Breaking: ದೆಹಲಿಯಲ್ಲಿ ಬಾಂಬ್ ರೀತಿ ಅನುಮಾನಾಸ್ಪದ ವಸ್ತು ಪತ್ತೆ
ನವದೆಹಲಿ, ಡಿಸೆಂಬರ್ 19: ದೆಹಲಿಯ ಪಶ್ಚಿಮ ವಿಹಾರ್‌ನಲ್ಲಿರುವ ರಾಡಿಸನ್ ಬ್ಲೂ ಹೋಟೆಲ್ ಬಳಿ ಸೋಮವಾರ ಬೆಳಗ್ಗೆ ಯಾರೂ ಗಮನಿಸದ ಬ್ಯಾಗ್‌ನಲ್ಲಿ ಬಾಂಬ್‌ನಂತಹ ಅನುಮಾನಾಸ್ಪದ ವಸ್ತು ಪತ್ತೆಯಾಗಿದೆ.
ಸರಿಯಾಗಿ ಬೆಳಗ್ಗೆ 9.04 ರ ಸುಮಾರಿಗೆ ದೆಹಲಿ ಪೊಲೀಸರಿಗೆ ಪಿಸಿಆರ್ ಕರೆ ಬಂದಿದ್ದು, ಪಶ್ಚಿಮ ವಿಹಾರ್‌ನ ರಾಡಿಸನ್ ಬ್ಲೂ ಹೋಟೆಲ್ ಬಳಿ ರಸ್ತೆಯಲ್ಲಿ ಯಾರೂ ಗಮನಿಸದ ಬ್ಯಾಗ್ ಬಿದ್ದಿತ್ತು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ಕರೆ ಮಾಡಿದ ಕೆಲವೇ ಕ್ಷಣಗಳಲ್ಲಿ ದೆಹಲಿ ಪೊಲೀಸ್ ತಂಡ ಮತ್ತು ಬಾಂಬ್ ಸ್ಕ್ವಾಡ್ ತಂಡವು ಸ್ಥಳಕ್ಕೆ ಧಾವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರಸ್ತೆಬದಿಯ ಬ್ಯಾಗ್‌ನ ಬಳಿ ಕಂಟೇನರ್‌ಗಳನ್ನು ಲಾಕ್ ಮಾಡಲು ಬಳಸುವ ಡಿಜಿಟಲ್ ಲಾಕ್ ಪತ್ತೆಯಾಗಿದೆ, ಆದರೆ ಒಳಗೆ ಯಾವುದೇ ಸ್ಫೋಟಕಗಳು ಇರಲಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಬಾಂಬ್ ಬೆದರಿಕೆ ಕರೆಯಿಂದ ಭೀತಿ:
ರಾಷ್ಟ್ರ ರಾಜಧಾನಿಯ ಪಶ್ಚಿಮ ವಿಹಾರ್‌ನ ರಾಡಿಸನ್ ಬ್ಲೂ ಹೋಟೆಲ್ ಬಳಿ ಪತ್ತೆಯಾದ ಅನುಮಾನಾಸ್ಪದ ವಸ್ತುವಿನ ಬಗ್ಗೆ ಬಂದ ಕರೆಯು ಸುತ್ತಮುತ್ತಲಿನ ಪ್ರದೇಶದಲ್ಲಿ ಕೆಲಹೊತ್ತು ಆತಂಕವನ್ನು ಸೃಷ್ಟಿ ಮಾಡಿತು. ಇನ್ನು, ಅನುಮಾನಾಸ್ಪದ ಬ್ಯಾಗ್ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದು, ಅದನ್ನು ಇರಿಸಿದವರ ಪತ್ತೆಗೆ ಬಲೆ ಬೀಸಿದ್ದಾರೆ.












Click it and Unblock the Notifications