ಪಂಜಾಬಿನ ಉದ್ಯಮಿ ಬರ್ಬರ ಕೊಲೆ: ಸಿಸಿಟಿವಿಯಲ್ಲಿ ದಾಖಲಾಯ್ತು ದೃಶ್ಯ
ಫರಿದ್ಕೋಟ್, ಜುಲೈ 31: ಉದ್ಯಮಿಯೊಬ್ಬರನ್ನು ಅಪರಿಚಿತ ವ್ಯಕ್ತಿಗಳು ಗುಂಡುಹಾರಿಸಿ ಕೊಲೆಗೈದ ಘಟನೆ ಇಂದು ಬೆಳಿಗ್ಗೆ (ಜುಲೈ 31) ಪಂಜಾಬಿನ ಫರಿದ್ಕೋಟ್ ಎಂಬಲ್ಲಿ ನಡೆದಿದೆ.
ಮೃತ ಉದ್ಯಮಿಯನ್ನು ಪಪ್ಪು ಎಂದು ಗುರುತಿಸಲಾಗಿದ್ದು, ಕಳೆದ ಜನವರಿ(2017)ಯಲ್ಲಿ ಇವರನ್ನು ಅಪಹರಿಸಿ, ಇವರ ಬಳಿಯಿದ್ದ ಹಣವನ್ನು ದೋಚಿ, ಕಾರನ್ನೂ ಅಪಹರಿಸಲು ಯತ್ನಿಸಿದ್ದ ದುಷ್ಕರ್ಮಿಗಳೇ ಈ ಕೆಲಸ ಮಾಡಿರಬಹುದೆಂದು ಶಂಕಿಸಲಾಗಿದೆ.

ಮಾರುತಿ ಸ್ವಿಫ್ಟ್ ಡಿಸೈರ್ ಬಿಳಿ ಬಣ್ಣದ ಕಾರಿನಲ್ಲಿ ಬಂದ ಇಬ್ಬರು ಆಗಂತುಕರು ಉದ್ಯಮಿಯನ್ನು ಗುಂಡಿಕ್ಕಿ ಕೊಲೆ ಮಾಡಿರುವುದು ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿದ್ದು, ಈ ದೃಶ್ಯಾವಳಿಯ ಆಧಾರದ ಮೇಲೆಲಯೇ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.












Click it and Unblock the Notifications