ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೇಶದ 2,500 ನಗರದಲ್ಲಿ ವೈ ಫೈ, ಮೈಸೂರಿಗೂ ಸಿಗುತ್ತೆ

By Kiran B Hegde
|
Google Oneindia Kannada News

ನವದೆಹಲಿ, ಫೆ. 7: ಕರ್ನಾಟಕ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಉಚಿತ ವೈ ಫೈ ಸೌಲಭ್ಯ ಕಲ್ಪಿಸಲು ರಾಜ್ಯ ಸರ್ಕಾರ ತಯಾರಿ ನಡೆಸಿದೆ. ಕೇಂದ್ರ ಸರ್ಕಾರ ಇನ್ನೂ ಒಂದು ಹೆಜ್ಜೆ ಮುಂದಿಟ್ಟಿದ್ದು, ದೇಶದ 2,500 ನಗರ ಹಾಗೂ ಪಟ್ಟಣ ಪ್ರದೇಶಗಳಲ್ಲಿ ಬಿಎಸ್ಎನ್ಎಲ್ ಮೂಲಕ ವೈ ಫೈ ಸೌಲಭ್ಯ ಕಲ್ಪಿಸಲು ಮುಂದಾಗಿದೆ. ಕರ್ನಾಟಕದ ಮೈಸೂರಿನಲ್ಲೂ ವೈ ಫೈ ಸಂಪರ್ಕ ನೀಡಲು ಯೋಜನೆ ರೂಪಿಸಿದೆ.

ಈ ಕುರಿತು ಬಿಎಸ್ಎನ್ಎಲ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಕ್ಷೇತ್ರವಾದ ವಾರಣಸಿಯ ದಶಾಶ್ವಮೇಧ ಘಾಟ್‌ನಲ್ಲಿ ಕೇಂದ್ರದ ಮಾಹಿತಿ ತಂತ್ರಜ್ಞಾನ ಸಚಿವ ರವಿಶಂಕರ್ ಪ್ರಸಾದ್ ಫೆ. 8ರಂದು ಮೋದಿ ಸರ್ಕಾರದ ಈ ಮಹತ್ವಾಕಾಂಕ್ಷಿ ಯೋಜನೆಗೆ ಚಾಲನೆ ನೀಡಲಿದ್ದಾರೆ. [3 ತಿಂಗಳಲ್ಲಿ ಬೆಂಗಳೂರು ವೈ ಫೈಮಯ]

bsnl

ಯೋಜನೆಯಡಿ ಕರ್ನಾಟಕ ಮೈಸೂರು ಸೇರಿದಂತೆ ಲಕ್ನೋ, ಚೆನ್ನೈ, ಭೋಪಾಲ್, ಪಾಟ್ನಾ, ಹೈದರಾಬಾದ್, ಇಂದೋರ್, ಜೈಪುರ, ಪುಣೆ, ವಡೋದರಾ, ಗಾಂಧಿ ನಗರ, ಅಹ್ಮದಾಬಾದ್ ಹಾಗೂ ಚಂಡೀಗಢಗಳಲ್ಲೂ ವೈ ಫೈ ಸೌಲಭ್ಯ ಕಲ್ಪಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. [ರಾಜ್ಯದ ಎಲ್ಲ ಜಿಲ್ಲಾ ಕೇಂದ್ರದಲ್ಲೂ ವೈ ಫೈ]

ಆರಂಭದಲ್ಲಿ ಕೆಲವು ನಿಮಿಷ ಉಚಿತ ಬಳಕೆಗೆ ಅವಕಾಶ ನೀಡಲಾಗುತ್ತದೆ. ನಂತರ ನಿಗದಿತ ಶುಲ್ಕ ಪಾವತಿಸಬೇಕಾಗುತ್ತದೆ. ಸಿಮ್ ಕಾರ್ಡ್ ಹೊಂದಿರುವ ಮೊಬೈಲ್ ಹಾಗೂ ಟ್ಯಾಬ್ಲೆಟ್‌ಗಳಲ್ಲಿ ಈ ವೈ ಫೈ ಬಳಕೆ ಸಾಧ್ಯವಿದೆ. [ವಿಶ್ವಕ್ಕೇ ವೈ ಫೈ : ಅಮೆರಿಕ ಕನಸು]

ಈ ಯೋಜನೆಗೆ 7 ಸಾವಿರ ರು. ವೆಚ್ಚದ ಅಂದಾಜು ಮಾಡಲಾಗಿದೆ. 60 ಸಾವಿರ ಹಾಟ್ ಸ್ಪಾಟ್ ಸೃಷ್ಟಿಸಲಾಗುತ್ತದೆ ಎಂದು ಬಿಎಸ್ಎನ್ಎಲ್ ಅಧಿಕಾರಿಗಳು ತಿಳಿಸಿದ್ದಾರೆ.

English summary
BSNL plans Wi-Fi across 2,500 cities of India including Mysuru. Central IT minister Ravishankar Prasad will in inaugurate the service at Dashaswamedh ghat in Varanasi on February 8.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X