನ ದಿನಗಳಲ್ಲಿ ಎಂಟನೇ ವೇತನ ಆಯೋಗದಡಿ ಭರ್ಜರಿ ವೇತನ ಹೆಚ್ಚಳ ಮಾಡಿ ಬಂಪರ್ ನೀಡುವ ಸಾಧ್ಯತೆ ಇದೆ. ಈಗಾಗಲೇ ಸರ್ಕಾರಿ ನೌಕರರು ಒಂದಷ್ಟು ಶಿಫಾರಸುಗಳನ್ನು ಕೇಂದ್ರಕ್ಕೆ ಸಲ್ಲಿಸಿದ್ದಾರೆ.

8ನೇ ವೇತನ ಆಯೋಗದ ಅಡಿಯಲ್ಲಿ ತನ್ನ ನೌಕರರಿಗೆ ವೇತನ ಪರಿಷ್ಕರಣೆ ಮಾಡಿ ಕೇಂದ್ರ ಸರ್ಕಾರವು ಶೀಘ್ರದಲ್ಲೇ ಪ್ರಕಟಿಸುವ ನಿರೀಕ್ಷೆ ಇದೆ. ಇದೇ ವಿಚಾರವಾಗಿ ಕೇಂದ್ರ ನೌಕರರು 8ನೇ ವೇತನ ಆಯೋಗ ಜಾರಿ ಯಾವಾಗ ಎಂದು ಕಾದು ಕುಳಿತಿದ್ದಾರೆ. ಹೊಸ ವೇತನ ಆಯೋಗದಡಿ ಹೆಚ್ಚಿನ ವೇತನ, ತುಟ್ಟಿ ಭತ್ಯೆ (ಡಿಎ) ಅಧಿಕ ಏರಿಕೆ, ತುಟ್ಟಿ ಪರಿಹಾರ (ಡಿಆರ್) ಅತ್ಯಧಿಕ ಹೆಚ್ಚಳ ನಿರೀಕ್ಷೆ ಮಾಡಲಾಗಿದೆ.

Central Govt When will Announced 8th Pay Commission Implementation Employees Salary Hike

ಸದ್ಯ ವರದಿಗಳ ಪ್ರಕಾರ, ಕೇಂದ್ರ ಸರ್ಕಾರವು ಮುಂದಿನ 2026ರ ಜನವರಿ 1ರಂದು 8ನೇ ವೇತನ ಆಯೋಗ ಜಾರಿಗೆ ತರುವ ಸಾಧ್ಯತೆಗಳು ಹೆಚ್ಚಿವೆ. ಆದರೆ ಈ ಕುರಿತು ಕೇಂದ್ರ ಸರ್ಕಾರ, ಸಚಿವಾಲಯ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ ಎಂದು ತಿಳಿದು ಬಂದಿದೆ.

ಆರ್ಥಿಕ ಸ್ಥಿರತೆಗೆ ಆದ್ಯತೆ

ಒಂದು ಬಾರಿ ಸರ್ಕಾರ ಹೊಸ ವೇತನ ಆಯೋಗ ಅನುಷ್ಠಾನಕ್ಕೆ ತಂದರೆ, ಆಯೋಗದ ಶಿಫಾರಸುಗಳನ್ನು ರೂಪಿಸಲು ಅಳವಡಿಸಲು ಸುಮಾರು ಒಂದರಿಂದ ಒಂದೂವರೆ ವರ್ಷ (18 ತಿಂಗಳ) ಸಮಯ ಬೇಕಾಗುತ್ತದೆ. ಈ ವೇಳೆ ಸರ್ಕಾರಿ ನೌಕರರ ವೇತನ ಪ್ರಯೋಜನ ಹೊಂದಾಣಿಕೆ ಶಿಫಾರಸು ಪರಿಗಣಿಸುವ ಜೊತೆಗೆ ಆರ್ಥಿಕ ಅಸ್ಥಿರತೆ ಉಂಟು ಮಾಡುವ ಅಂಶಗಳನ್ನು ಪರಿಣಿಸಿ ನಿರ್ಧಾರ ಪ್ರಕಟಿಸುತ್ತದೆ.

ಸದ್ಯ ದೇಶದಲ್ಲಿ 7 ನೇ ವೇತನ ಆಯೋಗ ಜಾರಿಯಲ್ಲಿದೆ. ಇದರ ಅಡಿಯಲ್ಲಿಯೇ ನೌಕರರು ಹಲವು ಆರ್ಥಿಕ ಲಾಭ ಪಡೆದುಕೊಳ್ಳುತ್ತಿದ್ದಾರೆ. 2026ರ ಹೊತ್ತಿಗೆ ಹಾಲಿ ವೇತನ ಆಯೋಗ ಅಂತ್ಯಗೊಳ್ಳುತ್ತಿದ್ದಂತೆ ಕೇಂದ್ರ ಸರ್ಕಾರ ಅಧಿಕೃತವಾಗಿ 8ನೇ ವೇತನ ಆಯೋಗ ಜಾರಿಗೆ ತರಲಿದೆ. ಆಗ ತಮ್ಮ ವೇತನ ವಿಚಾರದಲ್ಲಿ ಮಹತ್ವದ ಬಲಾವಣೆಗಳು, ಹೆಚ್ಚಳ ಆಗಬಹುದೆಂದು ಕೇಂದ್ರ ಸರ್ಕಾರಿ ನೌಕರರು ಕಾತರರದಿಂದ ಕಾಯುತ್ತಿದ್ದಾರೆ. ತಮ್ಮದೇ ಆದ ಲೆಕ್ಕಾಚಾರದಲ್ಲಿ ನಿರತವಾಗಿದ್ದಾರೆ.

Central Govt When will Announced 8th Pay Commission Implementation Employees Salary Hike

8ನೇ ವೇತನ ಆಯೋಗದ ಬಗ್ಗೆ ಅಧಿಕೃತ ಘೋಷಣೆ ಆಗದಿದ್ದರೂ, ಕೇಂದ್ರು ಮೌನವಾಗಿದ್ದುಕೊಂಡೇ ಸಿದ್ಧತೆ ಆರಂಭಿಸಿದೆ ಅಂತಲೂ ಹೇಳಲಾಗುತ್ತಿದೆ.

8ನೇ ವೇತನ ಆಯೋಗ ಹೆಚ್ಚುವರಿ ಮಾಹಿತಿ

ಕೇಂದ್ರ ವೇತನ ಆಯೋಗ ದಶಕಕ್ಕೆ ಒಮ್ಮೆ ಅಂದರೆ ಹತ್ತು ವರ್ಷಗಳಿಗೆ ಒಂದು ಹೊಸ ವೇತನ ಆಯೋಗ ಜಾರಿಗೆ ಬರುತ್ತದೆ. ಇದರಡಿಯಲ್ಲಿಯೇ ನೌಕರರಿಗೆ ವೇತನ, ಹೆಚ್ಚಳ, ತುಟ್ಟಿಭತ್ಯೆ, ಪಿಂಚಣಿದಾರರಿಗೆ ತುಟ್ಟಿ ಪರಿಹಾರ, ಮನೆ ಬಾಡಿಗೆ ಬತ್ಯೆಯಂತ ಹಲವು ಅರ್ಥಿಕ ನಿರ್ಧಾರ ಕೈಗೊಳ್ಳಲಾಗುತ್ತದೆ. ಅವುಗಳನ್ನು ಜಾರಿಗೆ ತರುವ ಮೂಲಕ ನೌಕರರು ಕಾಲ ಕಾಲಕ್ಕೆ ಆರ್ಥಿಕ ಹಣದುಬ್ಬರ ಎದುರಿಸಲು ಸನ್ನದ್ಧು ಮಾಡುತ್ತದೆ.

ಈ ಉದ್ದೇಶಿತ ಹೊಸ ವೇತನ ಆಯೋಗದ ಪ್ರಯೋಜನಗಳ ಪರಿಷ್ಕರಣೆ, ಪರಿಶೀಲಿಸಲು ಮತ್ತು ಶಿಫಾರಸು ಮಾಡಲು ಅವಕಾಶ ಇದೆ. ಜಾರಿಗೂ ಮೊದಲು ತಮ್ಮ ಬೇಡಿಕೆಗೆ ಅನುಗುಣವಾಗಿ, ಅಂಶಗಳನ್ನು ಸೇರಿಸುವಂತೆ ಶಿಫಾರಸು ಮಾಡಬಹುದಾಗಿದೆ. ಆ ಶಿಫಾರಸುಗಳನ್ನು ಕೇಂದ್ರವು ಪರಿಶೀಲಿಸುತ್ತದೆ.

ಏಳನೇ ವೇತನ ಆಯೋಗ ಜಾರಿಗೆ 2015ರ ನವೆಂಬರ್ 19 ರಂದು ಕೇಂದ್ರಕ್ಕೆ ವರದಿ ಸಲ್ಲಿಕೆ ಆಯಿತು. ಆಗ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದರು. ಅವರು ವರದಿ ಆಧರಿಸಿ 7ನೇ ವೇತನ ಆಯೋಗವನ್ನು 2016 ಜನವರಿ 1ರಂದು ಅನುಷ್ಠಾನಕ್ಕೆ ತಂದರು. ಈ ಹಾಲಿ ವೇತನ ಆಯೋಗ ಮುಕ್ತಾಯಕ್ಕೆ ಒಂದೂವರೆ ವರ್ಷ ಬಾಕಿ ಇದೆ. ಹೀಗಾಗಿ ಎಂಟನೇ ವೇತನ ಆಯೋಗದ ಜಾರಿ, ವರದಿ ಸಲ್ಲಿಕೆ, ಶಿಫಾರಸುಗಳ ಬಗ್ಗೆ ನೌಕರರಲ್ಲಿ ಕುತೂಹಲ ಹೆಚ್ಚಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+