ಪಾಸ್ ಪೋರ್ಟ್ ಪಡೆಯಲು ಆಧಾರ್ ಕಡ್ಡಾಯ?
ನವದೆಹಲಿ, ನ.11 : ಇನ್ನು ಮಂದೆ ವಿದೇಶಕ್ಕೆ ಹಾರಲು ಬೇಕಾದ ಪಾಸ್ ಪೋರ್ಟ್ ಪಡೆಯಲು ಆಧಾರ್ ಕಾರ್ಡ್ ಸಲ್ಲಿಸಬೇಕಾದ್ದು ಕಡ್ಡಾಯ. ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲ ಇಂಥದ್ದೊಂದು ತೀರ್ಮಾನ ತೆಗೆದುಕೊಳ್ಳಲು ಮುಂದಾಗಿದೆ. ಈ ಬಗ್ಗೆ ಗಮನ ಹರಿಸಿರುವ ಇಲಾಖೆ ಏಕವ್ಯಕ್ತಿ ಗುರುತಿನ ಚೀಟಿ ಪ್ರಾಧಿಕಾರ [ಯುಐಡಿಎಐ]ದ ಜತೆ ಮಾತುಕತೆ ನಡೆಸಿದೆ.
ಒಂದು ವೇಳೆ ಆಧಾರ್ ಕಾರ್ಡ್ ಹಾಜರು ಪಡಿಸಲು ಅಸಾಧ್ಯವಾದರೆ, ಆಧಾರ್ ನೋಂದಣಿ ಸಂಖ್ಯೆಯನ್ನಾದರೂ ನೀಡಲೇಬೇಕಾಗುತ್ತದೆ ಎಂದು ಕಾನೂನು ಸಚಿವಾಲಯಕ್ಕೆ ವಿದೇಶಾಂಗ ಸಚಿವಾಲಯ ವರದಿಯೊಂದನ್ನು ಸಲ್ಲಿಸಿದೆ. ಇದಕ್ಕೆ ಸಂಬಂಧಿಸಿದ ಎಲ್ಲ ಕೆಲಸ ಕಾರ್ಯಗಳು ಈ ತಿಂಗಳ ಅಂತ್ಯಕ್ಕೆ ಮುಕ್ತಾಯವಾಗಲಿದೆ.[ಹೊಸ ಸಿಮ್ ಪಡೆಯಲು ಆಧಾರ್ ನಂಬರ್ ಕಡ್ಡಾಯ]

ಯುಪಿಎ ಸರ್ಕಾರ ಜಾರಿ ಮಾಡಿದ್ದ ಆಧಾರ್ ಕಾರ್ಡ್ ಯೋಜನೆಗೆ ದೇಶದಲ್ಲಿ ಅಪಸ್ವರಗಳು ಎದ್ದಿದ್ದವು. ಪ್ರಕರಣ ಸುಪ್ರೀಂ ಮೇಟ್ಟಿಲೇರಿ ನ್ಯಾಯಾಲಯ ಸಾಮಾಜಿಕ ಅಥವಾ ಸರ್ಕಾರಿ ಕೆಲಸ ಕಾರ್ಯಗಳಿಗೆ ಆಧಾರ್ ಕಡ್ಡಾಯವಲ್ಲ ಎಂದೂ ಹೇಳಿತ್ತು.
ಪೊಲೀಸ್ ಪರಿಶೀಲನೆ ಹೆಸರಿನಲ್ಲಿ ಅನಗತ್ಯ ವಿಳಂಬ ಆಗುತ್ತಿದೆ. ಬೇಕಾದ ದಿನಾಂಕಕ್ಕೆ ಸರಿಯಾಗಿ ಪಾಸ್ ಪೋರ್ಟ್ ಕೈ ಗೆ ಸಿಗುತ್ತಿಲ್ಲ ಎಂಬ ಕುರಿತಾಗಿ ಅನೇಕ ದೂರುಗಳು ಬರುತ್ತಿರುವ ಹಿನ್ನೆಲೆಯಲ್ಲಿ ಆಧಾರ್ ಕಾರ್ಡ್ ಅನ್ವಯ ವಿತರಣೆಗೆ ವಿದೇಶಾಂಗ ಸಚಿವಾಲಯ ಸಿದ್ಧತೆ ಮಾಡಿಕೊಳ್ಳಲು ಮುಂದಾಗಿದೆ.[ಆಧಾರ್ ಗೆ ಮೊಬೈಲ್ ನಂಬರ್ ಜೋಡಿ]
ಇದಕ್ಕೆ ಪೂರಕ ಎಂಬಂತೆ ರಾಷ್ಟ್ರೀಯ ಅಪರಾಧ ದಾಖಲೆ ವಿಭಾಗ (ಎನ್ ಸಿಆರ್ ಬಿ) ತಾನು ಇನ್ನೆರಡು ತಿಂಗಳಲ್ಲಿ ಹೊಸ ಯೋಜನೆ ಅಳವಡಿಸಿಕೊಳ್ಳಲಿದ್ದೇನೆ. ಕ್ರಿಮಿನಲ್ ಹಿನ್ನಲೆ ಅರಿಯಲು ಬೇರಯದೇ ಕ್ರಮ ಜಾರಿಗೆ ಬರಲಿದ್ದು ಸರಳ ಮತ್ತು ಸುಲಭವಾಗಿರಲಿದೆ ಎಂದು ತಿಳಿಸಿದೆ.
ದೇಶದ ಸುಮಾರು 70 ಕೋಟಿ ಜನರಿಗೆ ಆಧಾರ್ ವಿತರಣೆ ಮಾಡಲಾಗಿದ್ದು, ಉದ್ಯೋಗ ಖಾತ್ರಿ ಯೋಜನೆಯೊಂದಿಗೂ ಸಂಬಂಧ ಕಲ್ಪಿಸಲಾಗಿತ್ತು.












Click it and Unblock the Notifications