ಗಡಿಯಲ್ಲಿ ಇಬ್ಬರು ಪಾಕಿಸ್ತಾನಿ ಪ್ರಜೆಗಳ ಸೆರೆ: ಉಗ್ರರಿಗೆ ನೆರವಾಗುತ್ತಿದ್ದ ಶಂಕೆ

ಶ್ರೀನಗರ, ಜೂನ್ 16: ಜಮ್ಮು ಮತ್ತು ಕಾಶ್ಮೀರದ ಸಾಂಬಾ ವಲಯದಲ್ಲಿ ಇಬ್ಬರು ಪಾಕಿಸ್ತಾನಿ ಪ್ರಜೆಗಳನ್ನು ಗಡಿ ಭದ್ರತಾ ಪಡೆ ಶನಿವಾರ ಬಂಧಿಸಿದೆ.

ಗಡಿಯಲ್ಲಿ ಭಾರತದ ಒಳಗೆ ನುಸುಳಲು ಉಗ್ರರಿಗೆ ಈ ಪಾಕಿಸ್ತಾನಿ ನಾಗರಿಕರು ನೆರವು ನೀಡುತ್ತಿದ್ದರು ಎಂಬ ಶಂಕೆಯ ಮೇಲೆ ಬಂಧಿಸಲಾಗಿದೆ ಎಂಬುದಾಗಿ ವರದಿಗಳು ತಿಳಿಸಿವೆ.

ಬಂಧಿತರಲ್ಲಿ ಒಬ್ಬ 31 ವರ್ಷದವನಾಗಿದ್ದರೆ, ಮತ್ತೊಬ್ಬ 22 ವರ್ಷದವನಾಗಿದ್ದಾನೆ.

bsf have apprehended two pakistani nationals in samba sector

ಗಡಿ ಭಾಗದ ಪ್ರದೇಶಗಳನ್ನು ಚೆನ್ನಾಗಿ ಬಲ್ಲ ಸ್ಥಳೀಯರನ್ನು ಪಾಕಿಸ್ತಾನ ಸೇನೆ ಮತ್ತು ಉಗ್ರರು ದಾರಿ ತೋರಿಸುವುದಕ್ಕೆ ಬಳಸಿಕೊಳ್ಳುತ್ತಿದ್ದಾರೆ.

ಅಲ್ಲದೆ, ಅವರು ಗಡಿಯಲ್ಲಿ ಕಿಂಡಿಗಳನ್ನು ಕಂಡು ಹಿಡಿದು, ಪಾಕಿಸ್ತಾನದ ತರಬೇತುಗೊಂಡ ಉಗ್ರರನ್ನು ಅದರ ಮೂಲಕ ಭಾರತದ ಗಡಿಯೊಳಕ್ಕೆ ನುಸುಳಲು ನೆರವು ನೀಡುತ್ತಿದ್ದಾರೆ ಎಂದು ವರದಿಗಳು ತಿಳಿಸಿವೆ.

ಕಳೆದ ಕೆಲವು ವಾರಗಳಿಂದ ಭಾರತೀಯ ಭದ್ರತಾ ಪಡೆಗಳ ಮೇಲೆ ಅನೇಕ ದಾಳಿಗಳು ನಡೆದಿವೆ. ರಂಜಾನ್ ಮಾಸಾಚರಣೆಯ ಕಾರಣ ಭಯೋತ್ಪಾದಕರ ವಿರುದ್ಧದ ಕಾರ್ಯಾಚರಣೆಯನ್ನು ಕೇಂದ್ರ ಸರ್ಕಾರ ಸ್ಥಗಿತಗೊಳಿಸಿತ್ತು.

ಇತ್ತೀಚಿನ ದಿನಗಳಲ್ಲಿ ಗಡಿಯಲ್ಲಿ ಒಳನುಸುಳುವ ಅನೇಕ ಪ್ರಯತ್ನಗಳು ಸೇನೆ ಮತ್ತು ಬಿಎಸ್‌ಎಫ್ ಪಡೆಗಳು ವಿಫಲಗೊಳಿಸಿದ್ದವು.

ಭಾರತದ ಒಳಗೆ ಅಕ್ರಮವಾಗಿ ಪ್ರವೇಶಿಸಲು ಪ್ರಯತ್ನಿಸುತ್ತಿದ್ದ ಐವರು ಉಗ್ರರನ್ನು ಸೇನಾ ಪಡೆಗಳು ಮೇ 26ರಂದು ತಂಗ್ಧಾರ್ ಪ್ರದೇಶದಲ್ಲಿ ಗುಂಡಿಕ್ಕಿ ಹತ್ಯೆ ಮಾಡಿದ್ದವು. ಅವರಿಂದ ಭಾರಿ ಪ್ರಮಾಣದ ಶಸ್ತ್ರಾಸ್ತ್ರ ಮತ್ತು ಉಪಕರಣಗಳನ್ನು ವಶಪಡಿಸಿಕೊಳ್ಳಲಾಗಿತ್ತು.

ಅದಕ್ಕೂ ಮುನ್ನ ಕುಪ್ವಾರದಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಒಳನುಸುಳುತ್ತಿದ್ದ ನಾಲ್ವರು ಉಗ್ರರನ್ನು ಹೊಡೆದುರುಳಿಸಲಾಗಿತ್ತು.

ಲಷ್ಕರ್ ಎ ತಯಬಾ ಮತ್ತು ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಗಳಿಗೆ ಸೇರಿದ, ಐಎಸ್‌ಐ ಮತ್ತು ಪಾಕಿಸ್ತಾನ ಸೇನೆಯ ಬಿಎಟಿಗಳಿಂದ ತರಬೇತಿ ಹಾಗೂ ನೆರವು ಪಡೆದ ಸುಮಾರು 450 ಉಗ್ರರು ಗಡಿ ನಿಯಂತ್ರಣ ರೇಖೆಯ ಬಳಿ ಜಮಾಯಿಸಿದ್ದಾರೆ. ಪಾಕ್ ಆಕ್ರಮಿತ ಕಾಶ್ಮೀರದ ಮೂಲಕ ಅವರು ಭಾರತದ ಮೇಲೆ ದಾಳಿ ನಡೆಸಲು ಸಿದ್ಧತೆ ನಡೆಸಿದ್ದಾರೆ ಎಂದು ಗುಪ್ತಚರ ವರದಿಗಳು ತಿಳಿಸಿವೆ.

ಈ ಉಗ್ರರು ಒಳನುಸುಳಲು ಕಾಯುತ್ತಿದ್ದು, ಅಮರನಾಥ ಯಾತ್ರೆ ಸಂದರ್ಭದಲ್ಲಿ ದಾಳಿಗಳನ್ನು ನಡೆಸಲು ಹೊಂಚು ಹಾಕಿದ್ದಾರೆ ಎಂದು ವಿವರಿಸಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+