ಬಜೆಟ್ ಬಗ್ಗೆ ಐಐಎಂಬಿ ಪ್ರೊಫೆಸರ್ ವೈದ್ಯನಾಥನ್
ಬೆಂಗಳೂರು, ಫೆಬ್ರವರಿ 01: ನರೇಂದ್ರ ಮೋದಿ ಸರ್ಕಾರದ ಪೂರ್ಣ ಪ್ರಮಾಣದ ಬಜೆಟ್ ಮಂಡನೆಗೆ ಅರುಣ್ ಜೇಟ್ಲಿ ಅವರು ಮುಂದಾಗಿದ್ದಾರೆ. ಈ ಬಾರಿ ಜನಪ್ರಿಯ ಹಾಗೂ ಚುನಾವಣಾ ಪೂರ್ವ ಬಜೆಟ್ ಮಂಡಿಸುವ ಸಾಧ್ಯತೆಯಿದೆ.
ನಿರೀಕ್ಷೆಯಂತೆ 2018-19ನೇ ಸಾಲಿನ ಆಯ ವ್ಯಯ ಪತ್ರದಲ್ಲಿ ಜನಪರ, ಉದ್ಯೋಗಿಗಳ ಹಿತ ಕಾಯುವ ಅಂಶಗಳು ಹೆಚ್ಚಾಗಿರುವ ಸಾಧ್ಯತೆಗಳಿವೆ ಎಂದು ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ನ ಪ್ರೊಫೆಸರ್ ಆರ್ ವೈದ್ಯನಾಥನ್ ಅವರು ಅಭಿಪ್ರಾಯಪಟ್ಟಿದ್ದಾರೆ.
ಕರ್ನಾಟಕ ಸೇರಿದಂತೆ 8 ರಾಜ್ಯಗಳ ವಿಧಾನಸಭೆ ಮತ್ತು 2019ರ ಲೋಕಸಭೆ ಚುನಾವಣೆ ದೃಷ್ಟಿಯಿಂದ ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಲೋಕಸಭೆಯಲ್ಲಿ ಮಂಡಿಸಲಿರುವ 2018-19ನೆ ಸಾಲಿನ ಬಜೆಟ್ ಜನಸ್ನೇಹಿ, ಪ್ರಗತಿಪರವಾಗಿರುತ್ತದೆ ಎಂಬ ನಿರೀಕ್ಷೆಯಿದೆ.

ಆರ್ ವೈದ್ಯನಾಥನ್ ಅವರ ನಿರೀಕ್ಷೆಗಳು:
* ಮುದ್ರಾ ಕಾಯ್ದೆ ಬಗ್ಗೆ ಘೋಷಣೆಯನ್ನು ನಿರೀಕ್ಷಿಸುತ್ತೇನೆ.
* ವೈಯಕ್ತಿಕ ಆದಾಯ ತೆರಿಗೆ ಮಿತಿ ಏರಿಕೆ ಮಾಡಿ, ತೆರಿಗೆ ಹೊರೆ ಕಡಿಮೆ ಮಾಡುವ ನಿರೀಕ್ಷೆಯಿದೆ.
* ಸರಕು ಸೇವಾ ತೆರಿಗೆ (ಜಿಎಸ್ ಟಿ) ಮಿತಿಯನ್ನು 20 ಲಕ್ಷ ರು ದಿಂದ 10 ಕೋಟಿ ರುಗೆ ಏರಿಸಬೇಕು.
* ವಿದೇಶದಲ್ಲಿರಿಸಿರುವ ಹಣವನ್ನು ಇಲ್ಲಿಗೆ ತಂದರೆ ಅನೇಕ ರೀತಿಗಳಲ್ಲಿ ಉಪಯೋಗ.
* ಕೇಂದ್ರ ಸರ್ಕಾರದ ಅನೇಕ ಕಾಯ್ದೆಗಳನ್ನು ತೆಗೆದು ಹಾಕುವಂತೆ ಅನೇಕ ಖಾತೆಗಳನ್ನು ರದ್ದು ಮಾಡಿದರೆ ಸಾಕಷ್ಟು ಮೊತ್ತವನ್ನು ಉಳಿಸಬಹುದು.
* ಅಧಿಕಾರ ವಿಕೇಂದ್ರಿಕರಣಕ್ಕೆ ಹೆಚ್ಚಿನ ಒತ್ತು ನೀಡಬೇಕು.












Click it and Unblock the Notifications