Budget 2025: ಕೇಂದ್ರ ಬಜೆಟ್‌, ರೈಲ್ವೆ ಇಲಾಖೆಗೆ ಮೂರು ಪ್ರಮುಖ ಕೊಡುಗೆಗಳು

ನವದೆಹಲಿ, ಜನವರಿ 30: ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ನಿರ್ಮಲಾ ಸೀತಾರಾಮನ್ 2025-26ನೇ ಸಾಲಿನ ಬಜೆಟ್ ಅನ್ನು ಫೆಬ್ರವರಿ 1ರ ಶನಿವಾರ ಮಂಡಿಸಲಿದ್ದಾರೆ. ಸಾಮಾನ್ಯ ಬಜೆಟ್ ಜೊತೆಯೇ ರೈಲ್ವೆ ಬಜೆಟ್ ವಿಲೀನವಾಗಿದೆ. ಆದ್ದರಿಂದ ಬಜೆಟ್‌ನಲ್ಲಿ ರೈಲ್ವೆ ಇಲಾಖೆಗೆ ಯಾವ-ಯಾವ ಕೊಡುಗೆ ಸಿಗಲಿದೆ ಎಂಬ ಚರ್ಚೆಗಳು ನಡೆಯುತ್ತಿವೆ. ಬಜೆಟ್‌ನಲ್ಲಿ ರೈಲ್ವೆ ವಲಯದ ಆಧುನೀಕರಣಕ್ಕೆ ಒತ್ತು ನೀಡಲಾಗುತ್ತದೆ ಎಂಬ ಮಾಹಿತಿ ಇದೆ.

ವಿಶ್ಲೇಷಕರ ಪ್ರಕಾರ ರೈಲ್ವೆ ಇಲಾಖೆಗೆ ಹೆಚ್ಚಿನ ಅನುದಾನವನ್ನು ನೀಡುವ ಮೂಲಕ ವಿವಿಧ ಯೋಜನೆಗಳಿಗೆ ಹೆಚ್ಚಿನ ಒತ್ತು ನೀಡಲಾಗುತ್ತದೆ. ಸದ್ಯ ಘೋಷಣೆ ಮಾಡಿರುವ ಯೋಜನೆಗಳನ್ನು ಪೂರ್ಣಗೊಳಿಸಲು ಬಜೆಟ್‌ನಲ್ಲಿ ಆದ್ಯತೆಯನ್ನು ನೀಡಲಾಗುತ್ತದೆ. ಪ್ರಯಾಣಿಕರ ಸುರಕ್ಷತೆ, ಮೂಲ ಸೌಲಭ್ಯ ಕಲ್ಪಿಸುವುದು ಬಜೆಟ್ ಆದ್ಯತೆ ಆಗಲಿದೆ.

Budget 2025 Indian Railways May Focus On Three Announcement

ವರ್ಷದಿಂದ ವರ್ಷಕ್ಕೆ ಸಾಮಾನ್ಯ ಬಜೆಟ್‌ನಲ್ಲಿ ರೈಲ್ವೆ ಇಲಾಖೆಗೆ ನೀಡುತ್ತಿರುವ ಅನುದಾನವನ್ನು ಹೆಚ್ಚಿಸಲಾಗುತ್ತಿದೆ. 2024ರ ಜುಲೈನಲ್ಲಿ ಮಂಡನೆ ಮಾಡಿದ ಬಜೆಟ್‌ನಲ್ಲಿ ಇಲಾಖೆಗೆ 2,62,200 ಕೋಟಿ ರೂ. ಅನುದಾನ ಹಂಚಿಕೆ ಮಾಡಲಾಗಿತ್ತು. 2023-24ರಲ್ಲಿ 2,52,200 ಕೋಟಿ ರೂ. ಅನುದಾನ ಸಿಕ್ಕಿತ್ತು. 2013-14ರಲ್ಲಿ ಇಲಾಖೆಗೆ ಸಿಗುತ್ತಿದ್ದ ಅನುದಾನ 28,174 ಕೋಟಿ ರೂ.ಗಳು.

ಮೂರು ಪ್ರಮುಖ ಘೋಷಣೆಗಳು: ಬಜೆಟ್‌ನಲ್ಲಿ ಹೈ-ಸ್ಪೀಡ್ ರೈಲು ಯೋಜನೆ ಪೂರ್ಣಗೊಳಿಸುವುದು, ಅಮೃತ್ ಭಾರತ್ ಯೋಜನೆಯಡಿ ಇನ್ನಷ್ಟು ರೈಲು ನಿಲ್ದಾಣಗಳ ಅಭಿವೃದ್ಧಿ ಮತ್ತು ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿರುವ ವಂದೇ ಭಾರತ್ ರೈಲುಗಳನ್ನು ಓಡಿಸುವ ಮೂರು ಪ್ರಮುಖ ಘೋಷಣೆಗಳಿಗೆ ಆದ್ಯತೆ ನೀಡುವ ನಿರೀಕ್ಷೆ ಇದೆ.

ಪ್ರಯಾಣಿಕರ ಸುರಕ್ಷತೆಯ ಜೊತೆಗೆ ಇಲಾಖೆಗೆ ಆದಾಯವನ್ನು ಹೆಚ್ಚಿಸುವ ಗುರಿಯನ್ನು ಬಜೆಟ್ ಹೊಂದಿದೆ. ರೈಲ್ವೆ ಆಧುನೀಕರಣಕ್ಕೆ ಬಜೆಟ್‌ನಲ್ಲಿ ಹೆಚ್ಚಿನ ಒತ್ತು ಸಿಗಲಿದೆ ಎಂದು ತಜ್ಞರು ಹೇಳಿದ್ದಾರೆ. ವಂದೇ ಭಾರತ್ ರೈಲುಗಳಿಗೆ ಹೆಚ್ಚು ಬೇಡಿಕೆ ಇರುವ ಹಿನ್ನಲೆಯಲ್ಲಿ ಇನ್ನಷ್ಟು ಹೊಸ ಮಾರ್ಗದಲ್ಲಿ ಈ ಮಾದರಿ ರೈಲುಗಳನ್ನು ಓಡಿಸುವುದು, ಸ್ಲೀಪರ್ ಮಾದರಿ ವಂದೇ ಭಾರತ್ ರೈಲುಗಳ ಸಂಚಾರಕ್ಕೆ ಸಹ ಬಜೆಟ್‌ನಲ್ಲಿ ಆದ್ಯತೆ ನೀಡಲಾಗುತ್ತದೆ ಎಂದು ತಜ್ಞರು ಹೇಳಿದ್ದಾರೆ.

ಪ್ರಯಾಣಿಕರ ರೈಲುಗಳು ಮಾತ್ರವಲ್ಲ ಸರಕು ಸಾಗಣೆಗೆ ಸಹ ಬಜೆಟ್‌ನಲ್ಲಿ ಆದ್ಯತೆ ನೀಡಲಾಗುತ್ತದೆ. ರೈಲುಗಳಲ್ಲಿ ಸರಕು ಸಾಗಣೆಗೆ ಬೇಡಿಕೆ ಹೆಚ್ಚಾಗುತ್ತಿದೆ, ಈ ಬೇಡಿಕೆಯನ್ನು ಆದಾಯದ ಮೂಲವಾಗಿ ಬದಲಾವಣೆ ಮಾಡುವ ನಿಟ್ಟಿನಲ್ಲಿ ಇನ್ನಷ್ಟು ಉದ್ಯಮ ಸ್ನೇಹಿ ಘೋಷಣೆಗಳನ್ನು ಬಜೆಟ್‌ನಲ್ಲಿ ಮಾಡುವ ನಿರೀಕ್ಷೆ ಇದೆ.

2030ರ ವೇಳೆಗೆ ರಸ್ತೆಯಿಂದ ರೈಲು ಸರಕು ಸಾಗಾಟಕ್ಕೆ ಶೇ 40ರಷ್ಟು ಪರಿವರ್ತನೆಯಾಗಬೇಕು ಎಂಬ ಗುರಿಯನ್ನು ಕೇಂದ್ರ ಸರ್ಕಾರ ಹೊಂದಿದೆ. ಇಲಾಖೆಯ ಮೂಲ ಸೌಕರ್ಯಗಳನ್ನು ಹೆಚ್ಚಿಸುತ್ತಾ, ಸರಕು ಸಾಗಣೆಗೆ ಹೆಚ್ಚಿನ ಆದ್ಯತೆ ನೀಡುವುದು ಇಲಾಖೆಯ ಮುಂದಿನ ಗುರಿಯಾಗಿದೆ, ಇದಕ್ಕೆ ಒತ್ತು ನೀಡುವಂತೆ ಕೆಲವು ಯೋಜನೆಗಳನ್ನು ಬಜೆಟ್‌ನಲ್ಲಿ ಘೋಷಿಸಲಾಗುತ್ತದೆ ಎಂದು ಅಂದಾಜಿಸಲಾಗಿದೆ.

ರೈಲು ಯೋಜನೆಗಳನ್ನು ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ಕೈಗೊಳ್ಳುವ ಬಗ್ಗೆಯೂ ಘೋಷಣೆ ನಿರೀಕ್ಷೆ ಮಾಡಲಾಗಿದೆ. ಎನ್‌ಹೆಚ್‌ಎಐ ರಾಷ್ಟ್ರೀಯ ಹೆದ್ದಾರಿಯನ್ನು ನೋಡಿಕೊಳ್ಳುವಂತೆ ರೈಲ್ವೆ ಮೂಲ ಸೌಕರ್ಯ ಅಭಿವೃದ್ಧಿಯನ್ನು ನಿರ್ವಹಣೆ ಮಾಡಲು ಹೊಸ ಘೋಷಣೆ ನಿರೀಕ್ಷಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+