ಗೋಧ್ರಾದಲ್ಲಿ 2002ರ ನಂತರ ಮೊದಲ ಬಾರಿಗೆ ಬಿಜೆಪಿ ಗೆಲುವು

ಗೋಧ್ರಾ, ಡಿಸೆಂಬರ್ 18: 2002ರ ಬಳಿಕ ಮೊದಲ ಬಾರಿಗೆ ಗುಜರಾತ್ ನ ಗೋಧ್ರಾ ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಸಾಧಿಸಿದೆ.

2002ರಲ್ಲಿ ನಡೆದಿದ್ದ ಗೋಧ್ರಾ ಹತ್ಯಾಕಾಂಡ ಹಾಗೂ ಆ ನಂತರದ ಉಂಟಾದ ಗಲಭೆಗಳ ನಂತರ ಆ ಕ್ಷೇತ್ರದಲ್ಲಿ ಬಿಜೆಪಿಗೆ ಗೆಲುವು ಮರೀಚಿಕೆಯಾಗಿತ್ತು. ಆದರೆ ಈ ಬಾರಿ ಸೋಲಿನ ಸರಣಿಯನ್ನು ಕಳಚಿಕೊಂಡಿರುವ ಬಿಜೆಪಿ ಗೋಧ್ರಾದಲ್ಲಿ ಗೆಲುವು ಸಾಧಿಸಿದೆ.

ಗೋಧ್ರಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಬಿಜೆಪಿ ಸಿ.ಕೆ.ರೌಲ್ಜಿ ಅಲ್ಪ ಮತಗಳ ಅಂತರದಿಂದಾದರೂ ಬಿಜೆಪಿಗೆ ಗೆಲುವು ತಂದಿತ್ತಿದ್ದಾರೆ. ತಮ್ಮ ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್ ನ ಲಾಲಾಬಾಯ್ ಅವರನ್ನು 258 ಮತಗಳ ಅಂತರದಿಂದ ಸೋಲಿಸಿದ್ದಾರೆ.

BJP wins in Godhra first time after 2002

ಭಾರಿ ಕುತೂಹಲ ಕೆರಳಿಸಿದ್ದ ಈ ಕ್ಷೇತ್ರದಲ್ಲಿ ಕೊನೆಯ ಸುತ್ತಿನವರೆಗೆ ಗೆಲುವು ಚಂಚಲೆಯಾಗಿತ್ತು, ಆದರೆ ಅಂತಿಮವಾಗಿ ಬಿಜೆಪಿ ಪಾಲಿಗೆ ಜಯ ಒಲಿಯಿತು. ಆ ಮೂಲಕ 15 ವರ್ಷಗಳ ಸೋಲಿನ ಸರಪಣಿಯನ್ನು ಬಿಜೆಪಿ ಕಡಿದುಹಾಕಿತು.

ಅಯೋಧ್ಯೆಯಿಂದ ಸಾಬರಮತಿ ಎಕ್ಸ್‌ಪ್ರೆಸ್ ರೈಲಿನಲ್ಲಿ ವಾಪಾಸಾಗುತ್ತಿದ್ದ ಕರಸೇವಕರನ್ನು ಗೋಧ್ರಾದಲ್ಲಿ ಜೀವಂತವಾಗಿ ಸುಟ್ಟುಹಾಕಲಾಗಿತ್ತು. ಈ ಘಟನೆ ನಂತರ ಗುಜರಾತ್‌ನಲ್ಲಿ ಕೋಮು ಗಲಭೆಗಳು ಹುಟ್ಟಿಕೊಂಡಿತ್ತು. ಸರ್ಕಾರಿ ಅಂಕಿ ಸಂಖ್ಯೆಗಳ ಪ್ರಕಾರ 739 ಮುಸ್ಲಿಂರು ಹಾಗೂ 254 ಮಂದಿ ಹಿಂದೂಗಳು ಗಲಭೆಯಲ್ಲಿ ಪ್ರಾಣ ಕಳೆದುಕೊಂಡಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+