Gold-Silver Price: ಬಜೆಟ್‌ನಲ್ಲಿ ಚಿನ್ನ-ಬೆಳ್ಳಿ ಬಗ್ಗೆ ಪ್ರಸ್ತಾಪವೇ ಇಲ್ಲ! ದಾಖಲೆ ಮಟ್ಟದಲ್ಲಿ ದರ ಕುಸಿತ
ನವದೆಹಲಿ: ಕೇಂದ್ರದ ಬಹುನಿರೀಕ್ಷೆಯ 2026-27 ನೇ ಹಣಕಾಸು ವರ್ಷದ ಬಜೆಟ್ ಇಂದು ಮಂಡನೆ ಆಗಿದೆ. ಇದರಲ್ಲಿ ವಿಶೇಷತೆ ಎಂದರೆ ನಿರಂತರವಾಗಿ ಏರಿಕೆ ಆಗಿದ್ದ ಚಿನ್ನ ಮತ್ತು ಬೆಳ್ಳಿ (Gold Silver Price Today) ಕುರಿತು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಏನನ್ನೂ ಪ್ರಸ್ತಾಪ ಮಾಡಿಲ್ಲ. ಇದು ಹೂಡಿಕೆದಾರರು ಸೇರಿದಂತೆ ಲೋಹಗಳ ಜಿಎಸ್‌ಟಿ ಕಡಿತ, ಬೆಲೆ ಹೆಚ್ಚಳಕ್ಕೆ ಕೇಂದ್ರ ಸರ್ಕಾರ ಬ್ರೇಕ್ ಹಾಕಲಿದೆ ಎಂದೆಲ್ಲ ನಿರೀಕ್ಷೆ ಇಟ್ಟುಕೊಂಡಿದ್ದವರಿಗೆ ನಿರಾಸೆ ಆಗಿದೆ. ಮತ್ತೊಂದೆಡೆ ಚಿನ್ನ ಹಾಗೂ ಬೆಳ್ಳಿ ದರವು ಬಜೆಟ್ ದಿನವೇ ಮಹಾ ಕುಸಿತ ಕಂಡಿವೆ.
ನಿರ್ಮಲಾ ಸೀತಾರಾಮನ್ ಅವರು ಇಂದು ಭಾನುವಾರ (ಫೆಬ್ರವರಿ 01) ಕೇಂದ್ರ ಆಯವ್ಯಯ ಮಂಡಿಸಿದರು. ತಮ್ಮ ಒಂಬತ್ತನೇ ಬಾರಿಯ ಬಜೆಟ್ ನಲ್ಲಿ ಅವರು ಚಿನ್ನ-ಬೆಳ್ಳಿ ಕುರಿತು ಪ್ರಸ್ತಾಪ ಮಾಡದಿರುವುದು ಹಲವರಿಗೆ ಅಚ್ಚರಿ ಉಂಟು ಮಾಡಿದೆ.

ಚಿನ್ನ ಪ್ರಿಯರಿಗೆ ನಿರಾಸೆ ಆಗಿದೆ. ಬಂಗಾರದ ಮೇಲಿನ ಜಿಎಸ್‌ಟಿ, ಚಿನ್ನಾಭರಣಗಳ ಮೇಕಿಂಗ್ ಚಾರ್ಜ್ ಇಳಿಕೆ ವಿಷಯದಲ್ಲಿ ಕೇಂದ್ರ ಸರ್ಕಾರ ಮಧ್ಯ ಪ್ರವೇಶ ಮಾಡಲಿದೆ ಎಂದು ನಿರಿಕ್ಷಿಸಲಾಗಿತ್ತು. ಆದರೆ ಈ ಬಾರಿ ಬಜೆಟ್‌ನಲ್ಲಿ ಚಿನ್ನ ಬೆಳ್ಳಿ ವಿಷಯವನ್ನೇ ಪ್ರಸ್ತಾಪ ಮಾಡಿಲ್ಲ ಏಕೆ ಎಂಬುದರ ಬಗ್ಗೆ ಹೂಡಿಕೆದಾರರು, ಗ್ರಾಹಕರು ತಲೆ ಕೆಡಿಸಿಕೊಂಡಿದ್ದಾರೆ. ಇದರ ಬೆನ್ನಲ್ಲೆ ಚಿನ್ನ-ಬೆಳ್ಳಿ ದರ ಇಳಿಕೆ ಎಷ್ಟಾಗಿದೆ ಎಂಬ ಮಾಹಿತಿ ಮುಂದಿದೆ.
ನಗರವಾರು ಇಂದಿನ 24K ಚಿನ್ನ ಮತ್ತು ಬೆಳ್ಳಿ ಬೆಲೆಗಳ ವಿವರ
ಬೆಂಗಳೂರು
ಪ್ರತಿ 10 ಗ್ರಾಂ ಚಿನ್ನದ ದರ: 1,60,700 ರೂಪಾಯಿ
ಪ್ರತಿ ಕೆಜಿಗೆ ಬೆಳ್ಳಿ: 3,50,000 ರೂಪಾಯಿ
ಮುಂಬೈ
ಪ್ರತಿ 10 ಗ್ರಾಂಗೆ ಚಿನ್ನ ದರ: 1,60,580 ರೂಪಾಯಿ
ಪ್ರತಿ ಕೆಜಿಗೆ ಬೆಳ್ಳಿ ಬೆಲೆ: 3,50,000 ರೂಪಾಯಿ
ದೆಹಲಿ
ಪ್ರತಿ 10 ಗ್ರಾಂ ಚಿನ್ನದ ಬೆಲೆ: 1,60,730 ರೂಪಾಯಿ
ಪ್ರತಿ ಕೆಜಿಗೆ ಬೆಳ್ಳಿ: ₹3,50,000 ರೂಪಾಯಿ
ಕೋಲ್ಕತ್ತಾ
ಪ್ರತಿ 10 ಗ್ರಾಂಗೆ ಚಿನ್ನದ ದರ: 1,60,700 ರೂಪಾಯಿ
ಪ್ರತಿ ಕೆಜಿಗೆ ಬೆಳ್ಳಿ ಬೆಲೆ : 3,50,000 ರೂಪಾಯಿ
ಚೆನ್ನೈ
ಪ್ರತಿ 10 ಗ್ರಾಂ ಚಿನ್ನ: 1,56,4500 ರೂಪಾಯಿ
ಬೆಳ್ಳಿ ಪ್ರತಿ ಕೆಜಿ: 3,20,000 ರೂಪಾಯಿ
ಪುಣೆ
10 ಗ್ರಾಂ ಚಿನ್ನದ ಬೆಲೆ: 1,56,450 ರೂಪಾಯಿ
ಬೆಳ್ಳಿ ಪ್ರತಿ ಕೆಜಿ ದರ: 3,50,000 ರೂಪಾಯಿ
ಅಹಮದಾಬಾದ್
10 ಗ್ರಾಂ ಚಿನ್ನ: 1,60,630 ರೂಪಾಯಿ
ಬೆಳ್ಳಿ ಪ್ರತಿ ಕೆಜಿ: 3,50,000 ರೂಪಾಯಿ
ಹೈದರಾಬಾದ್
10 ಗ್ರಾಂಗೆ 24K ಚಿನ್ನ: 1,60,580 ರೂಪಾಯಿ
ಬೆಳ್ಳಿ ಪ್ರತಿ ಕೆಜಿ: 3,20,000 ರೂಪಾಯಿ
10 ಗ್ರಾಂ 22 ಕ್ಯಾರಟ್ ಚಿನ್ನದ ದರ ವಿವರ
ಚೆನ್ನೈ: 1,49,000 ರೂಪಾಯಿ
ಕೋಲ್ಕತ್ತಾ: 1,47,200 ರೂಪಾಯಿ
ಬೆಂಗಳೂರು: 1,47,200 ರೂಪಾಯಿ
ಪುಣೆ : 1,47,200 ರೂಪಾಯಿ
ಜೈಪುರ: 1,47,350 ರೂಪಾಯಿ
ಹೈದರಾಬಾದ್: 1,47,200 ರೂಪಾಯಿ
ದೆಹಲಿ: 1,47,350 ರೂಪಾಯಿ
ಮುಂಬೈ: 1,47,200 ರೂಪಾಯಿ
ಅಹಮದಾಬಾದ್: 1,47,250 ರೂಪಾಯಿ
ಕೇಂದ್ರ ಬಜೆಟ್ ಲೈವ್ ಜೊತೆಗೆ ವಿಶ್ಲೇಷಣೆಯೂ ಇಲ್ಲಿದೆ
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಭಾನುವಾರ (ಫೆ 1) ಸಂಸತ್ತಿನಲ್ಲಿ ಮಂಡಿಸಿದ ಬಜೆಟ್ ಭಾಷಣದ ಲೈವ್ ವಿಡಿಯೊ ಮತ್ತು ತಜ್ಞರ ವಿಶ್ಲೇಷಣೆಗಾಗಿ 'ಒನ್ ಇಂಡಿಯಾ ಕನ್ನಡ' ಯುಟ್ಯೂಬ್ ಚಾನೆಲ್‌ಗೆ ಭೇಟಿ ನೀಡಿ.












Click it and Unblock the Notifications