ಲೋಕಸಭಾ ಚುನಾವಣೆ ಎಫೆಕ್ಟ್: ಕಪ್ಪುಹಣ ವಾಪಸ್ ಹೆಚ್ಚಳ

Black Money to return India by next Lok Sabha polls - Rupee value on correction mode
ಬೆಂಗಳೂರು, ಸೆ.12: ಕೆಲವೇ ಮಂದಿ ಭಾರತೀಯರು ಸ್ವಿಸ್ ಬ್ಯಾಂಕುಗಳಲ್ಲಿ ಹುದುಗಿಸಿಟ್ಟಿರುವ ಕಪ್ಪುಹಣವನ್ನು ಸ್ವದೇಶಕ್ಕೆ ತರುವ ಪ್ರಯತ್ನ ಈಗ ಹೆಚ್ಚಾಗಿದೆ. ಅಷ್ಟೇ ಅಲ್ಲ ಈ ವರ್ಷಾಂತ್ಯ ಮತ್ತು ಮುಂದಿನ ವರ್ಷದ ಆರಂಭದಲ್ಲಿ ಭಾರತಕ್ಕೆ ಕಪ್ಪುಹಣ ವಾಪಸಾಗುವ ಪ್ರಮಾಣ ಹೆಚ್ಚಾಗಲಿದೆ ಎಂದು ಆರ್ಥಿಕ ತಜ್ಞರು ವಿಶ್ಲೇಷಣೆ ಮಾಡಿದ್ದಾರೆ.

ವಿದೇಶದಲ್ಲಿರುವ ಕಪ್ಪು ಹಣದ ಪೈಕಿ 100 ಬಿಲಿಯನ್ ಡಾಲರ್ ಹಣ ವಾಪಸ್ ತಂದರೂ ಸಾಕು ಭಾರತ ಈಗಿನ ಆರ್ಥಿಕ ಸಂಕಷ್ಟದಿಂದ ಪಾರಾಗಲು ಸಾಧ್ಯ ಎಂಬ ಮಾತು ಕೇಳಿಬರುತ್ತಿದೆ. ಒಂದು ಅಂದಾಜಿನ ಪ್ರಕಾರ, ಭಾರತದ ಅಧಿಕಾರಿಗಳು, ರಾಜಕಾರಣಿಗಳು ಮತ್ತು ಉದ್ಯಮಿಗಳು ವಿದೇಶಿ ಬ್ಯಾಂಕುಗಳಲ್ಲಿ ಒಂದು ಟ್ರಿಲಿಯನ್ ಡಾಲರಿಗೂ ಹೆಚ್ಚು ಮೊತ್ತದ ಹಣವನ್ನು ಠೇವಣಿ ಇಟ್ಟಿದ್ದಾರಂತೆ.

ಒಂದು ವೇಳೆ ಕಪ್ಪು ಹಣ ವಾಪಸಾತಿ ನಿಜವೇ ಆಗಿದ್ದರೆ ನಿಜಕ್ಕೂ ಇದು ಅತ್ಯಂತ ಸಕಾಲಿಕ ಎನಿಸಿಕೊಳ್ಳುತ್ತದೆ. ಏಕೆಂದರೆ ಅತ್ತ ಡಾಲರ್ ಎದುರು ರೂಪಾಯಿ ಸಾರ್ವಕಾಲಿಕ ದಾಖಲೆಯ ಮಟ್ಟಕ್ಕೆ ಕುಸಿದಿರುವಾಗ ನಮ್ಮದೇ ಹಣ ದೇಶದಲ್ಲಿ ಚಲಾವಣೆಗೆ ಬಂದರೆ ಅದು ಚೇತೋಹಾರಿಯಾಗಿರುತ್ತದೆ. ಡಾಲರ್ ಎದುರು ರೂಪಾಯಿಯ ಮೌಲ್ಯ ಚೇತರಿಸಿಕೊಳ್ಳುತ್ತಿರುವುದಕ್ಕೆ ಇದು ಪ್ರಮುಖ ಕಾರಣವಾಗಬಹುದು ಎಂದು ಸಮಾಧಾನ ಪಡುವಂತಾಗುತ್ತದೆ.

ಈಗ ಡಾಲರ್ ಎದುರು ರೂಪಾಯಿ ಮೌಲ್ಯ 62ಕ್ಕೆ ಏರಿದೆ. ಇದರ ಒಟ್ಟಾರೆ ಸಾರಾಂಶ ಏನೆಂದರೆ ಭಾರತೀಯರು ವಿದೇಶದಲ್ಲಿಟ್ಟಿದ್ದ ಕಪ್ಪು ಹಣದ ಪೈಕಿ ಕೇವಲ ಶೇ. 15-20ರಷ್ಟು ಹಣವನ್ನೇ ವಾಪಸ್ ತಂದರೂ ಸಾಕಾದೀತು ಎಂದು ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಆದರೆ ಅಸಲಿ ವಿಷಯ ಅದಲ್ಲ. ವಿದೇಶಗಳಲ್ಲಿ ಕಪ್ಪುಹಣ ಠೇವಣಿಯಿರುವ ಬಗ್ಗೆ ಮಾತನಾಡುವಾಗ 'ಕಪ್ಪು ಹಣ ಹೆಚ್ಚಿನ ಪ್ರಮಾಣದಲ್ಲಿ ಠೇವಣಿಯಿಡುವುದು ಕಾಂಗ್ರೆಸ್ ನಾಯಕರೇ' ಎಂಬ ಮಾತುಗಳು ಸರ್ವೆ ಸಾಮಾನ್ಯವಾಗಿ ಕೇಳಿಬರುತ್ತದೆ. ಮುಂದಿನ ವರ್ಷದ ಆರಂಭದಲ್ಲಿ ಲೋಕಸಭೆ ಚುನಾವಣೆ ನಡೆಯಲಿದೆ. ಆ ವೇಳೆಗೆ ಚುನಾವಣೆ ಖರ್ಚಿಗಾಗಿ ಸುಮಾರು ಶೇ. 40 ಭಾಗ ಕಪ್ಪು ಹಣ ಭಾರತಕ್ಕೆ ವಾಪಸ್ ಬರಲಿದೆ ಎಂದು ಅಂದಾಜಿಸಲಾಗಿದೆ. ಅದರಿಂದ ಡಾಲರ್ ಮೌಲ್ಯ 50 ರೂ. ಗಿಂತಲೂ ಕೆಳಗೆ ಇಳಿಯುವ ಸಾಧ್ಯತೆಯಿದೆ ಎಂದು ಆರ್ಥಿಕ ತಜ್ಞರು ಲೆಕ್ಕಾಚಾರ ಹಾಕಿದ್ದಾರೆ.

ರೂಪಾಯಿ ಬೆಲೆ ಹೆಚ್ಚಿಸಿ, ಡಾಲರ್ ಬೆಲೆಯನ್ನು ಇಳಿಸಿ - ಅದರ ರಾಜಕೀಯ ಲಾಭವನ್ನು ಪಡೆದುಕೊಳ್ಳಲು ಯುಪಿಎ ಸರ್ಕಾರ ಸಹ ಆಲೋಚಿಸುತ್ತಿದೆ. ಪರಿಸ್ಥಿತಿಯ ಲಾಭ ಪಡೆದುಕೊಳ್ಳಲು ಸೂಕ್ತ ಅವಕಾಶಕ್ಕೆ ಕಾಯಲಾಗುತ್ತಿದೆ ಎಂದೂ ಹೇಳಲಾಗುತ್ತಿದೆ. ಇದೆಲ್ಲ ಸಾಧ್ಯವೇ ಆದರೆ ಡಾಲರ್ ಎದುರು ರೂಪಾಯಿ ಮೌಲ್ಯ 100 ರೂಗೆ ಏರುವ ಅಪಾಯ ತಪ್ಪಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+