ಭಾರತ-ನೇಪಾಳ ಗಡಿಯಲ್ಲಿ ಪತ್ತೆಯಾಯ್ತೆ 7 ಬಾಂಬ್?
ಬಹ್ರೈಚ್(ಉತ್ತರ ಪ್ರದೇಶ)ಆಗಸ್ಟ್ 11: ನೇಪಾಳ ಮತ್ತು ಭಾರತದ ಗಡಿ ಪ್ರದೇಶವಾದ ಬಹ್ರೈಚ್(ಉತ್ತರ ಪ್ರದೇಶ) ಜಿಲ್ಲೆಯ ರುಪೈದಿಹಾ ಎಂಬಲ್ಲಿ ಏಳು ಅಪಾಯಕಾರಿ ಸ್ಫೋಟಕಗಳು ಪತ್ತೆಯಾಗಿದ್ದು, ಆತಂಕ ಹುಟ್ಟಿಸಿದೆ.
ಸ್ಫೋಟಕ ಪತ್ತೆಯಾಗುತ್ತಿದ್ದಂತೆಯೇ ಬಾಂಬ್ ನಿಷ್ಕ್ರಿಯ ದಳವನ್ನು ಕರೆಸಿದ ಪೊಲೀಸರು, ಸ್ಫೋಟಕಗಳನ್ನು ನಿಷ್ಕ್ರಿಯಗೊಳಿಸಿದ್ದಾರೆ. ಪತ್ತೆಯಾದ ಸ್ಫೋಟಕ ಬಾಂಬ್ ಹೌದೋ ಅಲ್ಲವೋ ಎಂಬ ಬಗ್ಗೆ ತನಿಖೆ ನಡೆಯಲಿದೆ.

ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.












Click it and Unblock the Notifications