ಪ್ರವಾಹದ ನಡುವೆ ಕರ್ತವ್ಯ ನಿರತ ಯೋಧರ ಚಿತ್ರ ವೈರಲ್
ಕೊಲ್ಕೊತ್ತಾ, ಆಗಸ್ಟ್ 14: ಉತ್ತರ ಭಾರತವನ್ನು ಭೀಕರ ಮಳೆ ಮತ್ತು ಪ್ರವಾಹ ಹರಿದು ಹಂಚಿ ಹಾಕಿದೆ. ಇದು ಯೋಧರನ್ನೂ ಬಿಟ್ಟಿಲ್ಲ.
ಆದರೆ, ಯೋಧರು ತಮ್ಮ ಕರ್ತವ್ಯದಿಂದ ಹಿಮ್ಮುಖರಾಗುವಂತಿಲ್ಲ. ನಡು ನೀರಿನಲ್ಲಿ ಪ್ರವಾಹದ ಮಧ್ಯೆಯೇ ಸೊಂಟಮಟ್ಟ ನೀರಿದ್ದರೂ ಕಾರ್ಯ ನಿರ್ವಹಿಸುತ್ತಿರುವ ಭಾರತೀಯ ಗಡಿ ನಿಯಂತ್ರಣ ಪಡೆ ಯೋಧರ ಚಿತ್ರಗಳೀಗ ವೈರಲ್ ಆಗಿವೆ.

ಬಿಎಸ್ಎಫ್ ನ ಅಧಿಕೃತ ಟ್ವಿಟ್ಟರ್ ಖಾತೆಯಿಂದ ಈ ಫೋಟೋಗಳನ್ನು ಶೇರ್ ಮಾಡಲಾಗಿದ್ದು ಸಾವಿರಾರು ಜನರು ರೀ ಟ್ವೀಟ್ ಮಾಡಿದ್ದಾರೆ.
Just another day on #Borders pic.twitter.com/OIGRGTPhcE
— BSF (@BSF_India) August 12, 2017
ಉತ್ತರ ಬಂಗಾಳದ ಪುನರ್ಭಬ ನದಿ ತುಂಬಿ ಹರಿಯುತ್ತಿದ್ದು ಇದರಿಂದ ಉಂಟಾದ ಪ್ರವಾಹದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಯೋಧರ ಫೋಟೋಗಳು ಇವಾಗಿವೆ. ಯೂನಿಫಾರಂ ಹಾಕಿಕೊಂಡು ಕೈಯಲ್ಲಿ ಗನ್ ಹಿಡಿದು ಸೊಂಟದವರೆಗಿನ ನೀರಿನಲ್ಲೇ ಯೋಧರ ಭಾರತದ ಗಡಿಗಳನ್ನು ಕಾಯುತ್ತಿದ್ದಾರೆ.












Click it and Unblock the Notifications