Border row: ಭಾರತದ ಗಡಿಯಲ್ಲಿ ಚೀನಾ ಉಪಟಳ?: ಗಡಿ ಪ್ರದೇಶಗಳಿಗೆ 'ಚೀನಾ ನಿರ್ಮಿತ ಡ್ರೋನ್' ಎಂಟ್ರಿ
ಅಮೃತಸರ, ಬೆಂಗಳೂರು, 12: ಭಾರತದ ಪಂಜಾಬ್ ಗಡಿ ಭಾಗದಲ್ಲಿ ನೆರೆ ದೇಶ ಚೀನಾ ಮತ್ತೆ ಖ್ಯಾತೆ ತೆಗೆಯಲು ಮುಂದಾಗಿದೆ. ದೇಶದ ಜನರು ದೀಪಾವಳಿ ಸಡಗರದಲ್ಲಿರುವ ಸಂದರ್ಭದಲ್ಲಿ ಗಡಿಯಲ್ಲಿ ಚೀನಾ ನಿರ್ಮಿತ ಡ್ರೋನ್ ಹಾರಾಟ ನಡೆಸಿದ್ದು, ಅದನ್ನು ವಶಕ್ಕೆ ಪಡೆಯಲಾಗಿದೆ.
ಹೌದು, ನವೆಂಬರ್ 12ರಂದು ಭಾನುವಾರ ಬೆಳಗ್ಗೆ ಪಂಜಾಬ್ ರಾಜ್ಯದ ಅಮೃತಸರದ ನೆಸ್ತಾ ಗ್ರಾಮದಲ್ಲಿ ಡ್ರೋನ್ ಹಾರಾಡಿದೆ. ಕೂಡಲೇ ಅಲರ್ಟ್ ಆದ ಗಡಿ ಭದ್ರತಾ ಪಡೆ (BSF) ಮತ್ತು ಪಂಜಾಬ್ ಪೊಲೀಸರ ಜಂಟಿ ತಂಡವು ಕಾರ್ಯಾಚರಣೆ ನಡೆಸಿ ಡ್ರೋನ್ ವಶಕ್ಕೆ ಪಡೆಯಲಾಗಿದೆ ಎಂದು ಅಧಕಾರಿಗಳು ಮಾಹಿತಿ ನೀಡಿದ್ದಾರೆ.

ಪಂಜಾಬ್ ಮೂಲಗಳ ಪ್ರಕಾರ, ರಾಜ್ಯದ ಅಮೃತಸರದ ನೆಸ್ಟಾ ಗ್ರಾಮದ ಹೊರವಲಯದಲ್ಲಿ ಚೀನಾ ನಿರ್ಮಿತ ಕ್ವಾಡ್‌ಕಾಪ್ಟರ್ ಡ್ರೋನ್ ಅನ್ನು ವಶಪಡಿಸಿಕೊಳ್ಳಲಾಗಿದೆ. ಬೆಳಗಿನ ಸಮಯದಲ್ಲಿ ಡ್ರೋನ್ ಇರುವಿಕೆಯ ಬಗ್ಗೆ ನಿರ್ದಿಷ್ಟ ಮಾಹಿತಿ ಪಡೆದ ಅಧಿಕಾರಿಗಳು ಜಂಟಿ ಶೋಧ ನಡೆಸಲು ಆರಂಭಿಸಿದರು.
ನಂತರ ಬೆಳಗ್ಗೆ 9:45 ಗಂಟೆ ಹೊತ್ತಿಗೆ ಶೋಧ ಕಾರ್ಯಾಚರಣೆಯು ನೆಸ್ಟಾ ಗ್ರಾಮದ ಪಕ್ಕದ ಜಮೀನಿನಲ್ಲಿ ಹಾರಾಡುತ್ತಿದ್ದ ಡ್ರೋನ್ ಅನ್ನು ವಶಪಡಿಸಿಕೊಳ್ಳುವ ಮೂಲಕ ಅಂತಿಮಗೊಂಡಿತು. ಈ ಕುರಿತು ಪೊಲೀಸ್ ಇಲಾಖೆ ಅಧಿಕೃತ ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ.
ಶುಕ್ರವಾರವು ಹರಾಟಡಿದ್ದ ಚೀನಾ ಡ್ರೋನ್
ಮೊನ್ನೆ ಶುಕ್ರವಾರವಷ್ಟೇ ಇದೇ ರಾಜ್ಯ ಪಂಜಾಬ್‌ನ ತರನ್ ಜಿಲ್ಲೆಯ ಅಂತಾರಾಷ್ಟ್ರೀಯ ಗಡಿಯ ಬಳಿ ಚೀನಾ ನಿರ್ಮಿತ ಪಾಕಿಸ್ತಾನಿ ಕ್ವಾಡ್‌ಕಾಪ್ಟರ್ ಡ್ರೋನ್ ಅನ್ನು ಬಿಎಸ್‌ಎಫ್ ಅಧಿಕಾರಿಗಳು ವಶಪಡಿಸಿಕೊಂಡಿದ್ದರು. ಅದರ ಬೆನ್ನಲ್ಲೆ ಭಾನುವಾರ ಮತ್ತೊಂದು ಡ್ರೋನ್ ಕಾಣಸಿಕೊಂಡಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

ಹೀಗೆ ಗಡಿ ಭಾಗದಲ್ಲಿ ಡ್ರೋನ್ ಹಾರಿಸುವ ಮೂಲಕ ಚೀನಾ ಶಾಂತಿ ಕದಡುವ ಯತ್ನ ಮಾಡುತ್ತಿದೆ. ಇದಕ್ಕೆ ಭಾರತ ತನಿಖೆ ನಡೆಸಿ ಬಳಿಕ ಉತ್ತರಿಸುವ ಸಾಧ್ಯತೆಗಳು ಇವೆ. ಇದೇ ತಿಂಗಳ ನವೆಂಬರ್ 3-4 ರಂದು ಮಧ್ಯರಾತ್ರಿಯಲ್ಲಿ, ಗಡಿ ಭದ್ರತಾ ಪಡೆ (BSF) ತಿಂಡಿವಾಲಾ ಗ್ರಾಮದ ಸಮೀಪ ಶಂಕಿತ ಡ್ರೋನ್‌ನ ಹಾರಾಟಕ್ಕೆ ಬ್ರೇಕ್ ಹಾಕಿದ್ದರು.
ಪಾಕಿಸ್ತಾನ್ ಡ್ರೋನ್ ವಶಕ್ಕೆ
ಪಂಜಾಬ್‌ನ ಫಿರೋಜ್‌ಪುರ ಜಿಲ್ಲೆಯ ಕೃಷಿ ಕ್ಷೇತ್ರದಿಂದ ಪಾಕಿಸ್ತಾನದ ಡ್ರೋನ್ ಅನ್ನು ವಶಪಡಿಸಿಕೊಳ್ಳಲಾಯಿತು. ವಶಪಡಿಸಿಕೊಂಡ ಡ್ರೋನ್ ಮಾಡೆಲ್ ಡಿಜೆಐ ಮಾವಿಕ್ 3 ಕ್ಲಾಸಿಕ್‌ನ ಕ್ವಾಡ್‌ಕಾಪ್ಟರ್ ಆಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದರು. ಇದೆಲ್ಲ ಬೆಳವಣಿಗೆಗಳ ಮತ್ತೆ ಭಾರತದ ಗಡಿ ಭಾಗದಲ್ಲಿ ಚೀನಾ ನಿರ್ಮಿತ ಡ್ರೋನ್ ಹಾರಾಟ ಘಟನೆ ಮರುಕಳಿಸುತ್ತಿವೆ. ಈ ಕುರಿತು ಭಾರತೀಯ ಸೇನೆ ಗಂಭೀರ ತನಿಖೆ ನಡೆಸುತ್ತಿದೆ.












Click it and Unblock the Notifications