ಭಾರತಕ್ಕೂ ಕಾಲಿಟ್ಟ ಐಸಿಸ್ ಭಯೋತ್ಪಾದನೆ, ಕಾಶ್ಮೀರದಲ್ಲಿ ಮೊದಲ ದಾಳಿ
ಕಾಶ್ಮೀರ, ನವೆಂಬರ್ 19: ಜಮ್ಮು ಮತ್ತು ಕಾಶ್ಮೀರದಲ್ಲಿ ಮೊದಲ ದಾಳಿ ನಡೆಸಿರುವುದಾಗಿ ಭಯೋತ್ಪಾದಕ ಸಂಘಟನೆ ಐಸಿಸ್ ಹೇಳಿಕೊಂಡಿದೆ. ಶ್ರೀನಗರದಲ್ಲಿ ನಡೆದ ದಾಳಿಯಲ್ಲಿ ಓರ್ವ ಪೊಲೀಸ್ ಅಧಿಕಾರಿ ಸಾವನ್ನಪ್ಪಿದ್ದು ಇನ್ನೊಬ್ಬರು ಗಾಯಗೊಂಡಿದ್ದಾರೆ. ತನ್ನ ಸಂಘಟನೆಯೇ ಈ ದಾಳಿ ನಡೆಸಿದ್ದಾಗಿ ಐಸಿಸ್ ಮಾಧ್ಯಮ ಸಂಸ್ಥೆ ಅಮಾಕ್ ಹೇಳಿದೆ.
ಇದೊಂದು ಪ್ರಮುಖ ತಿರುವು ಎಂಬುದಾಗಿ ಗುಪ್ತಚರ ಇಲಾಖೆ ಅಧಿಕಾರಿಗಳು ವಿಶ್ಲೇಷಿಸಿದ್ದಾರೆ. ಕಣಿವೆ ರಾಜ್ಯದಲ್ಲಿ ತನ್ನ ಕಾರ್ಯಾಚರಣೆ ಆರಂಭಿಸುವುದಾಗಿ ಐಸಿಸ್ ಹೇಳುತ್ತಾ ಬಂದಿತ್ತು. ಐಸಿಸ್ ಮುಖ್ಯಸ್ಥ ಅಬುಬಕರ್ ಅಲ್ ಬಗ್ದಾದಿ ಗ್ಲೋಬಲ್ ಇಸ್ಲಾಮಿಕ್ ಕೌನ್ಸಿಲ್ ಬಗ್ಗೆ ಮಾತನಾಡುವಾಗ ಕಾಶ್ಮೀರ ಮತ್ತು ಗುಜರಾತ್ ಬಗ್ಗೆಯೂ ಮಾತನಾಡಿದ್ದ.

ಇದೀಗ ಮೊದಲ ದಾಳಿಯ ವಾರ್ತೆ ಬಂದಿದ್ದು, ಇದರ ಬಗ್ಗೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಇದನ್ನು ಐಸಿಸ್ ನಿಜವಾಗಿಯೂ ನಡೆಸಿದೆಯಾ ಅಥವಾ ಹಿಜ್ಬುಲ್ ಮುಜಾಹಿದ್ದೀನ್ ತೊರೆದು ತನ್ನದೇ ಗುಂಪು ಕಟ್ಟಿಕೊಂಡಿರುವ ಝಾಕೀರ್ ಮೂಸಾ ಈ ದಾಳಿ ನಡೆಸಿದ್ದಾನಾ ಎಂಬ ಬಗ್ಗೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.
ಈ ಹಿಂದೆ ಹಲವು ಬಾರಿ ಕಾಶ್ಮೀರ ಕಣಿವೆಯಲ್ಲಿ ಐಸಿಸ್ ಧ್ವಜ ಪ್ರದರ್ಶನ ನಡೆದಿತ್ತು. ಕೆಲವು ದಾಳಿಗಳಿಗೂ ಯೋಜನೆ ರೂಪಿಸಲಾಗಿತ್ತು. ಆದರೆ ದಾಳಿ ನಡೆಸಿದ್ದೇವೆ ಎಂದು ಐಸಿಸ್ ಘೋಷಿಸಿಕೊಂಡಿದ್ದು ಮಾತ್ರ ಇದೇ ಮೊದಲು.
-
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ












Click it and Unblock the Notifications