2020 ಮಾರ್ಚ್‌ ನಂತರ ಬಿಎಸ್-4 ವಾಹನ ಮಾರುವಂತಿಲ್ಲ: ಸುಪ್ರಿಂ

ನವದೆಹಲಿ, ಅಕ್ಟೋಬರ್ 24: ವಾಹನಗಳಿಂದಾಗುವ ವಾಯುಮಾಲಿನ್ಯ ಕಡಿಮೆ ಮಾಡುವ ನಿಟ್ಟಿನಲ್ಲಿ ಸುಪ್ರಿಂಕೋರ್ಟ್‌ ಮಹತ್ವದ ಆದೇಶ ನೀಡಿದ್ದು, 2020 ರ ಮಾರ್ಚ್‌ ತಿಂಗಳ ನಂತರ ಯಾವುದೇ ಬಿಎಸ್‌-4 ವಾಹನಗಳನ್ನು ಮಾರಾಟ ಮಾಡುವಂತಿಲ್ಲ ಎಂದಿದೆ.

ವಾಹನಗಳ ಮಾಲಿನ್ಯ ತಡೆಗಟ್ಟುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಮದನ್ ಬಿ. ಲೋಕುರ್ ನೇತೃತ್ವದ ಮೂವರು ಸದಸ್ಯರ ಪೀಠವು 2020ರ ಏಪ್ರಿಲ್ 1ರಿಂದ ಭಾರತ್ ಸ್ಟೇಜ್‌- 4 ಮಾದರಿಯ ಯಾವುದೇ ವಾಹನವನ್ನು ದೇಶದಾದ್ಯಂತ ಮಾರುವಂತಿಲ್ಲ ಎಂದು ಹೇಳಿದೆ.

ಏಪ್ರಿಲ್ ಒಂದರಿಂದ ಭಾರತದಾದ್ಯಂತ ಭಾರತ್‌ ಸ್ಟೇಜ್‌-6 ನ (ಬಿಎಸ್‌-6) ಮಾದರಿಯ ವಾಹನಗಳನ್ನಷ್ಟೆ ಮಾರಾಟ ಮಾಡಬೇಕು ಎಂದು ಆದೇಶದಲ್ಲಿ ಹೇಳಲಾಗಿದೆ.

BS-4 vehicles will not be sell in India from 1 April 2020

2017 ರಿಂದ ಭಾರತ್‌ ಸ್ಟೇಜ್‌ 4 ರ ಮಾದರಿಯ ವಾಹನಗಳ ಮಾರಾಟ ನಡೆಯುತ್ತಿತ್ತು. ಆದರೆ 2020 ಕ್ಕೆ ಅದು ಕೊನೆಗೊಳ್ಳಲಿದೆ. ವಾಯುಮಾಲಿನ್ಯ ನಿಯಂತ್ರಣಕ್ಕಾಗಿ ಈ ಆದೇಶ ನೀಡಲಾಗಿದೆ.

ಸ್ಪಾರ್ಕ್‌ ಇಗ್ನೀಷನ್‌ ಹಾಗೂ ಇಂಟರ್ನಲ್‌ ಕಂಬರ್ಷನ್‌ ಎಂಜಿನ್‌ಗಳಿಂದ ಹೊರ ಬರುವ ವಾಯು ಹಾಗೂ ಅದರಿಂದಾಗುವ ಮಾಲಿನ್ಯವನ್ನು ತಡೆಗಟ್ಟಲು ಕೇಂದ್ರ ಸರ್ಕಾರ ನಿಗದಿಗೊಳಿಸಿರುವ ಮಾನದಂಡವೇ ಭಾರತ್‌ ಸ್ಟೇಜ್‌ ಎಮಿಷನ್‌ ಸ್ಟಾಂಡರ್ಡ್‌. ಬಿಎಸ್‌-4 ಗಿಂತಲೂ ಬಿಎಸ್‌-6 ಮಾದರಿ ವಾಹನಗಳು ಕಡಿಮೆ ಹೊಗೆ ಹೊರಸೂಸುತ್ತವಾದ್ದರಿಂದ ಬಿಎಸ್‌-6 ವಾಹನಗಳನ್ನಷ್ಟೆ ಮಾರಾಟಮಾಡುವಂತೆ ಸುಪ್ರಿಂ ಹೇಳಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+