BSNL 4G: 65,000ಕ್ಕೂ ಅಧಿಕ ಸ್ಥಳಗಳಲ್ಲಿ 4G ಸೇವೆ ಆರಂಭ, ನೆಟ್‌ವರ್ಕ್ ಸಮಸ್ಯೆಗೆ ಮುಕ್ತಿ
ಬೆಂಗಳೂರು, ಜನವರಿ 24: ದೇಶವ್ಯಾಪಿ 01 ಲಕ್ಷ ಟವರ್‌ಗಳನ್ನು ಸ್ಥಾಪಿಸುವ ಮೂಲಕ ವೇಗದ 4ಜಿ ಮತ್ತು 5ಜಿ ನೆಟ್‌ವರ್ಕ್ ಸೇವೆ ನೀಡಲು ಸಿದ್ಧವಾಗುತ್ತಿರುವ ಕೇಂದ್ರ ಸರ್ಕಾರಿ ಸ್ವಾಮ್ಯದ 'ಭಾರತ್ ಸಂಚಾರ್ ನಿಗಮ್ ಲಿಮಿಟೆಡ್' (BSNL) ಸದ್ಯ ಅಧಿಕೃತವಾಗಿ 4ಜಿಗೆ ಚಾಲನೆ ನೀಡಿದೆ. ಕಳೆದ ಜನವರಿ 15ರಂದು 3ಜಿ ಇಂಟರ್‌ನೆಟ್ ಸೇವೆ ಸ್ಥಗಿತಗೊಳಿಸಿದ್ದ ಟಿಲಿಕಾಂ ಕಂಪನಿಯು ತನ್ನ ಬಳಕೆದಾರರಿಗೆ ಸಿಹಿ ಸುದ್ದಿ ನೀಡಿದೆ.
ಈಗಾಗಲೇ ನೀವು BSNL ಸಿಮ್ ಬಳಕೆ ಮಾಡುತ್ತಿದ್ದರೆ, ಇಲ್ಲವೇ ನೀವು ಹೊಸದಾಗಿ ಸಿಮ್ ಪಡೆಯಬೇಕೆಂದವರೆಗೆ ಇದೊಂದು ಅತ್ಯುತ್ತಮ ಸುದ್ದಿಯಾಗಿದೆ. ಬಿಎಸ್‌ಎನ್‌ಎಲ್ 4G ನೆಟ್‌ವರ್ಕ್ ದೇಶಾದ್ಯಂತ ವಿಸ್ತರಣೆ ಆಗುತ್ತಿದ್ದು, ಇದೀಗ 65,000 ಕ್ಕೂ ಹೆಚ್ಚು ಪ್ರದೇಶಗಳಲ್ಲಿ ಸೇವೆ ಲಭ್ಯವಾಗಿದೆ. ಇಂದಿನಿಂದ ಬಳಕೆದಾರರಿಗೆ BSNL ವೇಗದ ಇಂಟರ್‌ನೆಟ್ ಸೇವೆ ಪಡೆಯಬಹುದಾಗಿದೆ. ಇದರಿಂದ ನೆಟ್ ಸಮಸ್ಯೆ, ಟವರ್ ಇನ್ನಿತರ ಸಮಸ್ಯೆಗೆ ಮುಕ್ತಿ ಸಿಕ್ಕಂತಾಗಿದೆ.

ಉದ್ದೇಶಿತ ಒಂದು ಲಕ್ಷ ಟವರ್ ಸ್ಥಾಪನೆ ಪೈಕಿ ಬಿಎಸ್‌ಎನ್‌ಎಲ್ ದೇಶದ 65,000 ಕ್ಕೂ ಹೆಚ್ಚು ಸ್ಥಳಗಳಲ್ಲಿ 4G ಟವರ್ ಸ್ಥಾಪನೆ ಕಾರ್ಯ ಪೂರ್ಣಗೊಳಿಸಿದೆ. ಇಲ್ಲೆಲ್ಲ ಇಂಟರ್‌ನೆಟ್ ಸೇವೆಯನ್ನು ಅರಂಭಿಸಿದೆ. ಮುಂದಿನ ದಿನಗಳಲ್ಲಿ ಅಂದರೆ 2025ರ ಮಧ್ಯ ಭಾಗಕ್ಕೆ ಸುಮಾರು 100,000 ಪ್ರದೇಶಗಳಲ್ಲಿ ಟವರ್ ಸ್ಥಾಪಿಸಿ, ವೇಗದ 4G ಇಂಟರ್‌ನೆಟ್ ಸೇವೆ ಬಳಕೆದಾರರಿಗೆ ಸಿಗುವಂತೆ ಮಾಡುವ ಗುರಿ ಕಂಪನಿ ಹೊಂದಿದೆ.
BSNLಗೆ 03 ಲಕ್ಷ ಬಳಕೆದಾರರ ನಷ್ಟ
ಈಗಾಗಲೇ ಕಡಿಮೆ ಬೆಲೆಗೆ ಜನರಿಗೆ ಖಾಸಗಿ ಟೆಲಿಕಾಂ ಕಂಪನಿಗಳು ನೀಡದ ರೀಚಾರ್ಜ್ ಪ್ಲಾನ್ ಅನ್ನು ಬಿಎಸ್‌ಎಸ್‌ಎಲ್ ನೀಡುತ್ತಿದೆ. ಇತ್ತೀಚೆಗೆ ಬಳಕೆದಾರರು ಹೆಚ್ಚಾದಂತೆಲ್ಲ, BSNL ನೆಟ್‌ವರ್ಕ್ ಸಮಸ್ಯೆ ಎದುರಾಗಿತ್ತು. ದಿಢೀರ್ ಕರೆಗಳೂ ಕಟ್ ಆಗುವುದು, ನೆಟ್‌ವರ್ಕ್ ಲಭ್ಯತೆ ಪ್ರಮಾಣ ಕುಸಿತ, ಇನ್ನಿತರ ಸಮಸ್ಯೆಗಳಿಂದಾಗಿ ಸುಮಾರು 03 ಲಕ್ಷ ಬಳಕೆದಾರರ BSNL ತೊರೆದರು ಎಂದು ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ TRAI ನವೆಂಬರ್ ವರದಿ ತಿಳಿಸಿದೆ.

ಬಳಕೆದಾರರ ನಷ್ಟು ಎದುರಾದ ಬೆನ್ನಲ್ಲೆ 4G ಸೇವೆ ಆರಂಭಿಸಿದೆ. ಇನ್ನೇನು ಕೆಲವೇ ತಿಂಗಳಲ್ಲಿ 100,000 ಪ್ರದೇಶಗಳಲ್ಲಿ ಹೊಸ ಟವರ್ ಸ್ಥಾಪನೆ ಪೂರ್ಣಗೊಳ್ಳಲಿವೆ. ಅದಾಗುತ್ತಿದ್ದಂತೆ 4G ಭಾರತಾದ್ಯಂತ ಲಭ್ಯವಾಗುತ್ತಿದೆ. ಇದರ ಬೆನ್ನಲ್ಲೆ ಬಿಎಸ್‌ಎನ್‌ಎಲ್ 5g ಸೇವೆಗೆ ಆಪ್‌ಗ್ರೇಡ್ ಆಗಲಿದೆ.
ಫೆಬ್ರವರಿ ಹೊತ್ತಿಗೆ ಸಮಸ್ಯೆಗೆ ಮುಕ್ತಿ
BSNL ನೆಟ್‌ವರ್ಕ್‌ನಲ್ಲಿ ಆಗಾಗ ಸಮಸ್ಯೆ ಆಗಿರುವುದು, ನಿಧಾನಗತಿ ಸೇವೆ ಕುರಿತು ಅನೇಕ ಬಳಕೆದಾರರು ದೂರಿದ ಬೆನ್ನಲ್ಲೆ ಈ ಎಲ್ಲ ಸಮಸ್ಯೆ ಕುರಿತು ಅಧಿಕಾರಿಗಳು ಒಪ್ಪಿಕೊಂಡಿದ್ದು, ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದಾರೆ. ಇದೇ ವರ್ಷ ಫೆಬ್ರವರಿ ಅಂತ್ಯದೊಳಗೆ ಈ ಎಲ್ಲ ಸಮಸ್ಯೆಗಳು ಕೊನೆಗೊಳ್ಳಲಿವೆ ಎಂದು BSNL ತಿಳಿಸಿದೆ.
ಇತ್ತೀಚೆಗೆ ಬಿಎಸ್‌ಎಸ್‌ಎಲ್ ಕಂಪನಿಯು ಇಂಟರ್‌ನೆಟ್ ಫೈಬರ್ ಟೆಲಿವಿಜನ್ (IFTV) ಸೇವೆ ಆರಂಭಿಸಿದೆ. ರಾಜಸ್ತಾನ್, ಉತ್ತರ ಪ್ರದೇಶ, ಗುಜರಾತ್ ಸೇರಿದಂತೆ ಕೆಲವು ರಾಜ್ಯಗಳಲ್ಲಿ ಈ ಸೇವೆ ಜಾರಿಗೆ ತಂದಿದೆ. ಇದರಿಂದ ನೀವು 500ಕ್ಕೂ ಅಧಿಕ ಉಚಿತ ಲೈವ್ ಚಾನಲ್ ಉಚಿತವಾಗಿ ವೀಕ್ಷಿಸಬಹುದು. ಸೆಟ್ ಆಫ್ ಬಾಕ್ಸ್ ಇಲ್ಲದೆಯೇ ನೀವು ಮನರಂಜನೆ ಪಡೆಯಬಹುದಾಗಿದೆ. ಇದನ್ನು ದೇಶವ್ಯಾಪ್ತಿ ವಿಸ್ತರಣೆ ಮಾಡುವ ಗುರಿ ಇದೆ ಎಂದರು.












Click it and Unblock the Notifications