BSNL: ಖಾಸಗಿ ಟೆಲಿಕಾಂ ಕಂಪನಿಗೆ ತಲೆನೋವಾದ BSNL, ಬ್ರಾಡ್ ಬ್ಯಾಂಡ್ ನಲ್ಲೂ ಸಂಚಲನ, ಅಗ್ಗದ ಬೆಲೆಗೆ 3300 ಜಿಬಿ
ನವದೆಹಲಿ, ಆಗಸ್ಟ್ 09: ಕೇಂದ್ರ ಸರ್ಕಾರ ವ್ಯಾಪ್ತಿಯಲ್ಲಿರುವ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ ( BSNL) ಟಾಟಾ ಸಮೂಹದ ಸಹಾಭಾಗಿತ್ವದ ವ್ಯಾಪ್ತಿಗೆ ಬಂದ ಬಳಿಕ 5ಜಿ ವೇಗದಲ್ಲಿ ಸುಧಾರಣೆಯಾಗುತ್ತಿದೆ. ಅಂದರೆ ಇಂಟರ್‌ನೆಟ್ ವೇಗ ಹೆಚ್ಚಿಸಿಕೊಳ್ಳುವ ಜೊತೆಗೆ ಅಗ್ಗದ ಬೆಲೆಗೆ ಮೊಬೈಲ್ ರಿಚಾರ್ಜ್ ಪ್ಲಾನ್ ಕೊಟ್ಟ BSNL ಖಾಸಗಿ ಸಂಸ್ಥೆಗಳಿಗೆ ಟಕ್ಕರ್ ನೀಡುತ್ತಿದೆ. ಇದೀಗ ಬ್ರಾಡ್ ಬ್ಯಾಂಡ್ ಸೇವೆಯಲ್ಲೂ ಮಿಂಚಿನ ಸಂಚಲನ ಉಂಟು ಮಾಡುತ್ತಿರುವ BSNL 'ಮುಂಗಾರು ಡಬಲ್ ಬೊನಾಂಜಾ' ಆಫರ್ ಘೋಷಿಸಿದೆ.
ಹೌದು, ದೇಶದ ಪ್ರತಿ ಹಳ್ಳಿ ಹಳ್ಳಿಯ ಭಾಗದಲ್ಲೂ ಸಂಪರ್ಕ ಸೇವೆ ಹೊಂದಿರುವ ಬೃಹತ್ ಜಾಲದ BSNL ಸೊರಗುತ್ತಿತ್ತು. ಇದೀಗ ಚೈತನ್ಯ ಕಾಣಲು ಪ್ರಮುಖ ಕಾರಣವೇ ಟಾಟಾ ಸಮೂಹದೊಂದಿಗೆ ಆ 15000 ಕೋಟಿ ರೂಪಾಯಿಯ ಒಪ್ಪಂದ.

ಜಿಯೋ, ಏರ್‌ಟೆಲ್ ನಂತರ ದೈತ್ಯ ಇಂಟರ್‌ನೆಟ್ ಸೇವಾ ಕಂಪನಿಗಳ ಮಧ್ಯೆ ಹೊಸ ಚೈತನ್ಯದೊಂದಿಗೆ ಪುಟಿದೇಳುತ್ತಿರುವ ಬಿಎಎಸ್‌ಎನ್‌ಎಲ್ ಗ್ರಾಹಕರ ಸಂಖ್ಯೆ ದಿನೇ ದಿನೇ ಏರಿಕೆ ಆಗುತ್ತಲೇ ಇದೆ. ಕಾರಣ ಇತರ ಖಾಸಗಿ ಟೆಲಿಕಾಂ ಕಂಪನಿಗಳ ದುಪಟ್ಟು ಬೆಲೆಯ ರಿಚಾರ್ಜ್ ಪ್ಲಾನ್‌ಗಳು.
ಬ್ರಾಡ್ ಬ್ಯಾಂಡ್ ಗ್ರಾಹಕರಿಗೆ ಅಗ್ಗದ ಬೆಲೆಗೆ ಸೇವೆ
ಸದ್ಯ ಮೊಬೈಲ್ ರೀಚಾರ್ಜ್ ಅನ್ನು ಇತರ ಖಾಸಗಿ ಟೆಲಿಕಾಂ ಸಂಸ್ಥೆಗಳಿಗಿಂತ ಕಡಿಮೆ ಬೆಲೆಗೆ ಘೋಷಣೆ ಮಾಡಿದೆ. ಹೀಗಾಗಿ ದುಬಾರಿ ಸೇವೆ ಬಿಟ್ಟು ಜನರು ನಂಬಿಕೆಯ ಬಿಎಸ್‌ಎನ್‌ಎಲ್ ನತ್ತ ಮುಖ ಮಾಡುತ್ತಿದ್ದಾರೆ. ದಿನೇ ದಿನ ಪೋರ್ಟ್ ಆಗುವವರ ಸಂಖ್ಯೆ ಏರಿಕೆ ಆಗುತ್ತಿದೆ. ಇದೀಗ ಮತ್ತೊಂದು ಸಂತಸ ಸುದ್ದಿ ಏನೆಂದರೆ ಬಿಎಸ್‌ಎನ್‌ಎಲ್ ತನ್ನ ಬ್ರಾಡ್ ಬ್ಯಾಂಡ್ ಗ್ರಾಹಕರಿಗೆ ಅಗ್ಗದ ಬೆಲೆಗೆ ಇಂಟರ್‌ನೆಟ್ ಸೇವೆ ನೀಡಲು ಮುಂದಾಗಿದೆ.
ಒಪ್ಪಂದಂತೆ ಟಾಟಾ ಸಮೂಹವು ಸುಮಾರು 1000 ಟಾವರ್ (4ಜಿ) ಅಳವಡಿಸಲಿದೆ. ಮುಂದಿನ ದಿನಗಳಲ್ಲಿ ಈ ಸಂಖ್ಯೆ ಹೆಚ್ಚಳವಾಗಲಿದೆ. ಬಿಎಸ್‌ಎನ್‌ಲಿ ಈ 4ಜಿ ಇಂಟರ್‌ನೆಟ್ ಅನ್ನು ಮತ್ತಷ್ಟು ಪರಿಣಾಮಕಾರಿಯಾಗಿಸು ಜೊತೆಗೆ 5ಜಿಗೂ ಅಪ್ಡೇಟ್ ಆಗಲಿದೆ. ಅಷ್ಟೊತ್ತಿಗಾಗಲೇ ಗ್ರಾಹಕರನ್ನು ಸೃಷ್ಟಿಸಿಕೊಳ್ಳುವ ಉದ್ದೇಶದಿಂದ BSNL ಮಾನ್ಸೂನ್ ಡಬಲ್ ಬೊನಾಂಜಾ ಆಫರ್ ಅನ್ನು ಪರಿಚಯಿಸಿದೆ.
ಈ ಆಫರ್ ಕುರಿತ ಸರ್ಕಾರಿ ಟೆಲಿಕಾಂ ಕಂಪನಿಯೇ ತನ್ನ ಅಧಿಕೃತ ಎಕ್ಸ್ ಹ್ಯಾಂಡಲ್ ನಲ್ಲಿ ಮಾಹಿತಿ ಹಂಚಿಕೊಂಡಿದೆ. ಕಂಪನಿಯು ಇಂಟರ್‌ನೆಟ್ ಸೇವೆಗಾಗಿ (4G, 5G) ಭಾರತ್ ಫೈಬರ್ ಬ್ರಾಡ್‌ಬ್ಯಾಂಡ್ ಸೇವೆಗಳಿಗಾಗಿ ಸ್ಥಳೀಯ ತಂತ್ರಜ್ಞಾನಕ್ಕೆ ಹೆಚ್ಚು ಮಹತ್ವ ನೀಡುತ್ತಿದೆ. ದೇಶಿಯ ಉಪಕರಣ ಬಳಕೆ ಮಾಡುತ್ತಿದೆ. BSNL ಮೊಬೈಲ್ ಮತ್ತು ಬ್ರಾಡ್‌ಬ್ಯಾಂಡ್ ನೆಟ್‌ವರ್ಕ್ ಜಾಲವನ್ನು ಹರಡಿಸಿದೆ.

BSNL ಮಾನ್ಸೂನ್ ಆಫರ್ ಏನಿದೆ?
ದೇಶದ ಪ್ರತಿಯೊಂದು ಗ್ರಾಮೀಣ ಪ್ರದೇಶದಲ್ಲಿ ಇಂಟರ್ನೆಟ್ ಬ್ರಾಡ್‌ಬ್ಯಾಂಡ್ ಬಳಕೆದಾರರಿಗೆ ಅತೀ ಕಡಿಮೆ (ಅಗ್ಗ) ಬೆಲೆಯಲ್ಲಿ 3300GB ಹೈ ಸ್ಪೀಡ್ ಡೇಟಾ ಇಂಟರ್ನೆಟ್ ಯೋಜನೆ ನೀಡುವುದಾಗಿ ಘೋಷಣೆ ಮಾಡಿದೆ. ಈ ಆಫರ್‌ನಡಿ 100 ರೂ. ಕಡಿತಗೊಳಿಸಿದೆ. ಅಂದರೆ ಈವರೆಗೆ 499 ರೂ.ಗೆ ಸಿಗುತ್ತಿದ್ದ ಪ್ಲಾನ್ 399 ರೂ.ಗೆ ಸಿಗಲಿದೆ.
60 Mbps ವೇಗದಲ್ಲಿ ಇಂಟರ್‌ನೆಟ್ ಸೇವೆ
ಬಳಕೆದಾರರು 3,300 ಜಿಪಿ ಡೇಟಾ ಪ್ಲಾನ್ ಪಡೆದುಕೊಂಡು ಅನಿಯಮಿತ ಕರೆ ಲಭ್ಯವಿದೆ. 60 Mbps ವೇಗದಲ್ಲಿ ಇಂಟರ್‌ನೆಟ್ ಸೇವೆ ಸಿಗಲಿದೆ. ಒದು ವೇಳೆ ಯೋಜನೆ ಮುಕ್ತಾಯಗೊಂಡರು ಸಹಿತ 4Mbps ಗೆ ಸೇವೆ ಸಿಗಲಿದೆ.
ಬಿಎಸ್‌ಎನ್‌ಎಲ್ ಪ್ರತಿ ಹಂತದಲ್ಲೂ ಸುಧಾರಿಸುತ್ತಿದ್ದು, ಇತ್ತೀಚೆಗೆ WhatsApp ಸಹಾಯವಾಣಿ ಸೇವೆ ಆರಂಭಿಸಿದೆ. ಈ ಮೂಲಕವು ತನ್ನ ಗ್ರಾಹಕರಿಗೆ ಸೇವೆ ನೀಡಲು ಬಿಎಸ್‌ಎನ್‌ಎಲ್ ಮುಂದಾಗಿದೆ. ಹೆಚ್ಚಿನ ಮಾಹಿತಿಗೆ ನೀವು ಸಹಾಯವಾಣಿ ಸಂಖ್ಯೆ 1800 4444 ಗೆ ಹಾಯ್ ಹೇಳಬಹುದು.












Click it and Unblock the Notifications