CBSE Results 2026: ಸಿಬಿಎಸ್‌ಇ 10 ಮತ್ತು 12ನೇ ತರಗತಿಯ ಉತ್ತರ ಪತ್ರಿಕೆಯ ಪ್ರತಿ ಪಡೆಯುವುದು ಹೇಗೆ?
CBSE Answer Sheet Photocopy 2026: CBSE 10 ಮತ್ತು 12ನೇ ತರಗತಿಯ ಉತ್ತರ ಪತ್ರಿಕೆಯ ಪ್ರತಿಯನ್ನು ಆನ್‌ಲೈನ್‌ನಲ್ಲಿ ಪಡೆಯುವುದು ಹೇಗೆ ?ಅರ್ಜಿ ಸಲ್ಲಿಸುವ ಪ್ರಕ್ರಿಯೆ, ಇದಕ್ಕೆ ತಗಲುವ ಶುಲ್ಕಗಳ ಬಗೆಗಿನ ಸಂಪೂರ್ಣ ಮಾಹಿತಿ ಇಲ್ಲಿದೆ.
ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (CBSE) ವಿದ್ಯಾರ್ಥಿಗಳು 10 ಮತ್ತು 12 ನೇ ತರಗತಿಯ ಉತ್ತರ ಪತ್ರಿಕೆಗಳ ಫೋಟೋ ಕಾಪಿಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸುತ್ತದೆ.ತಾವು ಬರೆದಿರುವ ಉತ್ತರಕ್ಕೆ ಸರಿಯಾದ ಪ್ರಮಾಣದಲ್ಲಿ ಅಂಕ ಲಭಿಸಿಲ್ಲ ಅಥವಾ ತಮಗೆ ಇನ್ನೂ ಹೆಚ್ಚು ಅಂಕ ಪಡೆಯುವ ನಿರೀಕ್ಷೆಯಿತ್ತು ಎಂದು ಭಾವಿಸುವ ವಿದ್ಯಾರ್ಥಿಗಳು ತಮ್ಮ ಉತ್ತರ ಪತ್ರಿಕೆಯ ಫೋಟೋ ಕಾಪಿಗಾಗಿ CBSEಗೆ ಅರ್ಜಿ ಸಲ್ಲಿಸಬಹುದು. 10 ಮತ್ತು 12 ನೇ ತರಗತಿಯ ಫಲಿತಾಂಶಗಳ ಘೋಷಣೆಯ ನಂತರ ಉತ್ತರ ಪತ್ರಿಕೆಯ ಫೋಟೋ ಕಾಪಿಗೆ ಅರ್ಜಿ ಸಲ್ಲಿಸಲು CBSE . ಈ ಪ್ರಕ್ರಿಯೆಯಅವಾಕಾಶ ನೀಡುತ್ತದೆ.ಈ ಮೂಲಕ ವಿದ್ಯಾರ್ಥಿಗಳು ತಮ್ಮ ಉತ್ತರ ಪತ್ರಿಕೆಯನ್ನು ಪರಿಶೀಲಿಸಬಹುದು.ಈ ವೇಳೆ ವಿದ್ಯಾರ್ಥಿಗಳು ತಮ್ಮ ಉತ್ತರ ಪತ್ರಿಕೆಯಲ್ಲಿ ಮೌಲ್ಯಮಾಪನ ಆಗದೇ ಉಳಿದಿರುವ ಪ್ರಶ್ನೆಗಳಿದ್ದರೆ ಅಥವಾ ತಪ್ಪಾಗಿ ಮೌಲ್ಯಮಾಪನವಾಗಿರುವ ಪ್ರಶ್ನೆಗಳಿದ್ದರೆ ಅದನ್ನು ಗುರತಿಸಬಹುದಾಗಿದೆ.ವಿದ್ಯಾರ್ಥಿಗಳು ಒಮ್ಮೆ ತಮ್ಮ ಉತ್ತರ ಪತ್ರಿಕೆಯ ಫೋಟೋಕಾಪಿ ಪರಿಶೀಲಿಸಿದ ನಂತರ, ಅವರು ತಮ್ಮ ಉತ್ತರ ಪತ್ರಿಕೆಯನ್ನು ಮರುಮೌಲ್ಯಮಾಪನಕ್ಕೆ ಹಾಕಬಹುದು.

ಏನಿದು CBSE ಉತ್ತರ ಪತ್ರಿಕೆಯ ಫೋಟೋಕಾಪಿ?
CBSE 10ನೇ ಮತ್ತು 12ನೇ ತರಗತಿಗಳ ಪರೀಕ್ಷಾ ಫಲಿತಾಂಶಗಳ ಘೋಷಣೆಯ ನಂತರ, ಬಹಳಷ್ಟು ವಿದ್ಯಾರ್ಥಿಗಳು ತಮಗೆ ಬಂದಿರುವ ಅಂಕಗಳಿಂದ ತೃಪ್ತರಾಗಿರುವುದಿಲ್ಲ. ಈ ಸಂದರ್ಭದಲ್ಲಿ ಎಲ್ಲಿ ಏನು ತಪ್ಪಾಗಿದೆ ಎಂದು ತಿಳಿದುಕೊಳ್ಳುವ ಸಲುವಾಗಿ ವಿದ್ಯಾರ್ಥಿಗಳು ತಮ್ಮ ಉತ್ತರ ಪತ್ರಿಕೆಯ ಪ್ರತಿಗೆ ಅರ್ಜಿ ಸಲ್ಲಿಸಬಹುದು. ನಂತರ ವಿದ್ಯಾರ್ಥಿಗಳು ತಮ್ಮ ಅಂಕಗಳನ್ನು ಪರಿಶೀಲಿಸಲು CBSE ಅವಕಾಶ ನೀಡುತ್ತದೆ. ಅಂಕಗಳ ಪರಿಶೀಲನೆಗೆ ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ಮಾತ್ರ ಉತ್ತರ ಪತ್ರಿಕೆಯ ಪ್ರತಿಯನ್ನು ಪಡೆಯಬಹುದು. ತಮ್ಮ ಉತ್ತರ ಪತ್ರಿಕೆಯ ಪ್ರತಿಯನ್ನು ಪಡೆಯಲು ಬಯಸುವ ವಿದ್ಯಾರ್ಥಿಗಳು CBSE ವೆಬ್‌ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದು .
ಹೀಗೆ ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳು ಪ್ರತಿಗಳನ್ನು ಪಡೆಯಲು ನಿರ್ದಿಷ್ಟ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ವಿದ್ಯಾರ್ಥಿಗಳು ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ ಮತ್ತು ನೆಟ್ ಬ್ಯಾಂಕಿಂಗ್ ಮೂಲಕ ಆನ್‌ಲೈನ್‌ನಲ್ಲಿ ಈ ಶುಲ್ಕವನ್ನು ಠೇವಣಿ ಮಾಡಬೇಕು. ಪರೀಕ್ಷಕರು/ಮೌಲ್ಯಮಾಪಕರು/ಪರೀಕ್ಷಾ ಪ್ರಕ್ರಿಯೆಗೆ ಸಂಬಂಧಿಸಿದ ಯಾವುದೇ ಇತರ ಅಧಿಕಾರಿಯ ಗುರುತಿಗೆ ಸಂಬಂಧಿಸಿದ ಎಲ್ಲಾ ಮಾಹಿತಿಯನ್ನು ನಿರ್ಬಂಧಿಸಿದ ನಂತರ ಉತ್ತರ ಪತ್ರಿಕೆಯ ಪ್ರತಿಯನ್ನು ವಿದ್ಯಾರ್ಥಿಯ ಲಾಗಿನ್ ಖಾತೆಗೆ ಕಳುಹಿಸಲಾಗುತ್ತದೆ.
CBSE ಉತ್ತರ ಪತ್ರಿಕೆಯ ಪ್ರತಿಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಹೇಗೆ?
ಸಿಬಿಎಸ್‌ಇ ಉತ್ತರ ಪತ್ರಿಕೆಯ ಫೋಟೋ ಕಾಪಿಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಹೀಗಿದೆ.
* ಸಿಬಿಎಸ್‌ಇ ವೆಬ್‌ಸೈಟ್‌ಗೆ ಭೇಟಿ ನೀಡಿ
* ನಿಮ್ಮ ಉತ್ತರ ಪತ್ರಿಕೆಯ ಫೋಟೋ ಕಾಪಿಗೆ ರಿಕ್ವೆಸ್ಟ್ ಮಾಡಲು ನಿಮಗೆ ಒಂದು ಆಯ್ಕೆ ಸಿಗುತ್ತದೆ.
* ಈ ಅಪ್ಲಿಕೇಶನ್ ಮೇಲೆ ಕ್ಲಿಕ್ ಮಾಡಿ.
* ರೋಲ್ ನಂಬರ್, ತರಗತಿ (10 ಅಥವಾ 12), ಯಾವ ವಿಷಯದ ಉತ್ತರ ಪತ್ರಿಕೆ ಬೇಕು ಎನ್ನುವ ಮಾಹಿತಿಯನ್ನು ಭರ್ತಿ ಮಾಡಿ.
* ಪ್ರತಿ ವಿಷಯಕ್ಕೆ 500 ರಿಂದ 700 ರೂಪಾಯಿಗಳವರೆಗೆ ವೆಚ್ಚವಾಗುತ್ತದೆ.
* ಪೋರ್ಟಲ್ ಮೂಲಕ ಆನ್‌ಲೈನ್‌ನಲ್ಲಿ ಪಾವತಿ ಮಾಡಬೇಕು.
* ನೀವು ಮಾಡಿರುವ ವಿನಂತಿಯನ್ನು CBSE ಪ್ರಕ್ರಿಯೆಗೊಳಿಸಿದ ನಂತರ, ನಿಮ್ಮ ಉತ್ತರ ಪತ್ರಿಕೆಯ ಸ್ಕ್ಯಾನ್ ಮಾಡಿದ ಪ್ರತಿಯನ್ನು ಅಪ್‌ಲೋಡ್ ಮಾಡಲಾಗುತ್ತದೆ.
* ಅದನ್ನು ಡೌನ್‌ಲೋಡ್ ಮಾಡಿ ಎಚ್ಚರಿಕೆಯಿಂದ ಪರಿಶೀಲಿಸಿ.
CBSE 10ನೇ ಮತ್ತು 12ನೇ ತರಗತಿಗಳ ಫಲಿತಾಂಶಗಳ ಮರುಮೌಲ್ಯಮಾಪನ ಅಥವಾ ಮರುಪರಿಶೀಲನೆ:
ಮೌಲ್ಯಮಾಪನ ಮಾಡಿದ ಉತ್ತರ ಪತ್ರಿಕೆಯ ಫೋಟೋಕಾಪಿ ಪಡೆಯಲು ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾತ್ರ ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಬಹುದು ಅಥವಾ ಯಾವುದೇ ಪ್ರಶ್ನೆಗೆ ನೀಡಲಾದ ಅಂಕಗಳನ್ನು ಪ್ರಶ್ನಿಸಬಹುದು ಎನ್ನುವುದು ನೆನಪಿರಲಿ.
(ಬರಹ: ರಂಜಿತಾ ಆರ್.ಕೆ.)












Click it and Unblock the Notifications