ಒನ್ ನೇಶನ್, ಒನ್ ರೇಶನ್: ದೇಶದಾದ್ಯಂತ ಒಂದೇ ಪಡಿತರ ಚೀಟಿ

ನವದೆಹಲಿ, ಜೂನ್ 28: 'ಒನ್ ನೇಶನ್, ಒನ್ ರೇಶನ್ ಕಾರ್ಡ್‌' ಘೋಷ ವಾಕ್ಯದಡಿ, ದೇಶದಾದ್ಯಂತ ಒಂದೇ ಪಡಿತರ ಚೀಟಿಯನ್ನು ಅನ್ನು ಜಾರಿಗೆ ತರಲು ಮೋದಿ ಸರ್ಕಾರ ತಯಾರಿ ನಡೆಸಿದೆ.

ಒಂದು ದೇಶ ಒಂದು ಚುನಾವಣೆ ಘೋಷಣೆ ನಂತರ ಇದೀಗ ಒಂದೇ ರೇಶನ್ ಕಾರ್ಡ್‌ ಅನ್ನು ಜಾರಿಗೆ ತರುವ ಯೋಜನೆ ಮಾಡುತ್ತಿದ್ದು, ಈ ರೇಶನ್ ಕಾರ್ಡ್‌ ತೋರಿಸಿ ದೇಶದ ಯಾವುದೇ ರಾಜ್ಯದಲ್ಲಾದರೂ ಪಡಿತರ ಪಡೆಯುವಂತಾಗಬೇಕು ಎಂಬ ಬೃಹತ್ ಆಲೋಚನೆ ಯೋಜನೆಯ ಹಿಂದಿದೆ.

ಕೇಂದ್ರ ಆಹಾರ ಸಚಿವ ರಾಮ್‌ ವಿಲಾಸ್ ಪಾಸ್ವಾನ್ ಅವರು ಈ ಬಗ್ಗೆ ಮಾಹಿತಿ ನೀಡಿದ್ದು, ಈಗಿರುವ ಪಡಿತರ ವ್ಯವಸ್ಥೆಯ ಪ್ರಕಾರ ಕುಟುಂಬವೊಂದು, ಒಂದು ಊರಿನಿಂದ ಮತ್ತೊಂದು ಊರಿಗೆ ಪ್ರಯಾಣ ಬೆಳೆಸಿದರೆ ಹೊಸ ಪಡಿತರ ಚೀಟಿ ಮಾಡಿಸಿಕೊಳ್ಳಬೇಕಾಗುತ್ತದೆ ಇದು ತ್ರಾಸದಾಯಕ ವ್ಯವಸ್ಥೆ ಎಂದಿದ್ದಾರೆ.

Central governement planing to bring one nation one ration card scheme

ಹೊಸ ಪಡಿತರ ವ್ಯವಸ್ಥೆ ಜಾರಿಗೆ ಬಂದಲ್ಲಿ, ಯಾವುದೇ ಕುಟುಂಬ ಅಥವಾ ವ್ಯಕ್ತಿ ಯಾವುದೇ ಊರಿಗೆ ಹೋದರು ಅಲ್ಲಿ ರೇಶನ್ ಕಾರ್ಡ್‌ ತೋರಿಸಿ ಆಹಾರ ಪದಾರ್ಥಗಳನ್ನು ಪಡೆಯಬಹುದಾಗಿದೆ ಎಂದರು.

ರಾಜ್ಯಸಭೆಗೆ ಮಾಹಿತಿ ನೀಡಿರುವ ರಾಮ್‌ ವಿಲಾಸ್ ಪಾಸ್ವಾನ್, ಸರ್ಕಾರವು ಆಹಾರದ ಮೇಲೆ ನೀಡುವ ಸಬ್ಸಿಡಿಯು 1.45 ಕೋಟಿ ತಲುಪಿದೆ. ಆಹಾರ ಧಾನ್ಯಗಳ ಬೆಲೆ ಹೆಚ್ಚಾಗುತ್ತಿದ್ದರೂ ಸಹಿತ ಜನರಿಗೆ ಕಡಿಮೆ ದರದಲ್ಲಿಯೇ ಆಹಾರ ಧಾನ್ಯಗಳನ್ನು ಮಾರಾಟ ಮಾಡಲಾಗುತ್ತಿದೆ ಎಂದು ಹೇಳಿದರು.

ಈ ಯೋಜನೆಯಲ್ಲಿ ರಾಜ್ಯ ಸರ್ಕಾರದ ಸಹಯೋಗದಲ್ಲಿ ಧಾನ್ಯಗಳನ್ನು ವಿತರಿಸುವುದರಿಂದ ಕೆಲವು ಕಡೆ ಅತ್ಯಂತ ಕಡಿಮೆ ದರದಲ್ಲಿ ಆಹಾರ ಧಾನ್ಯಗಳ ಪೂರೈಕೆ ಆಗುತ್ತಿದೆ, ಮತ್ತು ಯಾವುದೇ ಸೋರಿಕೆ ಸಹ ಆಗುತ್ತಿಲ್ಲ ಎಂದು ಮಾಹಿತಿ ನೀಡಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+