Telangana Election: ಮತದಾನ ಮುಗಿಯುವ ಮುನ್ನವೇ ಬೈ ಬೈ ಕೆಸಿಆರ್ ಟ್ರೆಂಡಿಂಗ್
ತೆಲಂಗಾಣ ವಿಧಾನಸಭೆ ಮತದಾನದ ದಿನವೇ ಬೈ ಬೈ ಕೆಸಿಆರ್ ಟ್ರೆಂಡಿಂಗ್ ಆಗಿದೆ. 119 ವಿಧಾನಸಭಾ ಸ್ಥಾನಗಳಿಗೆ ಇಂದು ಮತದಾನ ನಡೆಯುತ್ತಿದ್ದು, ಮುಖ್ಯಮಂತ್ರಿ ಕೆ.ಸಿ. ಚಂದ್ರಶೇಖರ್ ಅವರನ್ನು ಅಣಕಿಸುವ ಬೈ ಬೈ ಕೆಸಿಆರ್ ಎನ್ನುವ ಟ್ವೀಟ್‌ಗಳು ವೈರಲ್ ಆಗುತ್ತಿವೆ.
ಮತದಾನಕ್ಕೆ ಮೂರು ದಿನ ಮುನ್ನ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಚುನಾವಣಾ ರ್‍ಯಾಲಿಯಲ್ಲಿ ಬೈ ಬೈ ಕೆಸಿಆರ್ ಎಂದು ಘೋಷಣೆ ಕೂಗಿದ್ದರು. ತೆಲಂಗಾಣದಲ್ಲಿ ಆಡಳಿತಾರೂಢ ಬಿಆರ್‌ಎಸ್ ಪಕ್ಷ ಸೋಲಲಿದ್ದು, ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎನ್ನುವ ವಿಶ್ವಾಸದಲ್ಲಿ ರಾಹುಲ್ ಗಾಂಧಿ ಈ ಘೋಷಣೆ ಕೂಗಿದ್ದರು.

ಮತದಾನದ ದಿನ ಕೂಡ ಕಾಂಗ್ರೆಸ್ ಎಕ್ಸ್‌ನಲ್ಲಿ ವಿಡಿಯೋವನ್ನು ಹಂಚಿಕೊಂಡಿದ್ದು, ಬೈ ಬೈ ಕೆಸಿಆರ್ ಎಂದು ಶೀರ್ಷಿಕೆ ನೀಡಿದೆ. ಸದ್ಯ ಈ ಟ್ವೀಟ್ ವೈರಲ್ ಆಗುತ್ತಿದ್ದು, ಈ ಬಾರಿ ತೆಲಂಗಾಣದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದು ಕಾಂಗ್ರೆಸ್ ಕಾರ್ಯಕರ್ತರು ಟ್ವೀಟ್ ಮಾಡಿದ್ದಾರೆ.
ಹಲವು ಕಾಂಗ್ರೆಸ್ ಕಾರ್ಯಕರ್ತರು, ಅಭಿಮಾನಿಗಳು ವೋಟ್ ಮಾಡಿದ ಚಿತ್ರವನ್ನು ಹಂಚಿಕೊಂಡಿದ್ದು, ಈ ಬಾರಿ ತೆಲಂಗಾಣದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಹಳೆಯ ಕಾರಿನ ವಿಡಿಯೋ ಹಂಚಿಕೊಂಡಿರುವ ಟ್ವಿಟರ್ ಬಳಕೆದಾರರೊಬ್ಬರು, "ಹಳೆಯ ಕಾರನ್ನು ಶೆಡ್‌ಗೆ ಹಾಕುವ ಸಮಯ ಬಂದಿದೆ" ಎಂದು ಟ್ವೀಟ್ ಮಾಡುವ ಮೂಲಕ, ಈ ಬಾರಿ ಬಿಆರ್‍ಎಸ್ ಪಕ್ಷ ಸೋಲಲಿದೆ ಎಂದು ಸೂಚ್ಯವಾಗಿ ಹೇಳಿದ್ದಾರೆ.
BYE BYE KCR 👆 pic.twitter.com/UL3XcZP4Qb
— Congress (@INCIndia) November 29, 2023
ಕಾಂಗ್ರೆಸ್ ಪರವಾಗಿ ಸಮೀಕ್ಷೆಗಳು
ಚುನಾವಣೆಗೂ ಮುನ್ನ ನಡೆಸಿರುವ ಹಲವು ಸಮೀಕ್ಷೆಗಳು ರಾಜ್ಯದಲ್ಲಿ ಕಾಂಗ್ರೆಸ್ ಪರವಾದ ಅಲೆ ಇದೆ ಎನ್ನುವುದನ್ನು ಹೇಳಿದ್ದವು. ಅಲ್ಲದೆ ಕಾಂಗ್ರೆಸ್ 60-65 ಸ್ಥಾನಗಳಲ್ಲಿ ಗೆಲ್ಲಲಿದ್ದು, ಅಧಿಕಾರಕ್ಕೆ ಬರಲಿದೆ ಎಂದು ಹಲವು ಸಮೀಕ್ಷಾ ವರದಿಗಳು ಹೇಳಿವೆ.
ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದ್ದು, ಗ್ಯಾರಂಟಿಗಳ ಈಡೇರಿಕೆ ತೆಲಂಗಾಣ ಚುನಾವಣೆ ಮೇಲೆ ದಟ್ಟ ಪ್ರಭಾವ ಬೀರಿದೆ. ಕರ್ನಾಟಕ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಮತ್ತು ಸಚಿವರು ತೆಲಂಗಾಣದಲ್ಲಿ ಭಾರಿ ಪ್ರಚಾರ ಮಾಡಿದ್ದಾರೆ.
ರಾಹುಲ್ ಗಾಂಧಿ, ಪ್ರಿಯಾಂಕ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಹಲವು ನಾಯಕರು ಕೂಡ ತೆಲಂಗಾಣದಲ್ಲಿ ಅಬ್ಬರದ ಚುನಾವಣೆ ಮಾಡಿದ್ದರು. ಕೆಸಿಆರ್ ವಿರುದ್ಧ ಆಡಳಿತ ವಿರೋಧ ಅಲೆ ಇದೆ ಎಂದು ವರದಿಗಳು ಹೇಳಿದ್ದು, ಇದು ಕಾಂಗ್ರೆಸ್‌ಗೆ ವರವಾಗಲಿದೆ ಎನ್ನಲಾಗಿದೆ.
ಬಿಜೆಪಿ ಕೂಡ ತೆಲಂಗಾಣದಲ್ಲಿ ನೆಲೆ ಕಂಡುಕೊಳ್ಳಲು ಪ್ರಯತ್ನಿಸುತ್ತಿದೆಯಾದರೂ, ಜನ ಬಿಜೆಪಿ ಕಡೆ ಹೆಚ್ಚು ಒಲವು ಹೊಂದಿಲ್ಲ ಎಂದು ಸಮೀಕ್ಷೆಗಳು ಹೇಳಿವೆ. ಬಿಜೆಪಿ ತೆಲಂಗಾಣದಲ್ಲಿ ಚಿತ್ರನಟ ಪವನ್ ಕಲ್ಯಾಣ್ ಅವರ ಜನಸೇನಾ ಜೊತೆ ಹೊಂದಾಣಿಕೆ ಮಾಡಿಕೊಂಡಿದೆ.












Click it and Unblock the Notifications