CEC ಜ್ಞಾನೇಶ್ ಕುಮಾರ್ ವಜಾ ನಿರ್ಣಯ: ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು ಎಂದ ಸ್ಪೀಕರ್ ಓಂ ಬಿರ್ಲಾ

ನವದೆಹಲಿ: ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ವಿರುದ್ಧ ವಿರೋಧ ಪಕ್ಷಗಳು ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಿದ್ದು, ಅವರನ್ನು ಕೂಡಲೇ ಹುದ್ದೆಯಿಂದ ವಜಾಗೊಳಿಸಬೇಕೆಂಬ ಕೂಗು ದೆಹಲಿಯಲ್ಲಿ ಜೋರಾಗಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಲೋಕಸಭಾ ಸ್ಪೀಕರ್ ಓಂ ಬಿರ್ಲಾ, ಜ್ಞಾನೇಶ್ ಕುಮಾರ್ ವಿರುದ್ಧ ವಿರೋಧ ಪಕ್ಷಗಳು ಮಂಡಿಸಲಿರುವ ಯಾವುದೇ ಹೊಸ ವಾಗ್ದಂಡನೆ (ಇಂಪಿಚ್ಮೆಂಟ್) ನಿರ್ಣಯವನ್ನ ಸಂವಿಧಾನದಲ್ಲಿ ಉಲ್ಲೇಖಿಸಿರುವ ಕಟ್ಟುನಿಟ್ಟಿನ ನಿಯಮಗಳ ಪ್ರಕಾರವೇ ಪರಿಶೀಲಿಸಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.

ಸಿಇಸಿ ಜ್ಞಾನೇಶ್ ಕುಮಾರ್ ವಜಾಕ್ಕೆ ವಿಪಕ್ಷಗಳ ಪಟ್ಟು

ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ಮುಖ್ಯ ಚುನಾವಣಾ ಆಯುಕ್ತರು ಏಕಪಕ್ಷೀಯವಾಗಿ ತಮ್ಮ ಅಧಿಕಾರವನ್ನ ಚಲಾಯಿಸುತ್ತಿದ್ದಾರೆ ಎಂದು ಆರೋಪಿಸಿ ವಿರೋಧ ಪಕ್ಷಗಳು ನಿರಂತರ ಪ್ರತಿಭಟನೆ ನಡೆಸುತ್ತಿವೆ.

CEC Gyanesh Kumar Impeachment Any Fresh Motion Will Follow Due Process Says Speaker Om Birla

ಈ ಸಂಬಂಧ ಇತ್ತೀಚೆಗಷ್ಟೇ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನ ಭೇಟಿಯಾಗಿರುವ ವಿಪಕ್ಷ ನಾಯಕರು, ಜ್ಞಾನೇಶ್ ಕುಮಾರ್ ಅವರನ್ನು ಹುದ್ದೆಯಿಂದ ವಜಾಗೊಳಿಸುವಂತೆ ಒತ್ತಾಯಿಸಿದ್ದಾರೆ. ಅಲ್ಲದೆ, ಸಿಇಸಿ ಮತ್ತು ಚುನಾವಣಾ ಆಯುಕ್ತರಿಗೆ ವಿನಾಯಿತಿ ಒದಗಿಸುವ 2023ರ ಕಾಯ್ದೆಯನ್ನ ರದ್ದುಗೊಳಿಸುವಂತೆಯೂ ಆಗ್ರಹಿಸಿದ್ದಾರೆ.

ನ್ಯಾಯಾಧೀಶರ ಮಾದರಿಯಲ್ಲಿ ವಾಗ್ದಂಡನೆ ಪ್ರಕ್ರಿಯೆ

ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸ್ಪೀಕರ್ ಓಂ ಬಿರ್ಲಾ, "ವಿರೋಧ ಪಕ್ಷಗಳು ನಿರ್ಣಯ ಮಂಡಿಸಿದಾಗ ನಾವು ನಿಯಮಾನುಸಾರ ಪ್ರಕ್ರಿಯೆಗಳನ್ನ ಪಾಲಿಸುತ್ತೇವೆ. ಸುಪ್ರೀಂ ಕೋರ್ಟ್ ನ್ಯಾಯಾಧೀಶರ ಇಂಪಿಚ್ಮೆಂಟ್ ಯಾವ ರೀತಿಯ ನಿಯಮಗಳಿವೆಯೋ, ಅದೇ ಮಾದರಿಯ ಪ್ರಕ್ರಿಯೆಗಳು ಸಿಇಸಿಗೂ ಅನ್ವಯವಾಗುತ್ತವೆ" ಎಂದರು.

ವಿಪಕ್ಷಗಳು ಈಗಾಗಲೇ ಜ್ಞಾನೇಶ್ ಕುಮಾರ್ ಅವರನ್ನ ವಜಾಗೊಳಿಸಲು ಎರಡು ಬಾರಿ ಯತ್ನಿಸಿವೆ. ಮೊದಲ ಪ್ರಯತ್ನದ ನೋಟಿಸ್‌ಗಳನ್ನು ಉಭಯ ಸದನಗಳು ತಿರಸ್ಕರಿಸಿದ್ದರೆ, ಎರಡನೇ ಪ್ರಯತ್ನದ ನೋಟಿಸ್‌ಗಳು ಇನ್ನೂ ಬಾಕಿ ಉಳಿದಿವೆ.

ನಿಯಮಗಳ ಪ್ರಕಾರ, ಸಿಇಸಿ ಸ್ವತಃ ರಾಷ್ಟ್ರಪತಿಗೆ ಲಿಖಿತ ರಾಜೀನಾಮೆ ಸಲ್ಲಿಸಬಹುದು ಅಥವಾ ಸಂಸತ್ತಿನ ಇಂಪಿಚ್ಮೆಂಟ್ ಮೂಲಕ ಅವರನ್ನು ಪದಚ್ಯುತಗೊಳಿಸಬಹುದು.

ವಿಶೇಷ ಸಂಸತ್ ಅಧಿವೇಶನದಲ್ಲಿ ನಡೆದಿದ್ದೇನು?

ಶಾಸನಸಭೆಗಳಲ್ಲಿ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಜಾರಿಗೊಳಿಸುವ ಮಸೂದೆ ಮತ್ತು ಕ್ಷೇತ್ರ ಪುನರ್ವಿಂಗಡಣೆ ಮಸೂದೆ ಮಂಡನೆಗಾಗಿ ಸರ್ಕಾರ ವಿಶೇಷ ಸಂಸತ್ ಅಧಿವೇಶನ ಕರೆಯಲಿದೆಯೇ ಎಂಬ ಪ್ರಶ್ನೆಗೆ ಸ್ಪೀಕರ್ ಬಿರ್ಲಾ ನೇರ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು.

ಆಗಸ್ಟ್ 13ರಂದು ಮುಂಗಾರು ಅಧಿವೇಶನ ಮುಂದೂಡಲ್ಪಟ್ಟಿದ್ದರೂ, ಸಂವಿಧಾನದ 85ನೇ ವಿಧಿಯ ಪ್ರಕಾರ ಇನ್ನೂ ಅಧಿಕೃತವಾಗಿ ಮುಕ್ತಾಯಗೊಂಡಿಲ್ಲ. ಇಂತಹ ಸುದೀರ್ಘ ವಿರಾಮಗಳು ಈ ಹಿಂದೆಯೂ ನಡೆದಿವೆ ಎಂದರು. ಇದೇ ವೇಳೆ, ಬಂಡಾಯವೆದ್ದ ಎನ್‌ಸಿಪಿಐ ಪಕ್ಷದೊಂದಿಗೆ ವಿಲೀನಗೊಂಡಿರುವ ತೃಣಮೂಲ ಕಾಂಗ್ರೆಸ್ (TMC) ಸಂಸದರ ಅನರ್ಹತೆ ಕೋರಿ ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆ ಸುಪ್ರೀಂ ಕೋರ್ಟ್ ಮತ್ತು ತಮ್ಮ ಮುಂದೆಯೂ ನಡೆಯುತ್ತಿದೆ, ಶೀಘ್ರವೇ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಸ್ಪಷ್ಟಪಡಿಸಿದರು.

ಬ್ರಿಕ್ಸ್ ಸಂಸದೀಯ ವೇದಿಕೆಯಲ್ಲಿ ಭಯೋತ್ಪಾದನೆ ವಿರುದ್ಧ ಚರ್ಚೆ

ಅಕ್ಟೋಬರ್ 26 ರಿಂದ ಭಾರತದ ಆತಿಥ್ಯದಲ್ಲಿ ನಡೆಯಲಿರುವ 12ನೇ ಬ್ರಿಕ್ಸ್ ಸಂಸದೀಯ ವೇದಿಕೆ ಕುರಿತು ಮಾತನಾಡಿದ ಲೋಕಸಭಾ ಸ್ಪೀಕರ್, ಈ ಸಮ್ಮೇಳನದಲ್ಲಿ ಭಯೋತ್ಪಾದನೆ ಮತ್ತು ಹವಾಮಾನ ಬದಲಾವಣೆಯಂತಹ ಜಾಗತಿಕ ಕಾಳಜಿಯ ವಿಷಯಗಳ ಬಗ್ಗೆ ಸುದೀರ್ಘ ಚರ್ಚೆ ನಡೆಯಲಿದೆ ಎಂದರು.

ಭಾರತವು ಭಯೋತ್ಪಾದನೆಯ ವಿರುದ್ಧ ಸದಾ ಕಠಿಣ ನಿಲುವು ಹೊಂದಿದ್ದು, ಈ ವೇದಿಕೆಯಲ್ಲಿ ಭಯೋತ್ಪಾದನೆ ನಿರ್ಮೂಲನೆಗೆ ಒಮ್ಮತದ ಜಂಟಿ ನಿರ್ಣಯ ಕೈಗೊಳ್ಳುವ ವಿಶ್ವಾಸವಿದೆ ಎಂದು ಅವರು ತಿಳಿಸಿದರು. ಪ್ರಧಾನಿ ನರೇಂದ್ರ ಮೋದಿ ಅವರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ವಿವಿಧ ದೇಶಗಳ ನಿಯೋಗಗಳನ್ನು ಭೇಟಿಯಾಗಲಿದ್ದು, 18 ದೇಶಗಳು ಈಗಾಗಲೇ ವೇದಿಕೆಗೆ ತಮ್ಮ ಸಲಹೆಗಳನ್ನು ಸಲ್ಲಿಸಿವೆ ಎಂದು ಮಾಹಿತಿ ನೀಡಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+