ಬೋಧಗಯಾ ಮೇಲೆ ಆದಾಯ ತೆರಿಗೆ ಇಲಾಖೆ ಕಣ್ಣು

ಬಿಹಾರ, ಸೆ.26 : ಎರಡು ತಿಂಗಳ ಹಿಂದೆ ಉಗ್ರರ ದಾಳಿಗೆ ತುತ್ತಾಗಿದ್ದ ಬೌದ್ಧ ಧರ್ಮೀಯರ ಪವಿತ್ರ ಕ್ಷೇತ್ರ ಬೋಧಗಯಾದ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ಕಣ್ಣು ಬಿದ್ದಿದೆ. ಭಕ್ತರಿಂದ ಸಂಗ್ರಹಿಸುವ ದಾನ ಮತ್ತು ಖರ್ಚಿನ ವಿವರ ಸಲ್ಲಿಸುವಂತೆ ನೋಟಿಸ್ ಜಾರಿಗೊಳಿಸಿದೆ.

ಬುಧವಾರ ಬೋಧಗಯಾ ಆಡಳಿತ ಮಂಡಳಿ(ಬಿಡಿಎಂಸಿ)ಗೆ ನೋಟಿಸ್ ಜಾರಿಗೊಳಿಸಿರುವ ಆದಾಯ ತೆರಿಗೆ ಇಲಾಖೆ, ಭಕ್ತರಿಂದ ಸಂಗ್ರಹಿಸುವ ದಾನದ ಮೊತ್ತ ಮತ್ತು ಖರ್ಚಿನ ಬಾಬ್ತನ್ನು ಸಲ್ಲಿಸುವಂತೆ ನೋಟಿಸ್ ನಲ್ಲಿ ತಿಳಿಸಿದೆ.

Bodh Gaya

ಆದಾಯ ತೆರಿಗೆ ಇಲಾಖೆ ದೇವಾಲಯಕ್ಕೆ ನೋಟಿಸ್ ಜಾರಿಗೊಳಿಸಿರುವುದನ್ನು ಬಿಡಿಎಂಸಿ ಅಧ್ಯಕ್ಷ ನಾರ್ಗೆ ದೊರ್ಜಿ ಖಚಿತಪಡಿಸಿದ್ದಾರೆ. ಬೋಧಗಯಾ ದೇವಾಸ್ಥಾನ ನಿರ್ವಹಣಾ ಕಾಯ್ದೆ ಜಾರಿಗೊಂಡ ನಂತರ, 64 ವರ್ಷಗಳಲ್ಲಿ ಇದೇ ಮೊದಲ ಬಾರಿ ಐಟಿ ನೋಟಿಸ್ ಬಂದಿದೆ ಎಂದು ಅವರು ಹೇಳಿದ್ದಾರೆ.

ಆದಾಯ ತೆರಿಗೆ ಇಲಾಖೆ ನೋಟಿಸ್ ಗೆ ಬಿಡಿಎಂಸಿ ಉತ್ತರ ನೀಡಿದ್ದು, ಸರ್ಕಾರದಿಂದ ನೇಮಿತವಾಗಿರುವ ಬೋಧಗಯಾ ದೇವಸ್ಥಾನ ನಿರ್ವಹಣಾ ಸಮಿತಿ ಕೇವಲ ದಾನದ ಮೂಲಕ ಹಣ ಸಂಗ್ರಹಿಸುತ್ತದೆ. ಆದ್ದರಿಂದ ಇದು ತೆರಿಗೆ ವ್ಯಾಪ್ತಿಗೆ ಒಳಪಡುವುದಿಲ್ಲ ಎಂದು ತಿಳಿಸಿದೆ.

2,550 ವರ್ಷಗಳ ಹಿಂದೆ ಗೌತಮ ಬುದ್ಧನಿಗೆ ಜ್ಞಾನೋದಯ ಪ್ರಾಪ್ತಿಯಾದ ಸ್ಥಳದಲ್ಲಿ ಸುಮಾರು 1,500 ವರ್ಷ ಪುರಾತನವಾದ ದೇವಸ್ಥಾನವಿದೆ. ಪ್ರತಿವರ್ಷ ಕೋಟ್ಯಾಂತರ ಭಕ್ತರು ಇಲ್ಲಿಗೆ ಭೇಟಿ ನೀಡುತ್ತಾರೆ.

2010ರಿಂದ ದೇವಾಲಯದ ಆಡಳಿತ ಮಂಡಳಿ ಆನ್ ಲೈನ್ ಮೂಲಕ ದಾನ ಸ್ವೀಕೃತಿ ವ್ಯವಸ್ಥೆಯನ್ನು ಆರಂಬಿಸಿದೆ. ಇದರಿಂದಾಗಿಯೇ ಐಟಿ ಅಧಿಕಾರಿಗಳು ನೋಟಿಸ್ ನೀಡಿರಬಹುದು ಎಂದು ತಿಳಿದು ಬಂದಿದೆ. (ಬೋಧಗಯಾ ದೇವಸ್ಥಾನದ ಬಳಿ ಸರಣಿ ಬಾಂಬ್ ಸ್ಪೋಟ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+