ಕೋವಿಡ್-19 ಸಮಸ್ಯೆಗೆ ಒಳಗಾದ ವಿದ್ಯಾರ್ಥಿಗಳಿಗೆ ಸಿಬಿಎಸ್‌ಇ ಪ್ರಾಕ್ಟಿಕಲ್ ಪರೀಕ್ಷೆ

ನವದೆಹಲಿ, ಏಪ್ರಿಲ್ 2: ಕೋವಿಡ್-19ಕ್ಕೆ ತುತ್ತಾಗಿದ್ದ 10 ಹಾಗೂ 12ನೆಯ ತರಗತಿ ವಿದ್ಯಾರ್ಥಿಗಳಿಗೆ ಜೂನ್ ತಿಂಗಳ 11ಕ್ಕೂ ಮುನ್ನ ಪ್ರಾಕ್ಟಿಕಲ್ ಪರೀಕ್ಷೆಗಳನ್ನು ನಡೆಸಲು ಸಿಬಿಎಸ್‌ಇ ತೀರ್ಮಾನಿಸಿದೆ. ಈ ಸಂಬಂಧ ಸಿಬಿಎಸ್‌ಇ, ಗುರುವಾರ ಅಧಿಸೂಚನೆ ಹೊರಡಿಸಿದೆ.

'ಅಭ್ಯರ್ಥಿಯು ಕೋವಿಡ್-19 ಪಾಸಿಟಿವ್‌ಗೆ ಒಳಗಾಗಿದ್ದ ಕಾರಣಕ್ಕೆ ಅಥವಾ ಅವರ ತಂದೆ, ತಾಯಿ, ಸಹೋದರ ಮತ್ತು ಸಹೋದರಿ ಮುಂತಾದ ಕುಟುಂಬದ ಯಾವುದೇ ಸದಸ್ಯರು ಕೋವಿಡ್-19 ಪಾಸಿಟಿವ್‌ಗೆ ಒಳಗಾಗಿದ್ದರಿಂದ ಪ್ರಾಕ್ಟಿಕಲ್ ಪರೀಕ್ಷೆಗೆ ಗೈರು ಹಾಜರಾಗಿದ್ದರೆ, ಅಂತಹ ಅಭ್ಯರ್ಥಿಗಳಿಗೆ ಸಂಬಂಧಿಸಿದ ಪ್ರಾದೇಶಿಕ ಅಧಿಕಾರಿಗಳೊಂದಿಗೆ ಶಾಲೆಗಳು ಸಮಾಲೋಚನೆ ನಡೆಸಿದ ಬಳಿಕ ಸೂಕ್ತ ಸಮಯದಲ್ಲಿ ಪ್ರಾಕ್ಟಿಕಲ್ ಪರೀಕ್ಷೆಗಳನ್ನು ನಡೆಸಲಿವೆ. ಆದರೆ ಈ ಪರೀಕ್ಷೆಗಳು ಜೂನ್ 11ರ ಒಳಗೆ ನಡೆಯಲಿವೆ' ಎಂದು ಅಧಿಸೂಚನೆ ತಿಳಿಸಿದೆ.

ಬೋರ್ಡ್ ವಿದ್ಯಾರ್ಥಿಗಳ ಪ್ರಾಕ್ಟಿಕಲ್ ಪರೀಕ್ಷೆಗಳು ಮಾರ್ಚ್ 1ರಂದು ಆರಂಭವಾಗಿದ್ದು, ಜೂನ್ 11ರಂದು ಮುಕ್ತಾಯಗೊಳ್ಳಲಿದೆ. ಸಿಬಿಎಸ್‌ಇ ಬೋರ್ಡ್ ಪರೀಕ್ಷೆಗಳು ಮೇ 4ರಿಂದ ಜೂನ್ 1ರವರೆಗೆ ನಡೆಯಲಿವೆ.

CBSE To Conduct Practical Exams For Covid-19 Affected Students Before June 11

ಈ ನಡುವೆ 2021-22ನೇ ಸಾಲಿನ 9-12ನೇ ತರಗತಿಯವರೆಗಿನ ಪಠ್ಯಕ್ರಮಗಳನ್ನು ಬಿಡುಗಡೆ ಮಾಡಲಾಗಿದೆ. ಹೊಸ ಶೈಕ್ಷಣಿಕ ಅವಧಿಯು ಏಪ್ರಿಲ್‌ನಿಂದ ಆರಂಭವಾಗಿದ್ದು, ಪಠ್ಯಕ್ರಮದಲ್ಲಿ ಸಿಬಿಎಸ್‌ಇ ಯಾವುದೇ ಕಡಿತಗಳನ್ನು ಮಾಡಿಲ್ಲ.

ಈ ಹೊಸ ಪಠ್ಯಕ್ರಮವು 2021-22ನೇ ಶೈಕ್ಷಣಿಕ ಅವಧಿಗೆ ಅನ್ವಯವಾಗುತ್ತದೆ. 2021ರ ಸಿಬಿಎಸ್‌ಇ ಬೋರ್ಡ್ ಪರೀಕ್ಷೆಗಳು ಈ ಹಿಂದಿನ ಪಠ್ಯಕ್ರಮಕ್ಕೆ ಅನುಗುಣವಾಗಿರುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+