ಅಪ್ಪನ ಬಲಿದಾನಕ್ಕೆ ಹೆಮ್ಮೆಯಿದೆ, ಆದರೆ?: ಸೈನಿಕನ ಮಗನ ಭಾವುಕ ಮಾತುಗಳು...

ನವದೆಹಲಿ, ಸೆಪ್ಟೆಂಬರ್ 21: 'ಇದು ನಮ್ಮ ಪಾಲಿಗೆ ಹೆಮ್ಮೆಯ ಸಂಗತಿ. ತ್ರಿವರ್ಣ ಧ್ವಜವನ್ನು ಹೊದ್ದು ಮಲಗುವಂತಹ ಗೌರವ ಎಲ್ಲರಿಗೂ ಸಿಗುವುದಿಲ್ಲ ಅಲ್ಲವೇ?'- ಕಣ್ಣಾಲಿಗಳನ್ನು ತುಂಬಿಕೊಂಡ ಮೋಹಿತ್ ದಹಿಯಾ ಕ್ಷಣಕಾಲ ಮೌನವಾದರು.

ಅವರ ಮನಸ್ಸಿನಲ್ಲಿ ರಾಷ್ಟ್ರಧ್ವಜದ ಅಡಿಯಲ್ಲಿ ಮಲಗಿದ್ದ ಅಪ್ಪನ ಮೃತದೇಹ ಮೂಡಿಬರುತ್ತಿತ್ತು. 'ನಾನು ಮತ್ತು ನನ್ನ ಸಹೋದರ ಇಬ್ಬರೂ ನಿರುದ್ಯೋಗಿಗಳು. ನಮ್ಮ ಬದುಕಿಗೆ ಏಕೈಕ ಆಧಾರವಾಗಿದ್ದ ಅಪ್ಪ, ದೇಶ ಸೇವೆಗಾಗಿ ತೆರಳಿದ್ದರು. ಈಗ ನಾವು ಅಪ್ಪನ ಬಗ್ಗೆ ಹೆಮ್ಮೆಪಟ್ಟುಕೊಳ್ಳುತ್ತಿದ್ದೇವೆ.

bsf jawan narendra singh son proud but asked assistance from government

ಆದರೆ, ಅವರಿಲ್ಲದೆ ಇನ್ನು ನಾವು ಬದುಕುವುದು ಹೇಗೆ? ಎರಡು ಮೂರು ದಿನದ ಬಳಿಕ ನಮಗೆ ಯಾವುದೇ ಸಹಾಯ ದೊರೆಯದಿದ್ದರೆ ಏನು ಮಾಡುವುದು?' ಎಂದು ದಿಕ್ಕೆಟ್ಟ ಮೋಹಿತ್ ಭವಿಷ್ಯದ ಬಗ್ಗೆ ಆತಂಕ ಹಂಚಿಕೊಂಡರು.

'ನಾವು ಹೆಮ್ಮೆಪಟ್ಟುಕೊಳ್ಳುತ್ತಲೇ ಇರಲು ಸಾಧ್ಯವಿಲ್ಲ. ಇವತ್ತು ನಾವು ಹೆಮ್ಮೆ ಪಡುತ್ತೇವೆ. ನಾಳೆ ಇನ್ನೊಬ್ಬರು ಯಾರೋ ಹತ್ಯೆಯಾಗುತ್ತಾರೆ. ನಾವು ಮತ್ತೆ ಹೆಮ್ಮೆಪಡುತ್ತೇವೆ. ಎಷ್ಟು ದಿನ ಹೀಗೆ ನಾವು ದುಃಖಿಸಲು ಸಾಧ್ಯ' ಎಂದು ಪ್ರಶ್ನಿಸಿದರು.

ಗಡಿಯಲ್ಲಿ ನಡೆಯುವ ಘಟನೆಗಳ ವಿಚಾರವಾಗಿ ಕ್ರಮ ತೆಗೆದುಕೊಳ್ಳುವ ಬಗ್ಗೆ ಸರ್ಕಾರ ಮತ್ತು ಇತರೆ ಅಧಿಕಾರಿಗಳು ನಿರ್ಧರಿಸುತ್ತಾರೆ. ಆದರೆ, ಅದರ ಮಧ್ಯೆ ಅನೇಕ ಪ್ರಶ್ನೆಗಳು ಉತ್ತರವಿಲ್ಲದೆ ಕಳೆದುಹೋಗುತ್ತವೆ ಎಂದ ಅವರು, ನಮಗೆ ಅಗತ್ಯವಿರುವ ಎಲ್ಲ ನೆರವನ್ನು ಒದಗಿಸಿಕೊಡಿ ಎಂದು ಅಧಿಕಾರಿಗಳನ್ನು ಕೇಳಿಕೊಂಡರು.

bsf jawan narendra singh son proud but asked assistance from government

ಬಿಎಸ್‌ಎಫ್‌ನ ಹೆಡ್‌ ಕಾನ್‌ಸ್ಟೆಬಲ್ ಆಗಿದ್ದ ನರೇಂದ್ರ ಸಿಂಗ್ ಅವರನ್ನು ಜಮ್ಮುವಿನಲ್ಲಿ ಮಂಗಳವಾರ ಪಾಕಿಸ್ತಾನದ ಪಡೆಗಳು ಬರ್ಬರವಾಗಿ ಕೊಂದು ಹಾಕಿದ್ದವು.

ಗಡಿಯಲ್ಲಿ ಗಸ್ತು ತಿರುಗುತ್ತಿದ್ದ ಬಿಎಸ್‌ಎಫ್‌ನ ಸಿಬ್ಬಂದಿಗೆ ತಮ್ಮ ತಂಡದಲ್ಲಿದ್ದ ನರೇಂದ್ರ ಸಿಂಗ್ ನಾಪತ್ತೆಯಾಗಿರುವುದು ಗೊತ್ತಾಗಿತ್ತು. ಅವರಿಗಾಗಿ ತೀವ್ರ ಹುಡುಕಾಟ ನಡೆಸಿದಾಗ ಆರು ಗಂಟೆಯ ಬಳಿಕ ಛಿದ್ರಗೊಂಡಿದ್ದ ಮೃತದೇಹ ದೊರೆತಿತ್ತು.

ಅಂತಾರಾಷ್ಟ್ರೀಯ ಗಡಿಯ ಬೇಲಿಯುದ್ದಕ್ಕೂ ಬೆಳೆದಿದ್ದ ಎತ್ತರದ ಹುಲ್ಲನ್ನು ತೆರವುಗೊಳಿಸಲು ತೆರಳಿದ್ದ ನರೇಂದ್ರ ಸಿಂಗ್ ಅವರ ಕತ್ತು ಸೀಳಿದ್ದ ಕ್ರೂರಿ ಪಾಕ್ ಸೈನಿಕರು, ಕಣ್ಣುಗಳನ್ನು ಕಿತ್ತು ಹಾಕಿದ್ದರು. ದೇಹದ ಎಲ್ಲೆಡೆ ಗುಂಡು ಹಾರಿಸಿದ್ದರು. ಈ ಘಟನೆಗೆ ದೇಶದಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+