ದೇಶದ 125 ಟೋಲ್ ಮುಚ್ಚಲು ಕೇಂದ್ರ ಸರ್ಕಾರ ನಿರ್ಧಾರ
ನವದೆಹಲಿ, ಫೆ. 13: ಜನರಿಗೆ ಹೆದ್ದಾರಿ ಶುಲ್ಕದ ಹೊರೆ ತಪ್ಪಿಸಲು ಫೆಬ್ರವರಿ ಅಂತ್ಯಕ್ಕೆ ದೇಶದ 125 ಟೋಲ್ ಸಂಗ್ರಹ ಕೇಂದ್ರಗಳನ್ನು ತೆರವುಗೊಳಿಸುವುದಾಗಿ ಕೇಂದ್ರ ಸರ್ಕಾರ ತಿಳಿಸಿದೆ.
ಈ ಬಗ್ಗೆ ಹೇಳಿಕೆ ನೀಡಿರುವ ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ, ಸುಮಾರು 65 ರಸ್ತೆ ಯೋಜನೆಗಳಲ್ಲಿ ಈಗಾಗಲೇ ಶುಲ್ಕ ಸಂಗ್ರಹ ನಿಲ್ಲಿಸಲಾಗಿದೆ. 50 ಕೋಟಿ ರೂಪಾಯಿಗಿಂತಲೂ ಕಡಿಮೆ ವೆಚ್ಚ ಹೂಡಿಕೆ ಮಾಡಿ ನಿರ್ಮಿಸಲಾದ ರಸ್ತೆ ಯೋಜನೆಗಳನ್ನು ಶುಲ್ಕ ರಹಿತವನ್ನಾಗಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ ಎಂದು ತಿಳಿಸಿದರು.[ರಾಷ್ಟ್ರೀಕೃತ ಬ್ಯಾಂಕ್ ಗಳಿಗೆ ಕೇಂದ್ರ ಸರ್ಕಾರದ ಭರ್ಜರಿ ಗಿಫ್ಟ್]

ದೇಶದಲ್ಲಿ ಜಾರಿಗೆ ತರಲಾಗಿರುವ ಎಲೆಕ್ಟ್ರಾನಿಕ್ ಟೋಲ್ ವ್ಯವಸ್ಥೆಯಿಂದ ಸುಮಾರು 88 ಸಾವಿರ ಕೋಟಿ ರೂಪಾಯಿ ಉಳಿತಾಯವಾಗಿದೆ. ಅದರೊಂದಿಗೆ ಟೋಲ್ ಸಂಗ್ರಹ ಕೇಂದ್ರಗಳಲ್ಲಿ ಕಾಯುವ ಸಮಯವೂ ತಗ್ಗಲಿದೆ ಎಂದು ಗಡ್ಕರಿ ವರದಿಯೊಂದನ್ನು ಉಲ್ಲೇಖಿಸಿ ಗಡ್ಕರಿ ನುಡಿದರು.
ಮುಂಬೈ-ದೆಹಲಿ ಮಾರ್ಗದಲ್ಲಿಯೇ 350 ಟೋಲ್ ಸಂಗ್ರಹ ಕೇಂದ್ರಗಳಿದ್ದು, ಅದರಲ್ಲಿ 140 ಕೇಂದ್ರಗಳನ್ನು ಎಲೆಕ್ಟ್ರಾನಿಕ್ ಟೋಲ್ ಸಂಗ್ರಹ ಕೇಂದ್ರಗಳನ್ನಾಗಿ ಪರಿವರ್ತಿಸಲಾಗಿದೆ. ದೇಶದಲ್ಲಿ ಎಲೆಕ್ಟ್ರಾನಿಕ್ ಟೋಲ್ ಪರಿವರ್ತನೆ ಕಾರ್ಯ ಪೂರ್ಣಗೊಂಡರೆ ಸುಮಾರು 88 ಸಾವಿರ ಕೋಟಿ ರೂಪಾಯಿ ಉಳಿತಾಯವಾಗಲಿದೆ ಎಂದಯ ಅಂಕಿಅಂಶಗಳನ್ನು ಮುಂದಿಟ್ಟರು.[ವಾಹನಕ್ಕೆ ಸುಲಭವಾಗಿ ಫ್ಯಾನ್ಸಿ ನಂಬರ್ ಪಡೆಯಿರಿ]
ಅಲ್ಲದೇ ದೇಶದಾದ್ಯಂತ ಹೆದ್ದಾರಿಗಳಲ್ಲಿ ಎಲೆಕ್ಟ್ರಾನಿಕ್ ಟೋಲ್ ಸಂಗ್ರಹ ವ್ಯವಸ್ಥೆಯನ್ನು (ಇಟಿಸಿ) ಅನುಷ್ಠಾನಗೊಳಿಸಲು ಭಾರತೀಯ ಹೆದ್ದಾರಿ ನಿರ್ವಹಣೆ ಸಂಸ್ಥೆ ನಿಯಮಿತ ಎಂಬ ಸಂಸ್ಥೆಯನ್ನು ರಚಿಸಲಾಗಿದೆ ಎಂದು ತಿಳಿಸದರು.












Click it and Unblock the Notifications