ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಾತಿ ಲೆಕ್ಕಾಚಾರ ತಪ್ಪಿಸಲು ಕೇಂದ್ರದ ಸಂಚು: ಶೀಘ್ರ ಜನಗಣತಿ ಪುನರಾರಂಭ

|
Google Oneindia Kannada News

ನವದೆಹಲಿ, ಆ.09: ಕೊರೊನಾ ವೈರಸ್‌ ಸಾಂಕ್ರಾಮಿಕ ರೋಗದ ಕಾರಣದಿಂದಾಗಿ ಸ್ಥಗಿತಗೊಂಡಿರುವ ಜನಗಣತಿ ಕಾರ್ಯಾಚರಣೆಗಳು ಶೀಘ್ರದಲ್ಲೇ ಪುನರಾರಂಭಗೊಳ್ಳಲಿವೆ. ಕೊರೊನಾ ವೈರಸ್‌ ಸೋಂಕು ಪ್ರಕರಣಗಳ ಏರಿಕೆ ಮಧ್ಯೆ ಮೂರನೇ ಕೋವಿಡ್‌ ಅಲೆಯ ಆತಂಕ ಇದೆ. ಈ ನಡುವೆ ಗೃಹ ವ್ಯವಹಾರಗಳ ಸಚಿವಾಲಯವು ಕಳೆದ ಒಂದು ವಾರದಿಂದ ರಾಜ್ಯಗಳಲ್ಲಿನ ಜನಗಣತಿ ಕಾರ್ಯಾಚರಣೆಗಳ ನಿರ್ದೇಶಕರ ಹುದ್ದೆಗಳನ್ನು ಭರ್ತಿ ಮಾಡಿದೆ

ಉತ್ತರ ಪ್ರದೇಶ, ಗುಜರಾತ್ ಮತ್ತು ಛತ್ತೀಸ್‌ಗಢದಂತಹ ದೊಡ್ಡ ರಾಜ್ಯಗಳು ಹಾಗೂ ಮಿಜೋರಾಂ ಮತ್ತು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಂತಹ ಸಣ್ಣ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಈ ಜನಗಣತಿ ನಡೆಯಲಿದೆ ಎಂದು ಹೇಳಲಾಗಿದೆ. ಇನ್ನು ಈ ಜನಗಣತಿಯ ಹಿನ್ನೆಲೆ ಗೃಹ ವ್ಯವಹಾರಗಳ ಸಚಿವಾಲಯದ ಪ್ರಧಾನ ಕಚೇರಿಯಲ್ಲಿ ಅನುಗುಣವಾದ ಖಾಲಿ ಹುದ್ದೆಗಳನ್ನು ಕೂಡ ಭರ್ತಿ ಮಾಡಲಾಗಿದೆ.

ಕೊರೊನಾದಿಂದಾಗಿ ಜನಗಣತಿ ಮುಂದೂಡಿಕೆ: ಕೇಂದ್ರ ಸರ್ಕಾರಕೊರೊನಾದಿಂದಾಗಿ ಜನಗಣತಿ ಮುಂದೂಡಿಕೆ: ಕೇಂದ್ರ ಸರ್ಕಾರ

ಈ ಜನಗಣತಿ ಕಾರ್ಯಾಚರಣೆಯಲ್ಲಿ ಜಾತಿ ಎಣಿಕೆಗೆ ಹೊಸ ಬೇಡಿಕೆಗಳು ಇರುವುದರಿಂದ ಕೇಂದ್ರ ಸರ್ಕಾರ ಜನಗಣತಿಯ ಕೆಲಸವನ್ನು ಪುನರುಜ್ಜೀವನಗೊಳಿಸಿದೆ. ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್‌ ಈ ಜಾತಿ ಎಣಿಕೆಗೆ ಹೊಸ ಬೇಡಿಕೆಯನ್ನು ಮಾಡಿದ್ದಾರೆ. ಬಿಹಾರ ರಾಜ್ಯದ ವಿರೋಧ ಪಕ್ಷದ ನಾಯಕರು ಕೂಡಾ ಮುಖ್ಯಮಂತ್ರಿ ನಿತೀಶ್ ಕುಮಾರ್‌ರ ಈ ಬೇಡಿಕೆಯನ್ನು ಬೆಂಬಲಿಸಿದ್ದಾರೆ.

Center set to resume soon Census operations, ​to avoid caste calculations

ಜನಗಣತಿಯ ಕಾರ್ಯಾಚರಣೆಯ ನಿರ್ದೇಶಕರ ಹುದ್ದೆಗಳು ಖಾಲಿ ಇರುವ ರಾಜ್ಯಗಳಲ್ಲಿ ಭರ್ತಿ ಮಾಡಲು ತರಾತುರಿ ನಡೆಸುತ್ತಿರುವುದು ಎಣಿಕೆ ಕಾರ್ಯಗಳನ್ನು ವೇಗವಾಗಿ ಮುನ್ನಡೆಗೆ ತರುವ ಸಲುವಾಗಿ ಎಂದು ಕೇಂದ್ರ ಸರ್ಕಾರದ ಮೂಲವೊಂದು ಹೇಳಿರುವುದಾಗಿ ಮಾಧ್ಯಮ ವರದಿ ಮಾಡಿದೆ.

ಭಾರತದ ಜನಸಂಖ್ಯಾಶಾಸ್ತ್ರವನ್ನು ಗಮನಿಸಿದರೆ, ಈ ಜನಗಣತಿ ಕಾರ್ಯಾಚರಣೆ ಆರಂಭವಾದರೆ, ಈಗ ಯಾವುದೇ ಬದಲಾವಣೆ ಸಾಧ್ಯವಿಲ್ಲ ಎಂದು ಹೇಳುವುದು ಕೇಂದ್ರಕ್ಕೆ ತುಲನಾತ್ಮಕವಾಗಿ ಸುಲಭವಾಗುತ್ತದೆ. ಜಾತಿ ಜನಗಣತಿಯ ಬೇಡಿಕೆಯ ನಡುವೆ ಕೇಂದ್ರ ಸರ್ಕಾರ ತರಾತುರಿಯಲ್ಲಿ ಈ ಜನಗಣಿತಯನ್ನು ಮಾಡಲು ಮುಂದಾಗಿದೆ ಎಂದು ಹೇಳಲಾಗಿದೆ.

ಜನಗಣತಿ ವೇಳೆ ಒಬಿಸಿ ಸಂಖ್ಯೆ ದಾಖಲಿಸಲು ಆಯೋಗ ಮನವಿಜನಗಣತಿ ವೇಳೆ ಒಬಿಸಿ ಸಂಖ್ಯೆ ದಾಖಲಿಸಲು ಆಯೋಗ ಮನವಿ

ಮುಂದಿನ ಜನಗಣತಿಯು 10 ವರ್ಷಗಳ ನಂತರ 2031 ರಲ್ಲಿ, ನಡೆಯಲಿದೆ. 2011 ರ ಬಳಿಕ 2021 ರಲ್ಲಿ ಜನಗಣತಿ ನಡೆಸಲು ಸಿದ್ದತೆ ಮಾಡಲಾಗುತ್ತಿದೆ. ಮುಂದಿನ ಜನಗಣತಿಯು 10 ವರ್ಷಗಳ ನಂತರ 2031 ರಲ್ಲಿ ಆಗಿರುವುದು ರಾಜಕೀಯ ಸಮೀಕರಣಗಳಲ್ಲಿ ದೀರ್ಘಾವಧಿಯ ಕಾಲವಾಗಿದೆ. ಆದ್ದರಿಂದ ಈ ಕೋವಿಡ್‌ ಸಾಂಕ್ರಾಮಿಕದ ಮಧ್ಯೆಯೂ ಸರ್ಕಾರ ಈ ಜನಗಣತಿಗೆ ಮುಂದಾಗಿದೆ ಎನ್ನಲಾಗಿದೆ.

ಕೊರೊನಾ ವೈರಸ್‌ನ ಮೊದಲ ಅಲೆಯ ಸಂದರ್ಭದಲ್ಲಿ ಭಾರತದ ಜನಗಣತಿ ಆಯುಕ್ತರ ಕಚೇರಿ ಮತ್ತು ರಾಜ್ಯಗಳಲ್ಲಿನ ಕಚೇರಿಗಳನ್ನು ಲಾಕ್‌ಡೌನ್‌ ಕಾರಣದಿಂದಾಗಿ ಕಚೇರಿಗಳನ್ನು ಮುಚ್ಚಲಾಗಿದೆ. ಈ ಪರಿಣಾಮವಾಗಿ ಕಳೆದ ವರ್ಷ ಆರಂಭ ಮಾಡಬೇಕಾಗಿದ್ದ ಜನಗಣತಿಯ ಸಿದ್ಧತೆಗಳು ಸ್ಥಗಿತಗೊಂಡಿವೆ. ಈ ಕೊರೊನಾ ವೈರಸ್‌ ಸಾಂಕ್ರಾಮಿಕ ಪ್ರೇರಿತ ಲಾಕ್‌ಡೌನ್‌ನಿಂದಾಗಿ ಎಲ್ಲಾ ಸರ್ಕಾರಿ ಕಚೇರಿಗಳು ಪರಿಣಾಮ ಬೀರಿವೆ.

ದೇಶದಲ್ಲಿ ಮೊದಲ ಡಿಜಿಟಲ್ ಗಣತಿಗಾಗಿ 3,700 ಕೋಟಿ ರೂ. ಘೋಷಣೆದೇಶದಲ್ಲಿ ಮೊದಲ ಡಿಜಿಟಲ್ ಗಣತಿಗಾಗಿ 3,700 ಕೋಟಿ ರೂ. ಘೋಷಣೆ

ಭಾರತದ ಜನಗಣತಿ ಸಂಸ್ಥೆಯು ಪ್ರತಿ ರಾಜ್ಯ ರಾಜಧಾನಿಯಲ್ಲಿ 33 ಜನಗಣತಿ ಕಾರ್ಯಾಚರಣೆಗಳ ನಿರ್ದೇಶನಾಲಯಗಳ ಒಂದು ಕುಟುಂಬವಾಗಿದೆ. ಪ್ರತಿ ರಾಜ್ಯ ರಾಜಧಾನಿಯಲ್ಲಿನ 33 ಜನಗಣತಿ ಕಾರ್ಯಾಚರಣೆಗಳ ನಿರ್ದೇಶನಾಲಯಗಳು ನವದೆಹಲಿಯಲ್ಲಿನ ರಿಜಿಸ್ಟ್ರಾರ್ ಜನರಲ್ ಮತ್ತು ಭಾರತದ ಜನಗಣತಿ ಆಯುಕ್ತರಿಗೆ ತಮ್ಮ ಪ್ರಗತಿಯ ಬಗ್ಗೆ ವರದಿ ಮಾಡುತ್ತಾರೆ.

ಇನ್ನು ದೇಶದಲ್ಲಿ ಜನಗಣತಿಯ ಪೂರ್ವಭಾವಿ ಕಾರ್ಯಗಳು ಆರಂಭ ಮಾಡಲಾಗಿತ್ತು. ಆದರೆ ಜನಗಣತಿ, ದೇಶದಾದ್ಯಂತ ಜನರ ಎಣಿಕೆ ಸೇರಿದಂತೆ, ಒಂದೇ ಬಾರಿಗೆ ಸಂಭವಿಸುವ ಕಾರ್ಯವನ್ನು ಆರಂಭ ಮಾಡಲಾಗಿತ್ತು. ಆದರೆ ಕೊರೊನಾ ಲಾಕ್‌ಡೌನ್‌ ಕಾರಣದಿಂದಾಗಿ ಈ ಕಾರ್ಯವು ಸ್ಥಗಿತಗೊಂಡಿದೆ. ಸಾಮಾನ್ಯವಾಗಿ ಜನಗಣತಿ ವರ್ಷದ ಫೆಬ್ರವರಿ ತಿಂಗಳಲ್ಲಿ, ಆರಂಭಿಸಲಾಗುತ್ತದೆ. ಆದರೆ ಈ ಬಾರಿ ಕೊರೊನಾ ಸಾಂಕ್ರಾಮಿಕದ ಕಾರಣ ಈವರೆಗೂ ಜನಗಣತಿ ಆರಂಭವಾಗಿಲ್ಲ. ಮುಂದಿನ ವರ್ಷದ ಫೆಬ್ರವರಿ ವೇಳೆಗೆ ಜನರ ನಿಜವಾದ ಎಣಿಕೆ ಸೇರಿದಂತೆ ಕಾರ್ಯಾಚರಣೆಗಳನ್ನು ತ್ವರಿತವಾಗಿ ಪೂರ್ಣಗೊಳಿಸಲು ಸರ್ಕಾರ ನಿರ್ಧರಿಸಿದೆ ಎಂದು ವರದಿ ತಿಳಿಸಿದೆ. ಜಾತಿ ಗಣತಿಯು ಇನ್ನಷ್ಟು ತಡವಾಗುವ ಸಾಧ್ಯತೆ ಇದೆ.

Recommended Video

Siddaramaiah ಮೇಲೆ ಆಕ್ರೋಶ ಹೊರ ಹಾಕಿದ ಈಶ್ವರಪ್ಪ | Oneindia Kannada

(ಒನ್‌ಇಂಡಿಯಾ ಸುದ್ದಿ)

English summary
Census operations, aborted due to Covid, are set to resume soon In between of caste calculations demand.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X