ರೈಲ್ವೆ ಇಲಾಖೆಯ ಸಮಗ್ರ ಮಾಹಿತಿಗೆ ಹೊಸ ಅಪ್ಲಿಕೇಶನ್
ನವದೆಹಲಿ, ಅ.14 : ರೈಲ್ವೆ ಇಲಾಖೆಯ ಸಮಗ್ರ ಮಾಹಿತಿ ಇನ್ನು ಮುಂದೆ ಅಂಗೈನಲ್ಲಿ ಲಭ್ಯವಾಗಲಿದೆ. ಇಂಡಿಯನ್ ರೈಲ್ವೆ ಕ್ಯಾಟರಿಂಗ್ ಮತ್ತು ಟೂರಿಸಂ ಕಾರ್ಪೋರೇಶನ್(ಐಆರ್‌ಸಿಟಿಸಿ) ಸೋಮವಾರ ವಿನೂತನ ಆಂಡ್ರಾಡ್ ಅಪ್ಲೀಕೇಶನ್ ಬಿಡುಗಡೆ ಮಾಡಿದೆ. ನೀವು ಕೇವಲ ಒಂದು ಕ್ಲಿಕ್ ನಲ್ಲಿ ಟಿಕೆಟ್ ಬುಕ್ ಮಾಡಬಹುದು, ಇಲ್ಲವೇ ಕ್ಯಾನ್ಸಲ್ ಸಹ ಮಾಡಬಹುದು.
ಈಗಾಗಲೇ ಗೂಗಲ್ ಪ್ಲೇಯಲ್ಲಿ 5 ಸಾವಿರ ಬಾರಿ ಅಪ್ಲಿಕೇಶನ್ ಡೌನ್ ಲೋಡ್ ಮಾಡಲಾಗಿದೆ. ಅಲ್ಲದೇ 4.2ರ ರೇಟಿಂಗ್ ಸಹ ಸಿಕ್ಕಿದೆ. ಹುಡುಕಾಟ, ಬುಕಿಂಗ್, ರದ್ದುಮಾಡುವುದು, ರೈಲಿನ ಮಾರ್ಗ ಮತ್ತು ಸಮಯಗಳನ್ನು ಅಪ್ಲಿಕೇಶನ್ ಸುಲಭವಾಗಿ ತಿಳಿಸಿಕೊಡುತ್ತದೆ.[ರೈಲಿನಲ್ಲಿ ಊಟ ಬೇಕೆ 139ಗೆ ಸಂದೇಶ ಕಳಿಸಿ]

ಡೌನ್ ಲೋಡ್ ಮಾಡಿಕೊಂಡವರು ಒಂದೆ ಬಾರಿಗೆ ಅಪ್ಲಿಕೇಶನ್ ತಲುಪಬಹುದು. ಹೊಸ ಬಳಕೆದಾರರು ಅಪ್ಲಿಕೇಶನ್ ಡೌನ್ ಲೋಡ್ ಮಾಡಿಕೊಂಡ ನಂತರ ರಿಜಿಸ್ಟರ್ ಮಾಡಿಕೊಳ್ಳುವುದು ಕಡ್ಡಾಯ.[ನಾಪತ್ತೆಯಾದ ರೈಲು ಬಿಹಾರದಲ್ಲಿ ಪತ್ತೆ]
ಅಲ್ಲದೇ ನಿಮ್ಮ ಮುಂದಿನ ಪ್ರಯಾಣದ ದಿನಾಂಕವನ್ನು ಇಲ್ಲಿ ಸುಲಭವಾಗಿ ವೀಕ್ಷಿಸಬಹುದು. ಆದರೆ ಗಮನಿಸಿ, ನೀವು ಬೆಳಗ್ಗೆ 8 ಗಂಟೆಯಿಂದ ರಾತ್ರಿ 12ಗಂಟೆ ಮಧ್ಯೆ ಅಪ್ಲಿಕೇಶನ್ ಬಳಸಲು ಸಾಧ್ಯವಿಲ್ಲ. ಒಂದೇ ಬಾರಿ ಒತ್ತಡ ಉಂಟಾಗಬಾರದು ಎಂಬ ಹಿನ್ನೆಲೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ. ಆಂಡ್ರಾಡ್ 4.1 ಮತ್ತು ನಂತರದ ಎಲ್ಲ ಮೊಬೈಲ್ ಗಳಿಗೆ ಅಪ್ಲಿಕೇಶನ್ ಸುಲಭವಾಗಿ ಡೌನ್ ಲೋಡ್ ಆಗುತ್ತದೆ ಎಂದು ತಿಳಿಸಲಾಗಿದೆ.












Click it and Unblock the Notifications