Cauvery: ಕರ್ನಾಟಕಕ್ಕೆ ಮತ್ತೆ ಹಿನ್ನಡೆ, 15 ದಿನ 6000 ಕ್ಯೂಸೆಕ್ ನೀರು ಹರಿಸಲು CWMA ಆದೇಶ, ರಾಜ್ಯದ ಮುಂದಿನ ನಡೆ?

Cauvery Water Dispute: ಕಾವೇರಿ ನದಿ ನೀರು ಬಿಡುಗಡೆ ವಿಚಾರದಲ್ಲಿ ಕರ್ನಾಟಕಕ್ಕೆ ಮತ್ತೆ ಆಘಾತವಾಗಿದೆ. ನೀರಿನ ಸಂಗ್ರಹ ಕೊರತೆ, ಬರಗಾಲ ಕುರಿತು ಸಮರ್ಥವಾಗಿ ವಾದಿಸಿದರೂ ಸಹಿತ ರಾಜ್ಯಕ್ಕೆ ಹಿನ್ನಡೆ ಆಗಿದೆ. ಮುಂದಿನ 15 ದಿನ ನಿತ್ಯ 6000 ಕ್ಯೂಸೆಕ್‌ ನೀರನ್ನು ತಮಿಳುನಾಡಿಗೆ ಹರಿಸುವಂತೆ ಕರ್ನಾಟಕಕ್ಕೆ ಸೂಚಿಸಿ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (CWMA) ಆದೇಶ ನೀಡಿದೆ. ಈ ಮೂಲಕ ಕಾವೇರಿ ನೀರು ನಿರ್ವಹಣಾ ಸಮಿತಿ (CWMC) ನಿರ್ಧಾರ ಎತ್ತಿ ಹಿಡಿದಿದೆ. ಸದ್ಯ ಕರ್ನಾಟಕ ಸುಪ್ರೀಂ ಕೋರ್ಟ್ ಮೆಟ್ಟಿಲೇರಲು ಚಿಂತನೆ ನಡೆಸಿದೆ.

ಕರ್ನಾಟಕದಲ್ಲಿ ಜಲಾಶಯಗಳಲ್ಲಿ ನಿರೀಕ್ಷಿತ ನೀರಿನ ಸಂಗ್ರಹವಾಗಿಲ್ಲ. ಬರಗಾಲದ ನಡುವೆ ಕಾವೇರಿ ನೀರು ವಿಚಾರದಲ್ಲಿ ನಿರಂತರ ಸಭೆಗಳು ನಡೆದಿವೆ. ಇಂದು ಸಹ ಕಾವೇರಿ ನೀರು ತಮಿಳುನಾಡಿಗೆ ಬಿಡುಗಡೆ ಮಾಡಬೇಕೆಂದು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (CWMA) ಹಾಗೂ ಕಾವೇರಿ ನೀರು ನಿರ್ವಹಣಾ ಸಮಿತಿ (CWMC) ಸಭೆ ನಡೆಯಿತು. ಇದರಲ್ಲಿ ತಮಿಳುನಾಡು ಹಾಗೂ ಕರ್ನಾಟಕದ ನೀರಾವರಿ ನಿಗಮದ ಅಧಿಕಾರಿಗಳು ಪಾಲ್ಗೊಂಡು ಚರ್ಚಿಸಿದರು.

Cauvery Water Row

ಕೆ.ಆರ್. ಎಸ್. ಭಾಗದ ಬಿಳಿಗೊಂಡ್ಲುವಿನಿಂದ ಕರ್ನಾಟಕವು 6000 ಕ್ಯೂಸೆಕ್ ನೀರು ಬಿಡುಗಡೆ ಖಚಿತಪಡಿಸಿಕೊಳ್ಳಬೇಕು ಎಂದು ಆದೇಶದಲ್ಲಿ ಪ್ರಾಧಿಕಾರ ಸೂಚಿಸಿದೆ. ಕರ್ನಾಟಕದಲ್ಲಿ ನೀರಿನ ಲಭ್ಯತೆ, ಬರಗಾಲ ಮತ್ತು ವಾಸ್ತವ ಪರಿಸ್ಥಿತಿಯನ್ನು ಸಭೆಯಲ್ಲಿ ಸಮರ್ಥವಾಗಿ ವಾದಿಸಿದರೂ ಸಹಿತ ನೀರು ಬಿಡುಗಡೆಗೆ ಶಿಫಾರಸು ಮಾಡಲಾಗಿದೆ.

ನೀರು ಪ್ರಮಾಣ ಇಳಿಕೆಗೆ ಕರ್ನಾಟಕ ಮನವಿ

ಕಾವೇರಿ ನೀರು ನಿರ್ವಹಣಾ ಸಮಿತಿಯ ನಿರ್ಧಾರವನ್ನು ಪುರಸ್ಕರಿಸಿದ್ದ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರವು ಈ ಹಿಂದೆ ಆಗಸ್ಟ್ 24ರಂದು ತಮಿಳುನಾಡಿಗೆ ನಿತ್ಯ 9000 ಕ್ಯೂಸೆಕ್ ನೀರು ಹರಿಸುವಂತೆ ಆದೇಶಿಸಿತ್ತು. ಇದನ್ನು ಆಕ್ಷೇಪಿಸಿದ್ದ ಕರ್ನಾಟಕವು ಸೆಪ್ಟಂಬರ್ 4ರಂದು ನೀರು ಬಿಡುಗಡೆ ಪ್ರಮಾಣವನ್ನು 2000 ಕ್ಯೂಸೆಕ್‌ಗೆ ಇಳಿಕೆ ಮಾಡುವಂತೆ ಮನವಿ ಮಾಡಿತ್ತು. ಆದರೆ ಇದನ್ನು ತಿರಸ್ಕರಿಸಿ ಮತ್ತೆ ಆದೇಶ ಮಾಡಲಾಗಿದೆ.

ಸುಪ್ರೀಂ ಕೋರ್ಟ್ ಮೆಟ್ಟಿಲೇರುತ್ತಾ ಕರ್ನಾಟಕ! ನಡೆ ಏನು...?

ಕಾವೇರಿ ನೀರು ಬಿಡುಗಡೆ ಸಂಬಂಧ ಇಂದು ನಡೆದ ಸಭೆಯಲ್ಲಿ ತಮಿಳುನಾಡು ಪರ ನಿರ್ಧಾರ ಕೈಗೊಳ್ಳಲಾಗಿದೆ. ಈ ಸಂಬಂಧ ಕರ್ನಾಟಕ ಸಿಎಂ ಡಿಕೆ ಶಿವಕುಮಾರ್, ನೀರಾವರಿ ಹಾಗೂ ಕೃಷಿ ಸಚಿವರು, ಅಧಿಕಾರಿಗಳೊಂದಿಗೆ ಚರ್ಚಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಬೇಕಾ? ಬೇಡವಾ? ಎಂದು ನಿರ್ಧರಿಸಲಾಗುತ್ತದೆ.

ಕಾವೇರಿ ನೀರಾವರಿ ನಿಗಮ ಎಂಡಿ ಮಹೇಶ್ ಅವರು ಮಾತನಾಡಿ, ಕರ್ನಾಟಕದಲ್ಲಿ ನೀರಿನ ಲಭ್ಯತೆ, ರೈತರಿಗೆ ಎಷ್ಟು ನೀರು ಬೇಕು ಎಂಬದೆಲ್ಲವನ್ನು ಮತ್ತೆ ನಾವು ಅಧಿಕಾರಿಗಳೊಂದಿಗೆ ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳಲಿದ್ದೇವೆ ಎಂದು ತಿಳಿಸಿದ್ದಾರೆ.

ನೀರು ಬಿಡುಗಡೆಗೆ ಆದೇಶ ಬೆನ್ನಲ್ಲೆ ಹೆದ್ದಾರಿಯಲ್ಲಿ ಪ್ರತಿಭಟನೆ

ಕಾವೇರಿ ನೀರು ಬಿಡುಗಡೆ ವಿಚಾರದಲ್ಲಿ ಪ್ರತಿ ಬಾರಿಯು ಕರ್ನಾಟಕಕ್ಕೆ ಸೂಚನೆ ನೀಡಲಾಗುತ್ತಿದೆ. ಮೊದಲೇ ನೀರಿಲ್ಲ ಪರದಾಡುತ್ತಿದ್ದೇವೆ. ನಮಗೆ ಕೃಷಿಗೆ, ಕುಡಿಯಲು ನೀರಿಲ್ಲ. ಅಂಥದರಲ್ಲಿ ತಮಿಳುನಾಡಿಗೆ ಕರ್ನಾಟಕವು ನೀರು ಬಿಡಬಾರದು ಎಂದು ಆಗ್ರಹಿಸಿ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ರೈತರ ಪ್ರತಿಭಟನೆ ಆರಂಭಿಸಿದರು. ಹೆದ್ದಾರಿ ತಡೆದು, ರಸ್ತೆಯಲ್ಲಿ ಕೂತ ರೈತ ಪರ ಸಂಘಟನೆಗಳು, ಮುಖಂಡರು ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿದರು. ನೀರು ಬಿಡುಗಡೆ ಆದೇಶವನ್ನು ಖಂಡಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+