ಮೇ 29ಕ್ಕೆ ಹೊರಬೀಳಲಿದೆ ಸಿಬಿಎಸ್‌ಇ 10ನೇ ಕ್ಲಾಸ್ ಫಲಿತಾಂಶ
ನವದೆಹಲಿ, ಮೇ 28: ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿಯು 10 ನೇ ತರಗತಿ ಫಲಿತಾಂಶವನ್ನು ಮಂಗಳವಾರ(ಮೇ29)ರಂದು ಸಂಜೆ 4 ಗಂಟೆಗೆ ಪ್ರಕಟಿಸಲಿದೆ.
10ನೇ ತರಗತಿ ಪರೀಕ್ಷೆಯು ಮಾರ್ಚ್ 5ರಿಂದ ಎಪ್ರಿಲ್ 4ರವರೆಗೆ ನಡೆದಿತ್ತು. 16, 38,420 ವಿದ್ಯಾರ್ಥಿಗಳು 1೦ನೇ ತರಗತಿ ಪರೀಕ್ಷೆಗೆ ಹಾಜರಾಗಿದ್ದು 4453 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಸಲಾಗಿತ್ತು.

ಸಿಬಿಎಸ್ಇ 10ನೇ ಫಲಿತಾಂಶ ವೀಕ್ಷಣೆಗೆ ಫಾಲೋ ಮಾಡಬೇಕಾದ ಸ್ಟೆಪ್ಸ್: ಸ್ಟೆಪ್ 1) ಆಫೀಶಿಯಲ್ ವೆಬ್‌ಸೈಟ್‌ಗೆ ಲಾಗಿನ್ ಆಗಿ ಸ್ಟೆಪ್ 2) ಸಿಬಿಎಸ್ಇ 10ನೇ ತರಗತಿ ಫಲಿತಾಂಶ ಸೆಕ್ಷನ್ ಮೇಲ್ ಕ್ಲಿಕ್ ಮಾಡಿ ಸ್ಟೆಪ್ 3) ಸಿಬಿಎಸ್ಇ 10ನೇ ತರಗತಿ ಬೋರ್ಡ್ ಎಕ್ಸಾಂ ರಿಸಲ್ಟ್ 2018 ಲಿಂಕ್ ಮೇಲೆ ಕ್ಲಿಕ್ ಮಾಡಿ ಸ್ಟೆಪ್ 4) ನಿಮ್ಮ ಪ್ರವೇಶ ಪತ್ರದ ಡೀಟೆಲ್ಸ್ ನಮೂದಿಸಿ ಸ್ಟೆಪ್ 5) ಡಿಟೇಲ್ಸ್ ನಮೂದಿಸಿದ ಕೂಡಲೇ ನಿಮ್ಮ ಫಲಿತಾಂಶ ಪರದೆ ಮೇಲೆ ಮೂಡುತ್ತದೆ ಸ್ಟೆಪ್ 6) ಕೊನೆಯದಾಗಿ ಫಲಿತಾಂಶದ ಪ್ರಿಂಟೌಟ್ ತೆಗೆದುಕೊಳ್ಳಿ .
cbseresults.nic.in ಅಥವಾ cbse.nic.in ಅಥವಾ results.nic.in ಗೆ ಭೇಟಿ ನೀಡಿ ಫಲಿತಾಂಶ ಪರಿಶೀಲಿಸಬಹುದು.












Click it and Unblock the Notifications