Budget 2024: 'ಗೃಹಜ್ಯೋತಿ'ಗೆ ಟಕ್ಕರ್ ಕೊಡಲು ಕೇಂದ್ರದಿಂದ 300 ಯುನಿಟ್ ಉಚಿತ ವಿದ್ಯುತ್ ಘೋಷಣೆ?

ಬೆಂಗಳೂರು, ಫೆಬ್ರವರಿ 01: ವಿಧಾನಸಭಾ ಚುನಾವಣೆಯಲ್ಲಿ ಉಚಿತ ಗ್ಯಾರೆಂಟಿ ಕೊಟ್ಟು ಅಧಿಕಾರಕ್ಕೆ ಬಂದ ಕಾಂಗ್ರೆಸ್‌ನಂತೆಯೆ ಕೇಂದ್ರ ಬಿಜೆಪಿ ಉಚಿತ ಘೋಷಣೆಗಳ ಮೊರೆ ಹೋಯಿತೆ? ಎಂಬ ಅನುಮಾನ ಕಾಡುತ್ತಿದೆ. ಉಚಿತ ಯೋಜನೆಗಳನ್ನು ಗ್ಯಾರೆಂಟಿ ಎಂಬಂತೆ ಬಿಂಬಿಸದೇ ಕೇವಲ ಯೋಜನೆ, ಜನರ ಅಭಿವೃದ್ಧಿ ಹೆಸರಿನಲ್ಲಿ ಜಾರಿಗೆ ತರಲು ಸರ್ಕಾರ ಚಿಂತನೆ ನಡೆಸಿದೆ. ಇದೆಲ್ಲವು ಲೋಕಸಭಾ ಚುನಾವಣೆಗಾಗಿ ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ.

ಹೌದು, ಇಂದು ಫೆಬ್ರವರಿ 1ರಂದು ಆರನೇ ಭಾರಿಗೆ ಬಜೆಟ್ ಮಂಡಿಸಿರುವ (Budget 2024) ನಿರ್ಮಲಾ ಸೀತಾರಾಮನ್ (Nirmala Sitharaman) ಅವರು, ಇದೀಗ ಒಂದು ಕೋಟಿ ಮನೆಗಳಿಗೆ ಪ್ರತಿ ತಿಂಗಳು 300 ಯೂನಿಟ್ ವಿದ್ಯುತ್ ಉಚಿತವಾಗಿ ನೀಡಲಾಗುವುದು ಎಂದು ತಮ್ಮ ಬಜೆಟ್‌ನಲ್ಲಿ ಘೋಷಿಸಿದ್ದಾರೆ.

Budget 2024: Central Announces 300 units free Electricity against Congress Gruha Jyothi Scheme

ಉಚಿತ ವಿದ್ಯುತ್ ಘೋಷಣೆ ಮೂಲಕ ಕೇಂದ್ರ ಬಿಜೆಪಿಯು ಈಗಾಗಲೇ ಕರ್ನಾಟಕ, ತೆಲಂಗಾಣದಲ್ಲಿ ಉಚಿತ ಘೋಷಣೆ ಮಾಡಿದ್ದ ಕಾಂಗ್ರೆಸ್‌ ಪಕ್ಷಕ್ಕೆ ಎದಿರೇಟು ನೀಡಲು ಸಜ್ಜಾಗಿದೆ. ಈ ಮೂಲಕ ಲೋಕಸಭಾ ಚುನಾವಣೆಯ ಗೆಲುವಿಗೆ ತಂತ್ರ ರೂಪಿಸಿದೆ.

ಕೈ ಹಿಡಿದಿದ್ದ ಉಚಿತ ಯೋಜನೆ: ರಾಜಕೀಯ ಲೆಕ್ಕಾಚಾರ

ಕಾಂಗ್ರೆಸ್ ಸರ್ಕಾರ ಕರ್ನಾಟಕ ಹಾಗೂ ತೆಲಂಗಾಣದಲ್ಲಿ ಪ್ರಚಂಡ ಗೆಲುವು ಸಾಧಿಸಿತ್ತು. ಅದಕ್ಕೆ ಕಾಂಗ್ರೆಸ್ ಘೋಷಿಸಿದ್ದ ಐದು ಗ್ಯಾರಂಟಿ ಯೋಜನೆಗಳು ಮಹತ್ವದ ಪಾತ್ರ ವಹಿಸಿದ್ದವು. ಈ ಪೈಕಿ ಉಚಿತ ವಿದ್ಯುತ್ ವಿತರಣೆ ಸಹ ಒಂದಾಗಿದೆ. ಪ್ರತಿ ಮನೆಗೂ ನಿತ್ಯ ವಿದ್ಯುತ್ ಪೂರೈಕೆ ಅವಶ್ಯಕವಾಗಿದೆ. ಇದನ್ನು ಉಚಿತವಾಗಿ ಕೊಟ್ಟರೆ ಸುಲಭವಾಗಿ ಹೆಚ್ಚಿನ ಸೀಟು ಗೆಲ್ಲಬಹುದು ಎಂಬ ಲೆಕ್ಕಾಚಾರದಲ್ಲಿ ರಾಜಕೀಯ ಪಕ್ಷಗಳಿವೆ.

ಉಚಿತ ಯೋಜನೆ ಬಿಜೆಪಿ ಮುಂದುವರೆಸುತ್ತಿದೆಯೆ?

ಹೀಗಾಗಿಯೇ ಸಾಧ್ಯವಾದಷ್ಟು ಜನರ ಮೂಲಸೌಕರ್ಯಗಳನ್ನು ಉಚಿತ ನೀಡುವ ಟ್ರೆಂಡ್ ಇದೀಗ ರಾಜಕಾರಣದಲ್ಲಿ ಅದರಲ್ಲೂ ಚುನಾವಣೆಗೂ ಮೊದಲು ಆರಂಭವಾಗಿದೆ. ಇದಕ್ಕೆ ಕಾಂಗ್ರೆಸ್ ನಾಂದಿ ಹಾಡಿದರೆ, ಇದೀಗ ಬಿಜೆಪಿಯು ಆ ಸಂಸ್ಕೃತಿಯನ್ನು ಮುಂದುವರಿಸುತ್ತದೆ ಎಂಬ ಕುತೂಹಲ ಮೂಡಿದೆ.

ಕೇವಲ ಉಚಿತ ವಿದ್ಯುತ್ ಮಾತ್ರವಲ್ಲದೇ ಮುಂದಿನ ಐದು ವರ್ಷಗಳಲ್ಲಿ ಎರಡು ಕೋಟಿ ಬಡವರಿಗೆ ಮನೆ ನಿರ್ಮಿಸಿಕೊಡಲಾಗುವುದು ಎಂದು ಬಜೆಟ್ ಮಂಡನೆಯಲ್ಲಿ ವಿತ್ತ ಸಚಿವ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+