ಶಾಕಿಂಗ್: ಭಾರತ ಕೂಡಾ ವಿಶ್ವದ 'ಡೇಂಜರ್' ದೇಶ

ನವದೆಹಲಿ, ಮಾ.4: ವಿಶ್ವದ ಜನತೆ ಅತ್ಯಂತ ಭಯಭೀತರಾಗಿ ಕಾಣುವ ರಾಷ್ಟ್ರಗಳ ಪೈಕಿ ಭಾರತವೂ ಸ್ಥಾನ ಪಡೆದುಕೊಂಡಿದೆ. ವಿಶ್ವದ ಮೂರನೇ ಅತ್ಯಂತ ಭಯೋತ್ಪಾದಕ ರಾಷ್ಟ್ರ ಎಂಬ ಅಪಕೀರ್ತಿಗೆ ಭಾರತ ಪಾತ್ರವಾಗಿದೆ. ಬಾಂಬ್ ಸ್ಫೋಟ ಪ್ರಕರಣಗಳ ಲೆಕ್ಕಾಚಾರ ಹಾಕಿ ಈ ಬಿರುದು ನೀಡಲಾಗಿದೆ. ಮೊದಲ ಸ್ಥಾನದಲ್ಲಿ ಪಾಕಿಸ್ತಾನವಿದ್ದರೆ ಎರಡನೇ ಸ್ಥಾನ ಇರಾಕ್ ಪಾಲಾಗಿದೆ.

ರಾಷ್ಟ್ರೀಯ ಬಾಂಬ್ ದತ್ತಾಂಶ ಕೇಂದ್ರ(NBDC) ಕಲೆ ಹಾಕಿರುವ ಮಾಹಿತಿಯ ಪ್ರಕಾರ ಯುದ್ಧ ಪೀಡಿತ ರಾಷ್ಟ್ರಗಳಾದ ಅಫ್ಘಾನಿಸ್ತಾನ ಹಾಗೂ ಗಲಭೆ ಪೀಡಿತ ಸಿರಿಯಾ ದೇಶವನ್ನು ಶಾಂತಿ ಪ್ರಿಯ ರಾಷ್ಟ್ರ ಭಾರತ ಮೀರಿಸಿದೆಯಂತೆ. ಕಳೆದ ವರ್ಷದ ಅಂಕಿ ಅಂಶದ ಪ್ರಕಾರ ಭಾರತದಲ್ಲಿ ಸುಮಾರು 212 ಬಾಂಬ್ ಸ್ಫೋಟ ಪ್ರಕರಣಗಳು ದಾಖಲಾಗಿದ್ದರೆ ತಾಲಿಬಾನಿಗಳ ನಾಡು ಅಫ್ಘಾನಿಸ್ತಾನದಲ್ಲಿ 108 ಸ್ಫೋಟಗಳು ಮಾತ್ರ ಸಂಭವಿಸಿವೆ.

ಬಾಂಗ್ಲಾದೇಶದಲ್ಲಿ 75 ಸ್ಫೋಟಗಳು ಸಂಭವಿಸಿತ್ತು. ಕೆಮಿಕಲ್ ಬಾಂಬ್ ಬಳಕೆ, ಗಲಭೆ, ದೊಂಬಿಗೆ ಒಳಪಟ್ಟು ಅಮಾಯಕರ ಪ್ರಾಣ ಬಲಿಗೆ ಕಾರಣವಾಗಿದ್ದ ಸಿರಿಯಾದಲ್ಲಿ 36 ಬಾಂಬ್ ಸ್ಫೋಟಗಳು ಮಾತ್ರ ಸಂಭವಿಸಿದೆ. ಸಿರಿಯಾ ಅಧ್ಯಕ್ಷ ಬಷರ್ ಅಲ್ ಅಸಾದ್ ವಿರುದ್ಧ ಬಂಡಾಯ ಉಂಟಾಗಿ ಸಾರ್ವಜನಿಕರ ಬಲಿಗೆ ಕಾರಣವಾಗಿತ್ತು.

Bomb blasts: India 3rd most dangerous country in the world!

ಭಾರತದಲ್ಲಿ ಸುಮಾರು 241 ಬಾಂಬ್ ಸ್ಫೋಟಗಳು ಸಂಭವಿಸಿದ್ದು ಸುಮಾರು 113 ಸಾವು ಹಾಗೂ 419ಕ್ಕೂ ಅಧಿಕ ಮಂದಿಗೆ ಗಾಯಗಳಾಗಿದೆ. 2013ರಲ್ಲಿ 212 ಸ್ಫೋಟಗಳಲ್ಲಿ 130 ಸಾವುಗಳು 466 ಗಾಯಗೊಂಡಿದೆ.

ಈಶಾನ್ಯ ರಾಜ್ಯಗಳಲ್ಲಿ(ಅಸ್ಸಾಂ, ಛತ್ತೀಸ್ ಗಢ ಹಾಗೂ ಜಾರ್ಖಂಡ್) ಬಾಂಬ್ ಸ್ಫೋಟ ಅಧಿಕವಾಗಿ ಕಂಡು ಬಂದಿದೆ. ಇದರ ಜತೆಗೆ ಮಾವೋವಾಗಿ ಪೀಡಿತ ರಾಜ್ಯಗಳಲ್ಲಿ(ಬಿಹಾರ, ಛತ್ತೀಸ್ ಗಢ ಹಾಗೂ ಜಾರ್ಖಂಡ್) ಶೇ 80ರಷ್ಟು IED ದಾಳಿಗಳು ನಡೆದಿವೆ. 2012ಕ್ಕೆ ಹೋಲಿಸಿದರೆ 2013ರಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಬಾಂಬ್ ಸ್ಫೋಟ ಪ್ರಕರಣಗಳು ಶೇ 50 ರಷ್ಟು ಹೆಚ್ಚಾಗಿರುವುದು ಆತಂಕಕಾರಿಯಾಗಿದೆ ಎಂದು ಎನ್ ಬಿಡಿಸಿ ವರದಿ ಹೇಳಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+