ಮಹಾ ಸಾಲಗಾರ ವಿಕ್ರಂ ಕೊಠಾರಿ ಮತ್ತು ಮಗನ ಬಂಧನ
ಕಾನ್ಪುರ, ಫೆಬ್ರವರಿ 19: ವಿವಿಧ ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳಿಂದ ಭಾರಿ ಮೊತ್ತದ ಸಾಲ ಪಡೆದಿದ್ದ ರೊಟೊಮ್ಯಾಕ್ ಮಾಲೀಕ ವಿಕ್ರಂ ಕೊಠಾರಿ ಮತ್ತು ಆತನ ಮಗ ರಾಹುಲ್ ಕೊಠಾರಿಯನ್ನು ಸಿಬಿಐ ಬಂಧಿಸಿದೆ.
ಫೆಬ್ರವರಿ 19ರಂದು ಕೊಠಾರಿ ಅವರು ಕಚೇರಿ ಮತ್ತು ಮನೆಯ ತಪಾಸಣೆ ನಡೆಸಿದ್ದ ಸಿಬಿಐ ವಿಕ್ರಂ ಕೊಠಾರಿ ಮೇಲೆ ಕೇಸು ದಾಖಲಿಸತ್ತು. ಅಂದೇ ಅವರ ವಿಚಾರಣೆಯನ್ನೂ ಸಿಬಿಐ ನಡೆಸಿತ್ತು.
ವಿವಿಧ ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳಿಂದ ನಿಯಮ ಮೀರಿ 3695 ಕೋಟಿ ಸಾಲ ಪಡೆದಿರುವ ರೋಟೊಮ್ಯಾಕ್ ಸಂಸ್ಥೆ ಮುಖ್ಯಸ್ಥ ವಿಕ್ರಮ್ ಕೊಠಾರಿ ಅವರನ್ನು ಮುವಂಚನೆ ಕೇಸಿನಲ್ಲಿ ಸಿಬಿಐ ಬಂಧಿಸಿದೆ.

ಪಂಜಾಬ್ ನ್ಯಾಷನಲ್ ಬ್ಯಾಂಕಿಗೆ 11000 ಕೋಟಿ ವಂಚಿಸಿದ ನೀರವ್ ಮೋದಿ ದೇಶ ಬಿಟ್ಟು ಪರಾರಿಯಾದ ಬೆನ್ನಲ್ಲೆ ಎಚ್ಚೆತ್ತುಕೊಂಡಿದ್ದ ಸಿಬಿಐ ಮತ್ತು ಇಡಿ ವಿಕ್ರಂ ಕೊಠಾರಿ ಅವರ ಮೇಲೆ ಎಫ್‌ಐಆರ್ ದಾಖಲಿಸಿ ವಿಕ್ರಂ ದೇಶ ಬಿಡದಂತೆ ಎಚ್ಚರ ವಹಿಸಿತ್ತು.












Click it and Unblock the Notifications