ಮುಂಬೈ: ಕುಸಿದು ಬಿದ್ದ ಮೂರಂತಸ್ತಿನ ಕಟ್ಟಡ, 5 ಸಾವು

Subscribe to Oneindia Kannada

ಮುಂಬೈ, ಏಪ್ರಿಲ್, 30: ಶನಿವಾರ ಮುಂಬೈ ಅವಘಡವೊಂದಕ್ಕೆ ಸಾಕ್ಷಿಯಾಗಿದೆ. ಮೂರು ಅಂತಸ್ತಿನ ಕಟ್ಟಡವೊಂದು ಕುಸಿದುಬಿದ್ದು 5 ಜನ ಮೃತಪಟ್ಟಿದ್ದು ಅವಶೇಷಗಳಡಿ ಸಿಲುಕಿರುವ ಲೆಕ್ಕ ಸದ್ಯಕ್ಕೆ ಸಿಕ್ಕಿಲ್ಲ.

ಮುಂಬೈನ ಕಾಮಾಟಿಪುರದ ಗ್ರ್ಯಾಂಟ್ ರಸ್ತೆಯಲ್ಲಿ ಶನಿವಾರ ಮಧ್ಯಾಹ್ನ 2 ಗಂಟೆಯ ಸುಮಾರಿಗೆ ಕಟ್ಟಡ ಕುಸಿದು ಬಿದ್ದಿದೆ. ಗಂಭೀರ ಗಾಯಗೊಂಡ ಆರು ಜನರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು ರಕ್ಷಣಾ ಕಾರ್ಯ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.[ಹುಬ್ಬಳ್ಳಿಯಲ್ಲಿ ಕಟ್ಟಡ ಕುಸಿತದ ಚಿತ್ರಗಳು]

mumbai

ಗಾಯಗೊಂಡವರನ್ನು ಸಮೀಪದ ಜೆಜೆ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಗ್ನಿಶಾಮಕದಳದ ಸಿಬ್ಬಂದಿ ರಕ್ಷಣಾ ಕಾರ್ಯವನ್ನು ಮುಂದುವರಿಸಿದ್ದಾರೆ. ಕಟ್ಟಡದ ಅವಶೇಷಗಳಡಿ ಇನ್ನು ಹಲವರು ಸಿಕ್ಕಿದ್ದು ರಕ್ಷಣಾ ಕಾರ್ಯ ಮುಂದುವರಿದಿದೆ.[ಬೆಂಗಳೂರು : ಮೂವರ ಜೀವ ತಗೆದ 6 ಅಂತಸ್ತಿನ ಕಟ್ಟಡ]

ದಕ್ಷಿಣ ಮುಂಬೈನಲ್ಲಿ ಅವಘಡ ಸಂಭವಿಸಿದ್ದು ಮಹಾನಗರ ಪಾಲಿಕೆ ಕಟ್ಟಡ ದುರಸ್ತಿ ಮಾಡಲು ಹಿಂದೇಟು ಹಾಕಿದ್ದೇ ಅವಘಡಕ್ಕೆ ಕಾರಣ ಎಂದು ಸಂತ್ರಸ್ತ ಕುಟುಂಬಗಳು ಆರೋಪ ಮಾಡಿವೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
A three-storey building collapsed in Mumbai this afternoon, killing two persons and trapping many others, civic officials said. Five persons were rescued from the debris of the building in Kamathipura area of Grant Road, which caved in at around 2pm, a fire brigade official said.
Please Wait while comments are loading...