CBSE 10ನೇ ತರಗತಿ ಪರೀಕ್ಷೆಗೆ 20 ದಿನ ಬಾಕಿ: ಟೆನ್ಶನ್ ಬಿಡಿ, ಈ ಡೇ-ಪ್ಲಾನ್ ಫಾಲೋ ಮಾಡಿ
CBSE Class 10 Exams 2026: ಸಿಬಿಎಸ್‌ಇ (CBSE) 10ನೇ ತರಗತಿಯ ಬೋರ್ಡ್ ಪರೀಕ್ಷೆಗಳಿಗೆ ಇನ್ನು ಕೇವಲ 20 ದಿನಗಳು ಮಾತ್ರ ಬಾಕಿ ಉಳಿದಿವೆ. ಫೆಬ್ರವರಿ 17, 2026 ರಂದು ಪರೀಕ್ಷೆಗಳು ಆರಂಭವಾಗಲಿದ್ದು, ಈ ಬಾರಿ ಮೊದಲ ದಿನವೇ 'ಗಣಿತ' ವಿಷಯದ ಪರೀಕ್ಷೆ ಎದುರಾಗುತ್ತಿರುವುದು ವಿದ್ಯಾರ್ಥಿಗಳಲ್ಲಿ ಸ್ವಲ್ಪ ಆತಂಕ ಮೂಡಿಸಿದೆ. ಆದರೆ, ಭಯಪಡುವ ಅಗತ್ಯವಿಲ್ಲ. ಕೈಯಲ್ಲಿರುವ ಈ 20 ದಿನಗಳನ್ನು ಅಂದರೆ ಸುಮಾರು 240 ಗಂಟೆಗಳ ಅಧ್ಯಯನ ಸಮಯವನ್ನು ಸರಿಯಾಗಿ ಬಳಸಿಕೊಂಡರೆ, ನೀವು ಅಂದುಕೊಂಡ ಗುರಿ ಮುಟ್ಟುವುದು ಖಂಡಿತ.
ವಿದ್ಯಾರ್ಥಿಗಳೇ, ಈಗ ವಾರಕ್ಕೊಂದು ಪ್ಲಾನ್ ಹಾಕುವ ಸಮಯವಲ್ಲ; ಪ್ರತಿ ದಿನವೂ, ಪ್ರತಿ ಗಂಟೆಯೂ ಮುಖ್ಯ. ನಿಮಗಾಗಿ ಇಲ್ಲಿದೆ ಅಂತಿಮ ಘಟ್ಟದ '20 ದಿನಗಳ ದಿನವಾರು ಸ್ಟಡಿ ಪ್ಲಾನ್'.

ಮೊದಲೇ ತಿಳಿದಿರಲಿ: ಪರೀಕ್ಷಾ ವೇಳಾಪಟ್ಟಿ (ಪ್ರಮುಖ ವಿಷಯಗಳು)
ಫೆಬ್ರವರಿ 17: ಗಣಿತ
ಫೆಬ್ರವರಿ 21: ಇಂಗ್ಲಿಷ್
ಫೆಬ್ರವರಿ 25: ವಿಜ್ಞಾನ
ಮಾರ್ಚ್ 2: ಹಿಂದಿ/ಭಾಷಾ ವಿಷಯಗಳು
ಮಾರ್ಚ್ 7: ಸಮಾಜ ವಿಜ್ಞಾನ
ಮೊದಲ ಪರೀಕ್ಷೆಯೇ ಗಣಿತ ಆಗಿರುವುದರಿಂದ, ನಮ್ಮ ಈ 20 ದಿನಗಳ ಪ್ಲಾನ್‌ನಲ್ಲಿ ಕೊನೆಯ 5 ದಿನಗಳನ್ನು ಸಂಪೂರ್ಣವಾಗಿ ಗಣಿತಕ್ಕೆ ಮೀಸಲಿಡಲಾಗಿದೆ.
ದಿನವಾರು ಸ್ಟಡಿ ಪ್ಲಾನ್
ನಿಮ್ಮ ಮುಂದಿನ 20 ದಿನಗಳನ್ನು 3 ಹಂತಗಳಾಗಿ ವಿಂಗಡಿಸಿಕೊಳ್ಳಿ.
ಹಂತ 1: ಕಠಿಣ ವಿಷಯಗಳ ಅಂತಿಮ ರಿವಿಷನ್ (ದಿನ 1 ರಿಂದ ದಿನ 8)
ಈ ದಿನಗಳಲ್ಲಿ ವಿಜ್ಞಾನ ಮತ್ತು ಸಮಾಜ ವಿಜ್ಞಾನವನ್ನು ಮುಗಿಸಿಬಿಡಬೇಕು. ಏಕೆಂದರೆ ಪರೀಕ್ಷೆ ಹತ್ತಿರ ಬಂದಾಗ ಗಣಿತದ ಟೆನ್ಶನ್‌ನಲ್ಲಿ ಇವುಗಳನ್ನು ಓದಲು ಸಾಧ್ಯವಾಗುವುದಿಲ್ಲ.
ದಿನ 1 (ವಿಜ್ಞಾನ - ರಸಾಯನಶಾಸ್ತ್ರ): ರಾಸಾಯನಿಕ ಸಮೀಕರಣಗಳು ಮತ್ತು ಕಾರ್ಬನ್ ಸಂಯುಕ್ತಗಳ ಅಧ್ಯಾಯವನ್ನು ಪೂರ್ಣಗೊಳಿಸಿ.
ದಿನ 2 (ವಿಜ್ಞಾನ - ಜೀವಶಾಸ್ತ್ರ): ಲೈಫ್ ಪ್ರೋಸೆಸ್ ಮತ್ತು ಅನುವಂಶೀಯತೆ (Heredity) ಪಾಠಗಳ ಚಿತ್ರಗಳನ್ನು (Diagrams) ಬರೆದು ಕಲಿಯಿರಿ.
ದಿನ 3 (ವಿಜ್ಞಾನ - ಭೌತಶಾಸ್ತ್ರ): ಬೆಳಕು (Light) ಮತ್ತು ವಿದ್ಯುತ್ (Electricity) ಪಾಠದ ನ್ಯೂಮರಿಕಲ್ಸ್ (Numericals) ಮತ್ತು ಸೂತ್ರಗಳನ್ನು ಪಟ್ಟಿ ಮಾಡಿ.
ದಿನ 4 (ಸಮಾಜ ವಿಜ್ಞಾನ - ಇತಿಹಾಸ): ಯುರೋಪ್ ಮತ್ತು ಭಾರತದಲ್ಲಿ ರಾಷ್ಟ್ರೀಯತೆ (Nationalism) ಪಾಠಗಳ ಪ್ರಮುಖ ದಿನಾಂಕಗಳು ಮತ್ತು ಘಟನೆಗಳನ್ನು ಓದಿ.
ದಿನ 5 (ಸಮಾಜ ವಿಜ್ಞಾನ - ಭೂಗೋಳ & ಪೌರನೀತಿ): ಮ್ಯಾಪ್ ವರ್ಕ್ (Map Work) ಮತ್ತು ಪ್ರಜಾಪ್ರಭುತ್ವದ ಫಲಿತಾಂಶಗಳ ಪಾಠವನ್ನು ಮುಗಿಸಿ.
ದಿನ 6 (ಇಂಗ್ಲಿಷ್): ಎಲ್ಲಾ ಗದ್ಯ ಮತ್ತು ಪದ್ಯಗಳ ಸಾರಾಂಶವನ್ನು ಒಮ್ಮೆ ಕಣ್ಣಾಡಿಸಿ. ಗ್ರಾಮರ್ ವಿಭಾಗ ಅಭ್ಯಾಸ ಮಾಡಿ.
ದಿನ 7 & 8 (ಮಿಶ್ರ ಅಧ್ಯಯನ): ಈ ವಾರದಲ್ಲಿ ನೀವು ಓದಿದ ವಿಷಯಗಳಲ್ಲಿ ಯಾವುದು ಇನ್ನೂ ಕಷ್ಟವೆನಿಸುತ್ತಿದೆಯೋ, ಅದನ್ನು ಮಾತ್ರ ಮತ್ತೆ ಓದಿ. ಒಂದು ಪೂರ್ಣ ಮಾದರಿ ಪ್ರಶ್ನೆ ಪತ್ರಿಕೆ ಬಿಡಿಸಿ.
ಹಂತ 2: ಮಾದರಿ ಪತ್ರಿಕೆಗಳ ಬಿಡಿಸುವಿಕೆ (ದಿನ 9 ರಿಂದ ದಿನ 14)
ಈಗ ಓದುವುದು ಕಡಿಮೆ, ಬರೆಯುವುದು ಜಾಸ್ತಿ. ಪರೀಕ್ಷೆಯ ಸಮಯದಲ್ಲೇ (ಬೆಳಿಗ್ಗೆ 10:30 - 1:30) ಕುಳಿತು ಬರೆಯುವುದನ್ನು ಅಭ್ಯಾಸ ಮಾಡಿ.
ದಿನ 9: ವಿಜ್ಞಾನ ಮಾದರಿ ಪ್ರಶ್ನೆ ಪತ್ರಿಕೆ (3 ಗಂಟೆ ಬರೆಯಿರಿ) + ತಪ್ಪುಗಳ ವಿಶ್ಲೇಷಣೆ.
ದಿನ 10: ಸಮಾಜ ವಿಜ್ಞಾನ ಮಾದರಿ ಪತ್ರಿಕೆ + ಮ್ಯಾಪ್ ವರ್ಕ್ ಅಭ್ಯಾಸ.
ದಿನ 11: ಇಂಗ್ಲಿಷ್ ಮಾದರಿ ಪತ್ರಿಕೆ (ಬರವಣಿಗೆಯ ವೇಗ ಹೆಚ್ಚಿಸಿಕೊಳ್ಳಲು).
ದಿನ 12: ಹಿಂದಿ/ಕನ್ನಡ (ದ್ವಿತೀಯ ಭಾಷೆ) ರಿವಿಷನ್ + ಹಳೆಯ ಪ್ರಶ್ನೆ ಪತ್ರಿಕೆ ನೋಡಿ.
ದಿನ 13: ಸಂಪೂರ್ಣ ವಿಜ್ಞಾನದ ಫಾರ್ಮುಲಾ ಮತ್ತು ಡಯಾಗ್ರಾಂ ರಿವಿಷನ್.
ದಿನ 14: ಸಮಾಜ ವಿಜ್ಞಾನದ ಎಲ್ಲಾ 4 ಭಾಗಗಳ ತ್ವರಿತ ಪುನರಾವರ್ತನೆ
ಹಂತ 3: ಮಿಷನ್ ಮ್ಯಾಥಮೆಟಿಕ್ಸ್ (ದಿನ 15 ರಿಂದ ದಿನ 20)
ಫೆಬ್ರವರಿ 17 ರಂದು ಗಣಿತ ಪರೀಕ್ಷೆ ಇರುವುದರಿಂದ, ಈ ಕೊನೆಯ 6 ದಿನಗಳು ಕೇವಲ ಗಣಿತಕ್ಕೆ ಮಾತ್ರ ಮೀಸಲು.
ದಿನ 15 (ಬೀಜಗಣಿತ): ಪಾಲಿನೋಮಿಯಲ್ಸ್, ರೇಖಾತ್ಮಕ ಸಮೀಕರಣಗಳು ಮತ್ತು ಕ್ವಾಡ್ರಾಟಿಕ್ ಇಕ್ವೇಶನ್ಸ್‌ಗಳನ್ನು ಮುಗಿಸಿ.
ದಿನ 16 (ಜ್ಯಾಮಿಟ್ರಿ): ತ್ರಿಭುಜಗಳು ಮತ್ತು ವೃತ್ತಗಳ ಪ್ರಮೇಯಗಳನ್ನು ಬರೆದು ಕಲಿಯಿರಿ. ಇದು ಅತಿ ಹೆಚ್ಚು ಅಂಕ ತಂದುಕೊಡುವ ಭಾಗ.
ದಿನ 17 (ತ್ರಿಕೋನಮಿತಿ & ಮೆನ್ಸುರೇಷನ್): ತ್ರಿಕೋನಮಿತಿ ಐಡೆಂಟಿಟಿಗಳು ಮತ್ತು ಮೇಲ್ಮೈ ವಿಸ್ತೀರ್ಣದ ಸೂತ್ರಗಳನ್ನು ಕಂಠಪಾಠ ಮಾಡಿ.
ದಿನ 18 (ಸಂಖ್ಯಾಶಾಸ್ತ್ರ & ಸಂಭವನೀಯತೆ): ಸಂಖ್ಯಾಶಾಸ್ತ್ರ ಮತ್ತು ಸಂಭವನೀಯತೆ ತುಂಬಾ ಸುಲಭ. ಇಲ್ಲಿ ಒಂದು ಅಂಕವೂ ಹೋಗದಂತೆ ನೋಡಿಕೊಳ್ಳಿ.
ದಿನ 19 (ಪೂರ್ಣ ಪತ್ರಿಕೆ): 2025ರ ಅಥವಾ 2024ರ ಗಣಿತ ಬೋರ್ಡ್ ಪೇಪರ್ ಅನ್ನು ಟೈಮ್ ಇಟ್ಟುಕೊಂಡು ಬಿಡಿಸಿ.
ದಿನ 20 (ಅಂತಿಮ ತಯಾರಿ): ಹೊಸದಾಗಿ ಏನನ್ನೂ ಓದಬೇಡಿ. ಫಾರ್ಮುಲಾ ಶೀಟ್ ಮಾತ್ರ ನೋಡಿ. ಶಾಂತವಾಗಿರಿ, ಚೆನ್ನಾಗಿ ನಿದ್ದೆ ಮಾಡಿ.
ದಿನನಿತ್ಯದ ಮಾದರಿ ವೇಳಾಪಟ್ಟಿ
ಈ 20 ದಿನಗಳು ಶಾಲೆಗೆ ರಜೆ ಹಾಕಿ ಅಥವಾ ಸ್ಟಡಿ ಲೀವ್ ಪಡೆದು ಮನೆಯಲ್ಲೇ ಓದುವವರಿಗೆ ಈ ಟೈಮ್ ಟೇಬಲ್ ಬೆಸ್ಟ್:
ಬೆಳಿಗ್ಗೆ 6:00 - 8:30: ಕಠಿಣ ವಿಷಯದ ಕಲಿಕೆ (ಫ್ರೆಶ್ ಮೈಂಡ್ ಇರುತ್ತದೆ).
ಬೆಳಿಗ್ಗೆ 9:00 - 10:00: ಉಪಹಾರ ಮತ್ತು ಸ್ನಾನ.
ಬೆಳಿಗ್ಗೆ 10:30 - ಮಧ್ಯಾಹ್ನ 1:30: ಪರೀಕ್ಷಾ ಸಮಯ. ಈ ಸಮಯದಲ್ಲಿ ಮಾದರಿ ಪ್ರಶ್ನೆ ಪತ್ರಿಕೆ ಬರೆಯುವುದನ್ನು ಅಭ್ಯಾಸ ಮಾಡಲೇಬೇಕು. ಇದು ನಿಮ್ಮ ಮೆದುಳನ್ನು ಪರೀಕ್ಷೆಯ ಸಮಯಕ್ಕೆ ಒಗ್ಗಿಸುತ್ತದೆ.
ಮಧ್ಯಾಹ್ನ 2:30 - 4:00: ವಿಶ್ರಾಂತಿ / ಪವರ್ ನ್ಯಾಪ್ (ನಿದ್ದೆ).
ಸಂಜೆ 4:00 - 6:00: ಬೆಳಿಗ್ಗೆ ಬರೆದ ಪೇಪರ್ ವಿಶ್ಲೇಷಣೆ (ಯಾವುದು ತಪ್ಪಾಯ್ತು? ಯಾಕೆ ತಪ್ಪಾಯ್ತು?).
ಸಂಜೆ 6:30 - 8:30: ಸುಲಭ ವಿಷಯಗಳು ಅಥವಾ ಭಾಷಾ ವಿಷಯಗಳ ಓದು.
ರಾತ್ರಿ 9:30 - 10:30: ಕ್ವಿಕ್ ರಿವಿಷನ್ (ಸೂತ್ರಗಳು, ಮ್ಯಾಪ್, ಡಯಾಗ್ರಾಂ).
ರಾತ್ರಿ 11:00: ಕಡ್ಡಾಯವಾಗಿ ನಿದ್ದೆ ಮಾಡಿ.
ಪಾಲಿಸಲೇಬೇಕಾದ 3 ನಿಯಮಗಳು
ಮೊಬೈಲ್ ಸ್ವಿಚ್ ಆಫ್: ಓದುವಾಗ ಮೊಬೈಲ್ ಪಕ್ಕದಲ್ಲಿದ್ದರೆ 20 ದಿನದಲ್ಲಿ ಯಾವುದೇ ಸಬ್ಜೆಕ್ಟ್ ಮುಗಿಸಲು ಆಗುವುದಿಲ್ಲ. ಮೊಬೈಲ್ ಆಫ್ ಮಾಡಿ, ಅದರಲ್ಲಿ ನೋಟಿಫಿಕೇಶನ್ ಬರದಂತೆ ಮಾಡಿಕೊಳ್ಳಿ.
ಬರೆದು ಓದಿ: ಕೇವಲ ಕಣ್ಣಲ್ಲಿ ನೋಡಿದರೆ ಸಾಲದು, ಗಣಿತ ಮತ್ತು ವಿಜ್ಞಾನವನ್ನು ಬರೆದರೆ ಮಾತ್ರ ನೆನಪಿರಲು ಸಾಧ್ಯ.
ಆರೋಗ್ಯವೇ ಭಾಗ್ಯ: ಈ 20 ದಿನ ಜಂಕ್ ಫುಡ್ ತಿನ್ನಬೇಡಿ. ಹುಷಾರು ತಪ್ಪಿದರೆ ಇಡೀ ವರ್ಷದ ಶ್ರಮ ಹಾಳಾಗುತ್ತದೆ.
ಸಮಯ ಕಡಿಮೆ ಇದೆ ನಿಜ, ಆದರೆ ಅಸಾಧ್ಯವೇನಲ್ಲ. ಈ ಪ್ಲಾನ್ ಅನ್ನು ಇಂದೇ ಗೋಡೆಗೆ ಅಂಟಿಸಿಕೊಳ್ಳಿ, ಒಂದೇ ಮನಸ್ಸಿನಲ್ಲಿ ಓದಲು ಶುರು ಮಾಡಿ. ಆಲ್ ದಿ ಬೆಸ್ಟ್.
-
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ












Click it and Unblock the Notifications