ರೈಲ್ವೆ ತತ್ಕಾಲ್ ಬುಕಿಂಗ್‌ಗೆ ಐಡಿ ಪ್ರೂಫ್ ಬೇಕಾಗಿಲ್ಲ
ನವದೆಹಲಿ, ಜು. 17: ರೈಲ್ವೆ ತತ್ಕಾಲ್ ಟಿಕೆಟ್ ಪಡೆಯುವ ವಿಧಾನವನ್ನು ಮತ್ತಷ್ಟು ಸರಳ ಮಾಡಲಾಗಿದೆ. ಆನ್ ಲೈನ್ ನಲ್ಲಿ ಟಿಕೆಟ್ ಕಾಯ್ದಿರಿಸುವ ಅಥವಾ ನೇರವಾಗಿ ಪಡೆಯುವ ವೇಳೆ ಗುರುತಿನ ಚೀಟಿ ನೀಡಬೇಕು ಎಂಬ ಕಡ್ಡಾಯ ನಿಯಮವನ್ನು ಸಡಿಲ ಮಾಡಲಾಗುವುದು ಎಂದು ರೈಲ್ವೆ ಇಲಾಖೆ ತಿಳಿಸಿದೆ.
ಇದಕ್ಕೆ ಬದಲಾಗಿ ರೈಲ್ವೆ ಇಲಾಖೆ ತಿಳಿಸಿರುವ ಹತ್ತು ಗುರುತಿನ ಪತ್ರಗಳ ಪೈಕಿ ಯಾವೂದಾದರೂ ಒಂದನ್ನು ಪ್ರಯಾಣದ ವೇಳೆ ತೆಗೆದುಕೊಂಡುಹೋದರೆ ಸಾಕು. ಫೋಟೋ ಹೊಂದಿರುವ ಬ್ಯಾಂಕ್ ಪಾಸ್ ಬುಕ್ ಅಥವಾ ಕ್ರೆಡಿಟ್ ಕಾರ್ಡ್ ಇದ್ದರೂ ಸಾಕು ಎಂದು ತಿಳಿಸಲಾಗಿದೆ.[30 ಸೆಕೆಂಡ್ ನಲ್ಲಿ ತತ್ಕಾಲ್ ಟಿಕೆಟ್ ಬುಕ್ಕಿಂಗ್ ಹೇಗೆ?]

ಸಮಸ್ಯೆ ಏನಾಗುತ್ತಿತ್ತು?
ಟಿಕೆಟ್ ಕಾಯ್ದಿರಿಸುವಾಗ ಪ್ರಯಾಣಿಕರು ನೀಡಿದ ಗುರಿತಿನ ಚೀಟಿಯ ಪ್ರತಿಯನ್ನೇ ರೈಲ್ವೆ ಇಲಾಖೆ ಪ್ರಯಾಣದ ವೇಳೆ ಕೇಳುತ್ತಿತ್ತು. ಬೇರೆ ದಾಖಲೆಗಳನ್ನು ನೀಡಿದರೆ ಒಪ್ಪಿಕೊಳ್ಳುತ್ತಿರಲಿಲ್ಲ. ದಂಡ ವಿಧಿಸಲಾಗುತ್ತಿತ್ತು.[ರೈಲ್ವೆ ತತ್ಕಾಲ್ ಟಿಕೆಟ್ ಬುಕಿಂಗ್ ಸಮಯ ಬದಲು]
ಬದಲಾದ ನಿಯಮ ಪ್ರಯಾಣಿಕರಿಗೆ ಹರ್ಷ ತರಲಿದ್ದು ಸಮಸ್ಯೆ ಬಗೆಹರಿದಂತೆ ಆಗಿದೆ. ಕೆಲ ದಿನಗಳ ಹಿಂದೆ ರೈಲ್ವೆ ಸಚಿವ ಸುರೇಶ್ ಪ್ರಭು ಕಾಯ್ದಿರಿಸದ ಟಿಕೆಟ್‌ಗಳಿಗೂ ಮೊಬೈಲ್ ದೃಢೀಕರಣ ನ ನೀಡುವ ಅಪ್ಲಿಕೇಶನ್ ಬಿಡುಗಡೆ ಮಾಡಿದ್ದರು. ಇಲಾಖೆ ಒಂದೊಂದೆ ಆಧುನಿಕ ತಂತ್ರಗಳನ್ನು ಅಳವಡಿಸಿಕೊಂಡು ಮುಂದೆ ಸಾಗುತ್ತಿದೆ.












Click it and Unblock the Notifications